ವಿಜಯನಗರ ಜಿಲ್ಲಾಮಟ್ಟದ ಯುವಜನೋತ್ಸವ ಯಶಸ್ವಿ

WhatsApp Group Join Now

ಹೊಸಪೇಟೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವಿಜಯನಗರ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ವಿಜಯನಗರ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್. ಎನ್. ಎಫ್. ಇಮಾಮ್ ನಿಯಾಜಿ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಜನೋತ್ಸವ ತುಂಬಾ ಸೊಗಸಾಗಿ ನಡೆದಿದೆ, ಸರಕಾರ ಮಟ್ಟದಲ್ಲಿ ಅಗತ್ಯ ತರಬೇತಿ ಮತ್ತು ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಯುವಜನರು ಇಂತಹ ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು. ಒಕ್ಕೂಟ ಮತ್ತು ಇಲಾಖೆಯವರು ಮಾಹಿತಿ ತಂದರೆ ಅದರ‌ ಪ್ರಕಾರ ಸಹಾಯ ಮಾಡುವದಾಗಿ ಹೇಳಿದರು.


ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಮಾತನಾಡಿ, ಯುವಜನರಿಗೆ ಜನಪದ ಕಲೆಗಳ ತರಬೇತಿ ಶಿಬಿರಗಳನ್ನು ಕಾಲಕಾಲಕ್ಕೆ ನಡೆಸಬೇಕು, ಸರಕಾರ ಕೂಡಲೇ ಯುವ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಯುವಜನರಿಗೆ ಅವಕಾಶ ಸಿಗುವಂತಾಗಬೇಕು. ಯುವ ಶಕ್ತಿಯನ್ನು ಬಲಿಷ್ಠಗೊಳಿಸಲು ಸರಕಾರ ಇಲಾಖೆಯ ಪ್ರೋತ್ಸಾಹ ಅಗತ್ಯ ಎಂದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಕೆ. ಗ್ರೇಸಿ, ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಮೋಂಟು ಪತ್ತಾರ ಮಾತನಾಡಿದರು.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಕಲಬುರಗಿ ವಿಭಾಗೀಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಸರಕಾರ ಕೇವಲ ಕ್ರೀಡೆಗೆ ಸ್ವಲ್ಪಮಟ್ಟಿಗೆ ಒತ್ತುಕೊಟ್ಟು ಯುವಜನರ ಅಭಿವೃದ್ಧಿ ಮರೆತಂತಿದೆ, ಯುವ ಸಂಘಗಳನ್ನು ಸೊಸೈಟಿ ಕಾಯ್ದೆ ಪ್ರಕಾರ ನೋಂದಣಿ ಮಾಡಲು ಹೇಳಿ ಇದ್ದಬದ್ದ ಎಲ್ಲಾ ಸಂಘಗಳನ್ನು ಕೊಂದು ಹಾಕಿದ್ದು, ಮತ್ತೆ ಒಂದೂವರೆ ದಶಕದ ನಂತರವೂ ಮೇಲೇಳಲು ಆಗುತ್ತಿಲ್ಲವಾದ್ದರಿಂದ ಯುವ ಸಂಘಟನೆ ಕಟ್ಟಲು ಒಕ್ಕೂಟ ಪ್ರಯತ್ನ ಮಾಡುತ್ತಿದೆ, ಅದರ ಪ್ರತಿಫಲವೇ ಯುವಜನೋತ್ಸವ ಸಂಘಟನೆ. ಅನೇಕ ಜಿಲ್ಲೆಗಳನ್ನು ಹೋಲಿಸಿದರೆ ವಿಜಯನಗರ ಜಿಲ್ಲೆ ಕಾರ್ಯಕ್ರಮ ಬಹಳ ಚನ್ನಾಗಿ ನಡೆದಿದೆ ಎಂದರು. ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಗುಂಡಿ ರಮೇಶ, ಚಲನಚಿತ್ರ ಸಂಗೀತ ನಿರ್ದೇಶಕ ಸ್ಯಾಮಸನ್ ಪೆಂಡಮ್, ಕಲಾವಿದರಾದ ಪಿ. ಅಂಜು, ಭಾರತಿ ಗುಂಡಿ, ಉಮೇಶ ಸುರ್ವೆ, ಕರ್ನಾಟಕ ಜಾನಪದ ಅಕಾಡಮಿ ಸದಸ್ಯ, ಅಂತರಾಷ್ಟ್ರೀಯ ಜಾನಪದ ಕಲಾವಿದ ಮೆಹಬೂಬ್ ಕಿಲ್ಲೆದಾರ್, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ದ್ವಾರಕೀಶರಡ್ಡಿ ಎಸ್., ಛಾಯಾಗ್ರಾಹಕರಾದ ಸತೀಶ ಮುರಾಳ, ಮಾರುತಿ ಪೂಜಾರ್, ಜಾಕೀರ, ಬಸವರಾಜ, ಎಸೋಫ್, ಕವಿತಾ ಮೋಹನ್, ರಾಮರಾವ್ ಬಿರಾದಾರ, ಡಾ. ಅಕ್ಕಿ ಬಸವೇಶ, ಜಗದೀಶ ಹಿರೇಮಠ ಇದ್ದರು. ವಿಜೇತರು ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಮೊದಲ ಸ್ಥಾನ ಪಡೆದವರು ಮಾತ್ರ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫಲಿತಾಂಶ: ಭಾಷಣ-1. ಅಂಕೇಶ್ ಎಚ್., 2.ನಾಗರಾಜ 3.ಅನಿಲ್ ಎಚ್. ಕವಿತೆ ರಚನೆ-1.ಗಂಟಿ ಸಂತೋಷ್, 2.ನಾಗರಾಜ್, 3.ಕಮ್ಮಾರ್ ಗಣೇಶ್. ಕಥಾ ರಚನೆ-1. ಜ್ಯೋತಿ, 2.ಸಂಜನಾ, 3.ಶ್ರದ್ಧಾ. ಛಾಯಾಗ್ರಹಣ-1. ಶ್ರೀನಿವಾಸ ಗೌಡ, 2.ಸುದೀಪ್ ಕೆ.ಎಸ್., 3.ಪ್ರಿಯಾಂಕಾ ವಿ. ಪೇಂಟಿಂಗ್-1.ಜಿಯಾ ಅಹ್ಮದ್ ಖಾದ್ರಿ, 2.ನವೀನ್‌ಕುಮಾರ್ ಎಚ್..3.ನಿವೇದಿತಾ ಸಿ.ಎ. ಜಾನಪದ ಗೀತೆ : (ಏಕವ್ಯಕ್ತಿ)-1.ಪಿ.ಕಾವ್ಯ, 2.ಅನಿಲ್ ಎಚ್.3.ನೇಹಾ ಪಿ.ಬಿ. ಜಾನಪದ ಗೀತೆ (ಗುಂಪು)- 1. ಜ್ಯೋತಿ, 2.ಅಂಕೇಶ್, 3.ನೇಹಾ ಪಿ.ಬಿ. ಜಾನಪದ ನೃತ್ಯ (ವೈಯಕ್ತಿಕ)-1.ಅಮೃತಾ ಪಿ.ಎಸ್., 2.ಅಪೂರ್ವ ಜಿ., 3.ಎ.ಸ್ನೇಹಾ. ಜಾನಪದ ನೃತ್ಯ (ಗುಂಪು)-1. ಗಂಗಾಶ್ರೀ ಮತ್ತು ತಂಡ, 2.ಕೆ.ಕಾವ್ಯ ಮತ್ತು ತಂಡ, 3.ನಾಗರಾಜ ಮತ್ತು ತಂಡ.ಇವರು ಸುಮಾರು 60 ಸಾವಿರದಷ್ಟು ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕ ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ಭಾಗವಹಿಸಿದ ಎಲ್ಲರಿಗೂ ಪ್ರಶಂಸನಾಪತ್ರ ನೀಡಲಾಯಿತು.

About The Author