ಶ್ರೀ ಕ್ಷೇತ್ರ ಗೊಡಚಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕು ಶ್ರೀ ಕ್ಷೇತ್ರ ಗೊಡಚಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮ ರವಿವಾರ ದಿನಾಂಕ 15-12-2024 ರಂದು ಸಾಯಂಕಾಲ 5 ಗಂಟೆಗೆ ವೀರಗಾಸೆ, ವೀರ ಪುರವಂತರು ಸಂಬಾಳ, ನಂದಿಕೋಲು, ಸಕಲ ವಾದ್ಯಗಳೊಂದಿಗೆ ‘ಮಹಾ ರಥೋತ್ಸವ’ವು ಜರುಗುವದು ಹಾಗೂ ಗುರುವಾರ ದಿನಾಂಕ 19-12-2024 ರಂದು ಸಾಯಂಕಾಲ 6:00 ಗಂಟೆಗೆ ಲಕ್ಷದೀಪೋತ್ಸವ ಕಾರ್ಯಕ್ರಮ ಜರುಗುವದು.

ಪ್ರತಿವರ್ಷ ಜಾತ್ರೆಯ ಪ್ರಾರಂಭದ ಅಂಗವಾಗಿ ಶುಕ್ರವಾರ ದಿನಾಂಕ 06-12-2024 ರಂದು ಗೊಡಚಿ ಶ್ರೀವೀರಭದ್ರೇಶ್ವರ ದೇವಸ್ಥಾನದಿಂದ ವೀರಗಾಸೆ ವೀರಪುರವಂತರ ಸಮೇತವಾಗಿ ಪಲ್ಲಕ್ಕಿ ಉತ್ಸವವು ತೊರಗಲ್ ಶ್ರೀ ಭೂತನಾಥ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಜಾತ್ರೆಯ ಕಾರ್ಯಕ್ರಮಗಳನ್ನು ಮುಗಿಸಿ ಶನಿವಾರ ದಿನಾಂಕ 07-12-2024 ರಂದು ಸಾಯಂಕಾಲ ಮರಳಿ ಶ್ರೀ ಕ್ಷೇತ್ರ ಗೊಡಚಿಗೆ ಬಂದು ಬುಧವಾರ ದಿನಾಂಕ 11-12-2024 ರವರೆಗೆ ಪಲ್ಲಕ್ಕಿ ಉತ್ಸವ ಜರುಗುವದು. ಗುರುವಾರ ದಿನಾಂಕ 12-12-2024 ರಿಂದ ಶನಿವಾರ ದಿನಾಂಕ 14-12-2024 ರವರೆಗೆ ಸಾಯಂಕಾಲ ಹೃಚ್ಚಾಯ ಉತ್ಸವ ಜರುಗುವದು. ರವಿವಾರ ದಿನಾಂಕ 15-12-2024 ರಂದು ಬೆಳಿಗ್ಗೆ 12 ಗಂಟೆ 5 ನಿಮಿಷಕ್ಕೆ 11 ಜನ ಶಾಸ್ತಿಗಳಿಂದ ಶ್ರೀ ವೀರಭದ್ರಸ್ವಾಮಿಯ ಹಾಗೂ ಶ್ರೀ ಭದ್ರಕಾಳಿ ಮಾತೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಮ್ಮನವರಿಗೆ ಕುಂಕುಮಾರ್ಚನೆ ಆದಬಳಿಕ ಮಹಾಮಂಗಳಾರತಿ ಜರುಗುವದು. ಅದೇ ದಿನ ಸಾಯಂಕಾಲ 5-00 ಗಂಟೆಗೆ “ಮಹಾರಥೋತ್ಸವ” ಅತೀ ವಿಜೃಂಭಣೆಯಿಂದ ಜರುಗುವದು. ಗುರುವಾರ ದಿನಾಂಕ 19-12-2024 ರಂದು “ತೇರಿನ (ರಥದ) ಕಳಸ” ವಿಸರ್ಜನೆ ಮಾಡಲಾಗುವದು. ಅದೇ ದಿನ ಸಾಯಂಕಾಲ 6-00 ಗಂಟೆಗೆ ಲಕ್ಷದೀಪೋತ್ಸವ ಸಮಾರಂಭ ಜರುಗುವದು.

