ರಾಮದುರ್ಗ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಖ್ಯಾತ ವೈದ್ಯ ಡಾ.ಮಲ್ಲಿಕಾರ್ಜುನ ಖಾನಪೇಟ ಚಾಲನೆ ನೀಡಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸ್ಟೇಟ್ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪರಪ್ಪ ಮುತ್ಯಾರ 2ನೇ ತಾಲೂಕು ಮಟ್ಟದ ಉಚಿತ ಆರೋಗ್ಯತ ಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮ ಹಾಗೂ ಹಿರಿಯ ವೈಧ್ಯರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಬೆಳಗಾವಿಯ ಖ್ಯಾತ ವೈದ್ಯ ಡಾ.ಮಲ್ಲಿಕಾರ್ಜುನ ಖಾನಪೇಟ ಸಮಾರಂಭ ಉದ್ಘಾಟಿಸಿ, ಶಿಬಿರದಲ್ಲಿ ದೊರೆಯುವ ಚಿಕಿತ್ಸೆ, ಔಷಧ ವಿತರಣೆ, ಶಸ್ತçಚಿಕಿತ್ಸೆ ಸೇರಿದಂತೆ ಆರೋಗ್ಯ ರಕ್ಷಣೆ ಕುರಿತು ಅನುಸರಿಸಬೇಕಾದ ದೈನಂದಿನ ಚಟುವಟಿಕೆಗಳ ಮಾಹಿತಿ ನೀಡಿದರು.

ನಿಸರ್ಗ ತಜ್ಞ ಡಾ. ಎಚ್.ಟಿ. ಮಳಲಿ ಪಾಲ್ಗೊಂಡು ಅವರು ಮಾತನಾಡಿದರು.
ಆರೋಗ್ಯ ಕಾಪಾಡಿಕೊಳ್ಳಲು ಪಂಚೇದ್ರೀಯಗಳ ನಿಗ್ರಹ ಅಗತ್ಯ. ಮಿತ ಆಹಾರ ಸೇವಣೆ, ನೈಸರ್ಗಿಕ ಕೃಷಿಯಿಂದ ಬೆಳೆದ ಪದಾರ್ಥಗಳ ಬಳಕೆಗೆ ಆಧ್ಯತೆ ನೀಡಿದಲ್ಲಿ ಆರೋಗ್ಯವಂತ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದರು.
ಬೈಲಹೊಂಗಲದ ಹಿರಿಯ ವೈಧ್ಯ ಡಾ.ಅಣ್ಣಪ್ಪ ಬಾಳಿ ಮಾತನಾಡಿ, ಪರೋಪಕಾರಿ ಜನಸೇವೆ ಮಾಡಲು ನಮ್ಮ ವೈಧ್ಯಕೀಯ ಜ್ಞಾನ ಬಳಕೆ ಮಾಡಿ, ಸಮಾಜ ಸೇವೆ ಮಾಡುತ್ತಿದ್ದೇವೆ. ಸೇವೆಯನ್ನು ಗುರುತಿಸಿ ನೀಡುವ ಪ್ರಶಸ್ತಿಗಳು ನನ್ನ ಸೇವೆಯನ್ನು ಮತ್ತಷ್ಟು ಹೆಚ್ಚಿಸಲಿವೆ ಎಂದರು.

