
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶ್ರೀ ಬಸವೇಶ್ವರ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಶಾಲಾ ಶಿಕ್ಷಕರು ಹಾಗೂ ಮಕ್ಕಳು ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡ ದೇವತೆ ಭುವನೇಶ್ವರಿಯ ಭಾವಚಿತ್ರದೊಂದಿಗೆ ಮೆರವಣಿಗೆ ಅತಿ ವಿಜೃಂಭಣೆಯಿಂದ ಜರಗಿತ್ತು. ನಂತರ ಪ್ರಥಮ ಬಾರಿಗೆ ದಿನಾಂಕ 01-11-2024 ರಂದು ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿಗಳಾದ ಶ್ರೀ ಬಾಳೇಶ ಕತ್ತಿ, ದುಂಡಪ್ಪ ಹಂಜಿ, ರುದ್ರಪ್ಪ ಹಂಜಿ, ಅಪ್ಪಣ್ಣ ಗೋಡಿ, ಸುರೇಶ ತೆಗ್ಗಿಹಾಳ, ಪ್ರಕಾಶ ಬೊಮ್ಮಣ್ಣವರ, ಪುಂಡಲಿಕ ಕರಿಗಾರ, ಮಾರುತಿ ಜೆಟ್ಟನ್ನವರ, ಮಲ್ಲಿಕಾರ್ಜುನ ಹಂಜಿ, ರಾಮಣ್ಣ ಹಂಜಿ, ಶಂಕರ ಕತ್ತಿ, ಪ್ರಧಾನ ಗುರುಗಳಾದ ಮಂಜುನಾಥ ದುರಗನ್ನವರ, ಸಂಜು ಪತ್ತಾರ, ಶಿವಾನಂದ ಕಟಕೋಳ ಶಿಕ್ಷಕಿಯರಾದ ಚನ್ನಮ್ಮ ಟೀಚರ್ ಅನಿತಾ ಟೀಚರ್ ನಿರ್ಮಲ ಟೀಚರ್ ಯಮುನಾ ಟೀಚರ್ ಲಕ್ಷ್ಮಿ ಟೀಚರ್ ಬೇರೆ ಬೇರೆ ಶಾಲೆಯ ಶಿಕ್ಷಕರು ಮತ್ತು ಸುತ್ತಮುತ್ತಲಿನ ಎಲ್ಲಾ ಶಾಲಾ ಮಕ್ಕಳು ಭಾಗವಹಿಸಿದ್ದರು ಮತ್ತು ಶಾಲಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರು ಭಾಗವಹಿಸಿದ್ದರು.


