ಸವದತ್ತಿಯಲ್ಲಿ ವಕೀಲರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ನ್ಯಾಯವಾದಿಗಳ ಹೊಸ ಸಭಾ ಭವನದಲ್ಲಿ ವಕೀಲರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸವದತ್ತಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶ್ರೀ ಎಮ್ ಎನ್ ಮುತ್ತಿನ ವಕೀಲವರು ವಹಿಸಿದ್ದರು. ಕಾರ್ಯಕ್ರಮ ಉದ್ಗಾಟಣೆಯನ್ನು ಗೌರವಾನಿನ್ವತ ಪ್ರಧಾನ ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರಾದ ಶ್ರೀ ಶಶಿಧರ ಎಮ್ ಗೌಡ ಉದ್ಗಾಘಟನೆಯನ್ನು ದೀಪ ಬೆಳಗಿಸುವದರ ಮುಖಾಂತರ ಉದ್ದಾಟಿಸಿದರು, ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಒಂದನೇಯ ಹೆಚ್ಚುವರಿ ದಿವಾಣಿ ನ್ಯಾಯಾದೀಶರಾದ ಶ್ರೀ ಸಿದ್ರಾಮ ರೆಡ್ಡಿ ವಹಿಸಿದ್ದರು. ಮತ್ತು ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀಮತಿ ಎ ಎ ನೇಸರಿಕರ, ಮತ್ತು ಶ್ರೀ ಎಸ್ ಎಸ್ ಅಂಗಡಿ ಹಾಗೂ ಎಮ್ ವಾಯ್ ದೇವಲಾಪೂರ ಆಗಮಿಸಿದರು. ಮತ್ತು ಕಾರ್ಯಕ್ರಮಕ್ಕೆ ಸವದತ್ತಿ ನ್ಯಾಯವಾದಿಗಳ ಸಂಘದ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ಶ್ರೀ ಬಿ ಎಮ್ ಯಲಿಗಾರ, ಎಸ್ ಬಿ ಗೋಪಶೆಟ್ಟಿ, ಶ್ರೀ ಸಿ ಬಿ ವಕ್ಕುಂದ, ಶ್ರೀ ಸಿ ಎಸ್ ಹುಜರತ್ತಿ, ಶ್ರೀ ಬಿ ಎನ್ ಬೆಡಸೂರ, ನ್ಯಾಯವಾದಿಗಳನ್ನು ಸನ್ಮಾನಿಸಲಾಯಿತು. ಮತ್ತು ಹೊಸದಾಗಿ ನ್ಯಾಯವಾದಿಗಳಾಗಿ ಸಂಘಕ್ಕೆ ಸದಸ್ಯರಾದ ಯುವ ನ್ಯಾಯವಾದಿಗಳನ್ನು ಪುಸ್ಪವನ್ನು ನೀಡಿ ಸ್ವಾಗತಿಸಲಾಯಿತು.

ಈ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಎಸ್ ಎಸ್ ಸಬನೀಸ್ ತಾಲೂಕ ಆರೋಗ್ಯ ಅಧಿಕಾರಿಗಳು ಸವದತ್ತಿ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮವನ್ನು ನಿರೂಪಣೆಯನ್ನು ಶ್ರೀ ಎಸ್ ಆರ್ ಆಲದಕಟ್ಟಿ ನಿರೂಪಿಸಿದರು. ಕಾರ್ಯಕ್ರಮದ ನಂತರ ನ್ಯಾಯವಾದಿಗಳಿಗೆ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

About The Author