ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಟೆದಲ್ಲಿ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನೂತನ ಕಾರ್ಯಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿಯೇ ನಮ್ಮ ಕಾರ್ಖಾನೆಯನ್ನು ಮಾದರಿ ಕಾರ್ಖಾನೆಯನ್ನಾಗಿ ಮಾಡಬೇಕೆಂಬ ಸದಿಚ್ಚೆಯೊಂದಿಗೆ ಶ್ರಮಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಕಾರ್ಖಾನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವದು ಎಂದರು.
ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ರೈತರ ಹಾಗೂ ಕಾರ್ಖಾನೆಯ ಶೇರುದಾರರ ಹಿತಕಾಯಲು ನಾವು ಬದ್ಧರಾಗಿದ್ದೇವೆ. ರೈತರ ಯೋಗಕ್ಷೇಮ ಮತ್ತು ಅವರ ಕಷ್ಟಗಳನ್ನು ಆಲಿಸಲು ನೂತನ ಕಾರ್ಯಾಲಯವನ್ನು ನಿರ್ಮಿಸಲಾಗಿದೆ. ಎಲ್ಲ ರೈತರು ಹಾಗೂ ಶೇರುದಾರರ ಸದಸ್ಯರ ಕಚೇರಿಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಾಲಯ ಉದ್ಘಾಟಿಸಿದ ಕಿಲ್ಲಾ ತೊರಗಲ್ಲದ ಶ್ರೀ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಾರ್ಖಾನೆ ಆಡಳಿತ ಮಂಡಳಿಗೆ ವ್ಯವಸ್ಥಿತವಾಗಿ ಆಡಳಿತ ನಡೆಸಲು ಕಾರ್ಯಾಲಯದ ಅವಶ್ಯಕತೆ ಇತ್ತು. ಅದರ ನಿರ್ಮಾಣ ಕಾರ್ಯ ಮುಗಿದು ಉದ್ಘಾಟನೆಗೊಂಡಿರುವದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ಆಡಳಿತ ಮಂಡಳಿಯ ನಿರ್ದೇಶಕರಾದ ಎ.ಸಿ ಸುರಗ, ಬಿ.ಎಂ. ತುಪ್ಪದ, ಎಂ.ಎA. ಆತಾರ, ಶಂಕರಗೌಡ ಪಾಟೀಲ, ಸುರೇಶ ಡುಳ್ಳೋಳ್ಳಿ, ಬಾಳಪ್ಪ ಹಂಜಿ, ಶ್ರೀನಿವಾಸ ಕರದಿನ, ಚಂದ್ರು ರಜಪೂತ್, ಐ.ಎಸ್. ಹರನಟ್ಟಿ, ಬಸವರಾಜ ಸೋಮಗೊಂಡ, ಎನ್.ಎಸ್. ಚಾಕಲಬ್ಬಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಖಾನಪೇಟೆದ ಧನಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನೂತನ ಕಾರ್ಯಾಲಯವನ್ನು ಶ್ರೀಗಳು ಹಾಗೂ ಗಣ್ಯರು ಉದ್ಘಾಟಿಸಿದರು.

WhatsApp Group
Join Now


