ಬೆಳಗಾವಿ ಜಿಲ್ಲಾ ನ್ಯಾಯಾಲಯದ ನೇತೃತ್ವದಲ್ಲಿ ರಾಮದುರ್ಗದ ಲೋಕೋಪಯೋಗಿ ಇಲಾಖೆ ಕಾರ್ಯಾಲಯದ ಪಿಠೋಪಕರಣಗಳನ್ನು ಜಿಲ್ಲಾ ನ್ಯಾಯಾಲಯದ ಆದೇಶದಂತೆ ಜಪ್ತ ಮಾಡಲಾಯಿತು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪಿಠೋಪಕರಣಗಳನ್ನು ಜಿಲ್ಲಾ ನ್ಯಾಯಾಲಯದ ಆದೇಶದಂತೆ ಜಪ್ತ ಮಾಡಲಾಯಿತು.
ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಸ್ವಾಧೀನಪಡಿಸಿಕೊಂಡ ಲೋಕೋಪಯೋಗಿ ಇಲಾಖೆ ಹೈಕೋರ್ಟ ಆದೇಶದಂತೆ ಭೂ ಮಾಲಿಕರಿಗೆ ಪರಿಹಾರ ನೀಡದಿರುವ ಕಾರಣದಿಂದಾಗಿ ಬೆಳಗಾವಿ ಜಿಲ್ಲಾ ನ್ಯಾಯಾಲಯದ ನೇತೃತ್ವದಲ್ಲಿ ರಾಮದುರ್ಗದ ಲೋಕೋಪಯೋಗಿ ಇಲಾಖೆ ಕಾರ್ಯಾಲಯದ ಪಿಠೋಪಕರಣಗಳನ್ನು ಜಪ್ತ ಮಾಡಿದರು

ರಾಮದುರ್ಗ ಪಟ್ಟಣದ ನ್ಯಾಯವಾದಿ ಶಿವಾನಂದ ಸಾಗಶೆಟ್ಟಿ ಅವರ ಮಾಲಿಕತ್ವದ ಜಮೀನನ್ನು ಲೋಕೋಪಯೋಗಿ ಇಲಾಖೆ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡಿತ್ತು. ಸರಕಾರ ನೀಡುತ್ತಿರುವ ಪರಿಹಾರ ಸ್ಥಳೀಯ ಜಮೀನಿನ ಮಾರುಕಟ್ಟೆ ಬೆಲೆಗಿಂತ ಕಡಿಮೆ ಇದೆ. ಹೆಚ್ಚಿನ ಪರಿಹಾರ ನೀಡಬೇಕು ಎಂದು ಭೂ ಮಾಲಿಕರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು.
ವಾದಿಯ ಮೊರೆ ಆಲಿಸಿದ ಜಿಲ್ಲಾ ನ್ಯಾಯಾಲಯ ಸುಮಾರು ರೂ.೫೦ ಕೋಟಿ ಪರಿಹಾರ ನೀಡಬೇಕು. ಪರಿಹಾರಕ್ಕೆ ಬಡ್ಡಿ ಸೇರಿ ಸುಮಾರು ರೂ.೫೮ ಕೋಟಿ ಭೂ ಮಾಲಿಕರಿಗೆ ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿ, ಹಲವು ದಿನಗಳು ಕಳೆದಿದ್ದವು. ಆದರೆ ನ್ಯಾಯಾಲಯದ ಆದೇಶದಂತೆ ಲೋಕೋಪಯೋಗಿ ಇಲಾಖೆ ಪರಿಹಾರ ನೀಡಲು ವಿಳಂಬ ನೀತಿ ಅನುಸರಿಸಿದೆ ಎಂದು ಭೂಮಾಲಿಕರ ಪರ ವಾದ ಮಂಡಿಸಿದ ಹೈಕೋರ್ಟ ನ್ಯಾಯವಾದಿ ಸೌರಭ ಮಿರ್ಜಿ ಅವರ ವಾದದಂತೆ ಜಿಲ್ಲಾ ನ್ಯಾಯಾಲಯ ಇಲಾಖೆಯ ಪಿಠೋಪಕರಣಗಳ ಜಪ್ತಗೆ ಆದೇಶ ನೀಡಿದೆ.
ಜಿಲ್ಲಾ ನ್ಯಾಯಾಲಯದ ಆದೇಶದಂತೆ ಸ್ಥಳೀಯ ನ್ಯಾಯಾಲಯದ ಬೇಲೀಫ್‌ಗಳಾದ ಮುತ್ತಪ್ಪ ಜಂಜೇಲಿ, ಎಸ್.ಎಸ್. ಗಣಮುಖಿ ಅವರುಗಳು ಲೋಕೋಪಯೋಗಿ ಇಲಾಖೆಯ ಕಾರ್ಯಾಲಯದಲ್ಲಿರುವ ಕಂಪ್ಯೂಟರ್, ಪ್ರಿಂಟರ್, ಫ್ಯಾನ, ಟೇಬಲ್,ಕುರುಚಿ, ಟಿಜುರಿ, ಸೇರಿದಂತೆ ಕಾರ್ಯಾಲಯದಲ್ಲಿರುವ ಎಲ್ಲಾ ಪಿಠೋಪಕರಣಗಳನ್ನು ಜಪ್ತ ಮಾಡಿ, ನ್ಯಾಯಾಲಯಕ್ಕೆ ಒಪ್ಪಿಸಿದ ಘಟನೆ ನಡೆಯಿತು.

About The Author