ಸಕಲ ಸದ್ಭಕ್ತರು ರಥೋತ್ಸವ ಹಾಗೂ ಲಕ್ಷ ದೀಪೋತ್ಸವ ಸಮಾರಂಭಕ್ಕೆ ಕುಟುಂಬ ಸಮೇತ ಆಗಮಿಸಿ ಎಲ್ಲ ಮಂಗಲ ಕಾರ್ಯಗಳಲ್ಲಿ ಭಾಗವಹಿಸಿ “ಮಹಾಪ್ರಸಾದ” ಸ್ವೀಕರಿಸಿ ತಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಲು ಕೋರಲಾಗಿದೆ.

“ಅನ್ನದಾನಂ ಪರಂ ದಾನಂ, ಮನ್ನಣೆ ಪಡೆಯಲು ಅನ್ನದಾನಿಯಾಗು, ಅನ್ನವನ್ನೀಯುವವನೆ ಪುಣ್ಯವಂತ, ದಾನವೇ ಧರ್ಮದ ನಾಂದಿ”

ಎಂಬ ನಾಣ್ಣುಡಿಯಂತೆ ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗುವದು. ಶ್ರೀ ಕ್ಷೇತ್ರಕ್ಕೆ ಲಕ್ಷಾವಧಿ ಭಕ್ತರು ಆಗಮಿಸುವದರಿಂದ ನಿರಂತರ (ನಿತ್ಯ) ಅನ್ನದಾಸೋಹಕ್ಕೆ ತುಂಬು ಹೃದಯದಿಂದ ಬೆಲ್ಲ, ಅಕ್ಕಿ, ರವಾ, ತೊಗರಿಬೆಳೆ, ಸಕ್ಕರೆ, ಗೋಧಿ, ಜೋಳ, ಎಣ್ಣೆ ಮುಂತಾದ ಧಾನ್ಯ ಹಾಗೂ ಹಣ ದಾನ (ದೇಣಿಗೆ) ರೂಪದಲ್ಲಿ “ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಶ್ರೀಕ್ಷೇತ್ರ ಗೊಡಚಿ” ಇವರಿಗೆ ಕೊಟ್ಟು ಪಾವತಿಯನ್ನು ಪಡೆದುಕೊಳ್ಳಬೇಕಾಗಿ ಸದ್ಭಕ್ತರಲ್ಲಿ ವಿನಂತಿ. ಇಂತಹ ಅಮೂಲ್ಯ ಸೇವಾ ಕಾರ್ಯವನ್ನು ಜಗಜ್ಯೋತಿ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಅಮರಗೋಳ ಹುಬ್ಬಳ್ಳಿ-ಧಾರವಾಡ, ಶ್ರೀಬಸವೇಶ್ವರ ಮಾರ್ಕೆಟಯಾರ್ಡ ಮಹಾಲಿಂಗಪೂರ, ಸವದತ್ತಿ, ಕಟಕೂಳ, ರಾಮದುರ್ಗ, ನರಗುಂದ, ಚಿಕ್ಕನರಗುಂದ, ಗದಗ, ಲೋಕಾಪುರ, ಕಲಾದಗಿ, ಬಾಗಲಕೋಟ ಹಾಗೂ ಇನ್ನೂ ಅನೇಕ ಊರುಗಳ ಸದ್ಭಕ್ತರು ಪ್ರತಿವರ್ಷ ದಾಸೋಹ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ.

