ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯ ಮುಂದೆ ಎಲ್ಲೆಂದರಲ್ಲಿ ಕಸದ ರಾಶಿ : ರೋಗ ಹರಡುವ ಸಾಧ್ಯತೆ

WhatsApp Group Join Now

ರಾಮದುರ್ಗ ಪಟ್ಟಣದ ಆಂಜನೇಯ ನಗರದಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ ಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಮುಂದೆ ಎಲ್ಲಿಂದರಲ್ಲಿ ಕಸ ಚಲ್ಲಿರುವ ದೃಶ್ಯ ಕಂಡು ಬರುತ್ತದೆ

ಇದನ್ನೆಲ್ಲ ನೋಡಿದರೆ ಸ್ವಚ್ಛತೆ ಕಾಣದೆ ಮರಿ ಮಾಚಿದೆ ಎಂದು ತಿಳಿಯುತ್ತದೆ ಬಾಲಕರ ವಸತಿ ನಿಲಯ
ಇದಕ್ಕೆ ಸಂಬಂಧಪಟ್ಟಂತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸ್ವಚ್ಛತೆ ಕಾಪಾಡಬೇಕಾಗಿದೆ ಬಾಲಕರ ವಸತಿ ನಿಲಯ ಮುಂದೇನೆ ಅಂಗನವಾಡಿ ಕೇಂದ್ರ ಇದ್ದು ಮಕ್ಕಳಿಗೆ ರೋಗ ಹರಡುವ ಸಾಧ್ಯತೆ ಇದೆ

‘ಹಸಿ ಕಸ, ಒಣ ಕಸ, ಪ್ಲಾಸ್ಟಿಕ್ ಸೇರಿದಂತೆ ವಿವಿಧ ರೀತಿಯ ಇಂತಹ ತ್ಯಾಜ್ಯ ತಂದು ಎಸೆಯುವುದರಿಂದ ಕಸದ ರಾಶಿಗಳು, ಕೊಳಚೆಯ ತಾಣವೂ ಆಗಿವೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಡೆಂಗಿ, ಮಲೇರಿಯಾ, ಚಿಕುನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭಯದಲ್ಲೇ ಬದುಕುವಂತಾಗಿದೆ’
ಆದಷ್ಟು ಬೇಗ ಅಧಿಕಾರಿಗಳು ಸ್ವಚ್ಛತೆ ಕಡೆ ಗಮನ ಹರಿಸಬೇಕಾಗಿದೆ ಎಲ್ಲೆಂದರಲ್ಲಿ ಕಸ ಚೆಲುವ ಬದಲು ಪುರಸಭೆಯವರಿಗೆ ಹೇಳಿದರೆ ಕಸದ ಗಾಡಿಯನ್ನು ಕೊಟ್ಟು ಕಳಿಸುತ್ತಾರೆ ಆ ಗಾಡಿಯಲ್ಲಿ ಹಸಿ ಕಸ ಹಾಗೂ ಒಣ ಕಸ ಬೇರೆ ಮಾಡಿ ಹಾಕಿದರೆ ಸಾಕು ಇದನ್ನೆಲ್ಲ ಬಿಟ್ಟು ತಮ್ಮ ಮನಸಿಗೆ ಬಂದಂತೆ ಎಲ್ಲೆಂದರಲ್ಲಿ ಕಸ ಚೆಲ್ಲುತ್ತಿದ್ದಾರೆ

About The Author