ಡಾ. ರಾಜೇಂದ್ರ ಮುತ್ಯಾರು ಪುಣ್ಯಾಶ್ರಮ ಸೇವಾ ಟ್ರಸ್ಟ್ನ ಡಾ. ರಾಜೇಂದ್ರ ಶಿವಯೋಗಿ ಮುತ್ಯಾರು ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಾಗಲಕೋಟೆಯ ಪ್ರಭುಸ್ವಾಮಿ ಸರಗಣಾಚಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ, ಬೆಳಗಾವಿಯ ವೈದ್ಯಕೀಯ ಸಂಶೋಧನಾಲಯ, ಜೆ.ಎನ್.ಎಂ.ಸಿ., ತಾಲೂಕು ಆಸ್ಪತ್ರೆ ರಾಮದುರ್ಗ, ಐ.ಎಂ.ಎ.,ಎ.ಎಫ್.ಐ., ಮಹರ್ಷಿ ಪತಂಜಲಿ ಯೋಗ ಪ್ರತಿಷ್ಠಾನ, ಪುನೀತ ಫೌಂಡೇಷನ್, ಜನಸಾಮಾನ್ಯರ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶಿಬಿರ ಸಂಯೋಜನೆ ಮಾಡಲಾಗಿತ್ತು.
ಶಿಬಿರದಲ್ಲಿ ನೇತ್ರಶಾಸ್ತ್ರ ವಿಜ್ಞಾನ,ಚರ್ಮರೋಗ ವಿಭಾಗ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಜನರಲ್ ಮೆಡಿಸಿನ್, ಹೃದ್ರೋಗ ವಿಭಾಗ,
ಎಕ್ಕು ಟೆಸ್ಟ, ಇಸಿಜಿ ಟೆಸ್ಟ,ಉಚಿತ ಔಷಧಾಲಯ,ಆಂಕೊಲಾಜಿ,ಕ್ಯಾನ್ಸರ್ ವಿಭಾಗ ನರವಿಜ್ಞಾನ ವಿಭಾಗ,ಮೂಳೆ ಮತ್ತು ಕೀಳುಗಳ ತಜ್ಞ ವಿಭಾಗ, ಭೌತಚಿಕಿತ್ಸೆ ವಿಭಾಗ, ಸಾಮಾನ್ಯ ಶಸ್ತ್ರಚಿಕಿತ್ಸೆ, ಗ್ಯಾಸ್ಟ್ರೋಸ್ಟೆರಾಲಜಿ,
ಮೂತ್ರಶಾಸ್ತ್ರ ವಿಭಾಗ ಚಿಕ್ಕ ಮಕ್ಕಳ ತಜ್ಞ ವಿಭಾಗ, ಕಿವಿ ಮೂಗು ಗಂಟಲು ವಿಭಾಗ, ದಂತ ತಜ್ಞ ವಿಭಾಗ,ಆಯುರ್ವೇದ,ಉಸಿರಾಟ
ಹೋಮಿಯೋಪತಿ, ಹೀಗೆ ಹಲವಾರು ಚಿಕಿತ್ಸೆಗಳನ್ನು ಹಲವು ತಜ್ಞ ವೈಧ್ಯರಿಂದ ಒಟ್ಟು 1250 ಕ್ಕೂ ಹೆಚ್ಚು ರೋಗಗಳ ತಪಾಸಣೆ ನಡೆಸಿ, ಪ್ರತಿಯೊಬ್ಬರ ರಕ್ತದೊತ್ತಡ, ಸಕ್ಕರೆ ಕಾಯಿಲೆ ತಪಾಸಣೆ ಮಾಡಿ, 250 ಕ್ಕೂ ಹೆಚ್ಚು ಜನತೆಯ ಇಸಿಜಿ ಮಾಡಲಾಯಿತು. 50ಕ್ಕೂ ಹೆಚ್ಚು ಜನತೆಯ ಇಕೋ ಪರೀಕ್ಷೆ ನಡೆಸಿ, ಔಷಧ ವಿತರಿಸಲಾಯಿತು.
ಟಿಎಚ್‌ಒ ಡಾ. ನವೀನ ನಿಜಗುಲಿ, ಡಾ.ಪಾರ್ವತಿ ಹಾಲಭಾವಿ ಅವರನ್ನು ಶಿಬಿರದಲ್ಲಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಅನೀಲಕುಮಾರ, ಡಾ.ಮಹಾದೇವಿ, ಡಾ.ಮಹಾಂತೇಶ, ಡಾ.ಅಲ್ಲಪ್ರಭು ಕುಡಚಿ, ಡಾ.ಸಿ.ಎಂ.ಬೀಳಗಿ, ಮಹರ್ಷಿ ಪತಂಜಲಿ ಯೋಗ ಪ್ರತಿಷ್ಠಾನ ಅಧ್ಯಕ್ಷ ಡಾ.ಬಿ.ಎಲ್. ಸಂಕನಗೌಡರ, ಲಯನ್ಸ ಸಂಸ್ಥೆಯ ಡಾ.ಕಂಬಾರ, ವೆಂಕಟೇಶ ಹಿರೇರಡ್ಡಿ, ಪುನೀತ ಫೌಂಡೇಶನ್ ಅಧ್ಯಕ್ಷ ರಾಜು ಹರ್ಲಾಪೂರ, ಶಾಮಣ್ಣ ಧಡಿಗೌಡ್ರ, ಜನಸಾಮಾನ್ಯರ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಈರಣ್ಣ ಕಲ್ಯಾಣಿ ಸೇರಿದಂತೆ ಇತರರಿದ್ದರು. ಶಿವಯೋಗಿ ಅಣ್ಣಾನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ಚೌಡಕಿ ಸ್ವಾಗತಿ, ನಿರೂಪಿಸಿದರು. ಡಾ. ಮೃತ್ಯುಂಜಯ ಅಣ್ಣಾನವರ ವಂದಿಸಿದರು.

About The Author