ರವಿವಾರ ದಿನಾಂಕ 15-12-2024 ರಂದು ನಡೆಯುವ ಜಾತ್ರೆಯ ಹಾಗೂ ಲಕ್ಷದಿಪೋತ್ಸವ ದಿನದಂದು ನಡೆಯುವ ಅನ್ನದಾಸೋಹ ಸೇವೆಯನ್ನು ಶರಣರಾದ ಶ್ರೀ ವಿದ್ಧಲ ಸಹೋದರರು. ಅಂ॥ ಶ್ರೀ ಸುರೇಶ ತಂದಿ ಗುರಪ್ಪ ವಿಜಾಪೂರ, ಹೋಲಸೇಲ ವ್ಯಾಪಾರಸ್ಥರು ಮತ್ತು ಗುರು-ಹಿರಿಯರು ಸಾ|| ಬಾಗಲಕೋಟ, ಶರಣರಾದ ಶ್ರೀ ರುದ್ರಯ್ಯ ಕಾಡಯ್ಯ ಮಠದ ಹಾಗೂ ಕುಟುಂಬದವರು ಸಾ॥ ಲೋಕಾಪುರ, ಶರಣರಾದ ಶ್ರೀ ಗಂಗಾಧರ ಈರಪ್ಪ ಮುಳ್ಳೂರ ಹಾಗೂ ಕುಟುಂಬದವರು ಸಾ॥ ರಾಮದುರ್ಗ, ಶರಣರಾದ ಶ್ರೀಮತಿ ಶಕುಂತಲಾ ಕೋಂ. ಸುಭಾಸ ಪರುಶೆಡ್ಡಿ ಸಾ॥ ಕೌಜಲಗಿ, ಶರಣರಾದ ಶ್ರೀ ಚನ್ನಬಸಪ್ಪ ಸಂಗಪ್ಪ ಪಟ್ಟಣಶೆಟ್ಟಿ ಹಾಗೂ ಕುಟುಂಬದವರು ಬಾರದಾನ ವ್ಯಾಪಾರಸ್ಥರು ಸಾಃ ಸವದತ್ತಿ, ಶರಣರಾದ ಶ್ರೀಮತಿ ಮತ್ತು ಶ್ರೀ ರುದ್ರಪ್ಪ ಚನ್ನವೀರಪ್ಪ ಚನ್ನಶೆಟ್ಟ ಹಾಗೂ ಮಕ್ಕಳು ಸಾ॥ ಹುಬ್ಬಳ್ಳಿ ಶರಣರಾದ ಶ್ರೀ ಸಂಗಮೇಶ ಅಯ್ಯಪ್ಪ ಶೆಡ್ಡಸದಾವರ್ತಿ, ಕ್ಲಾಸ್-1, ಕಾಂಟ್ರೇಕ್ಟರ್ ಸಾ। ಕಟಕೋಳ ಇವರೆಲ್ಲರೂ ಅನ್ನದಾಸೋಹದ ಸೇವೆಯನ್ನು ಸಲ್ಲಿಸುವರು. ಜಾತ್ರೆಯಲ್ಲಿ ವಿದ್ಯುತ ದೀಪಾಲಂಕಾರ ಶರಣರಾದ ಅಂಗೈಕ್ಯ ಶಿವಕಾಂತ್ ಹ, ಸಿದ್ಧಾಳ ಶ್ರೀಮತಿ ದೀಪಾ ಶಿವಕಾಂತ್ ಸಿದ್ಧಾಳ (ಲ್ಯಾಂಡ ಲಾರ್ಡ) ಸಾ| ಬೆಳಗಾವಿ ಹಾಗೂ ಜಾತ್ರೆಯಲ್ಲಿ ಹೂವಿನ ಅಲಂಕಾರ ಸೇವೆಯನ್ನು ಎಲ್ಲ ಮಹನೀಯರು ಹಾಗೂ ಸಕಲ ಸದ್ಭಕ್ತರು ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ.
ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ ಶ್ರೀ ಕ್ಷೇತ್ರ ಗೊಡಚಿ ಅವರು ಪ್ರಕಟಿನಲ್ಲಿ ತಿಳಿಸಿದ್ದಾರೆ

About The Author