ಸವದತ್ತಿ ವಕೀಲರ ಪರಿಷತ್ತು ಘಟಕದ ವತಿಯಿಂದ 2 ಎ ಮೀಸಲಾತಿಗಾಗಿ ರಸ್ತೆ ತಡೆದು ಪ್ರತಿಭಟನೆ.

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಎಪಿಎಂಸಿ ಚೆನ್ನಮ್ಮ ವೃತ್ತದಲ್ಲಿ 2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜ ಜನರು ಹಾಗೂ ಸಮಾಜದ ಮುಖಂಡರು ತಮ್ಮ ಒಂದು ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟಿಸಿದರು .

ಇದರಿಂದ ಎರಡು ತಾಸು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು ಎಲ್ಲಮ್ಮನ ದೇವಸ್ಥಾನಕ್ಕೆ ಬರುವ ಭಕ್ತರು ಸಾಕಷ್ಟು ತೊಂದರೆ ಅನುಭವಿಸಿದರು. ಸವದತ್ತಿ ಮಾರ್ಗದ ಎಲ್ಲ ರಸ್ತೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಈ ಒಂದು ಪ್ರತಿಭಟನೆ ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ನ್ಯಾಯವಾದಿಗಳು ಎಂಬಿ ದ್ಯಾಮನಗೌಡರ ಮಾತನಾಡಿ ಈ ನಮ್ಮ ಸಮಾಜದ ಬೇಡಿಕೆಯನ್ನು ಹಾಗೂ ಈ ನಮ್ಮ ಸಮಾಜವನ್ನು ಸಂಪೂರ್ಣವಾಗಿ ನಾಶ ಮಾಡುವ ಹಂತದಲ್ಲಿ ಈ ರಾಜ್ಯ ಸರ್ಕಾರ ಇರುತ್ತದೆ. ಈ ನಮ್ಮ ಬೇಡಿಕೆಯನ್ನು ಸಮರ್ಥಿಸುವಲ್ಲಿ ಈ ಸರ್ಕಾರ ವಿಫಲವಾಗಿದೆ. ಬೆಳಗಾವಿ ಮತ್ತು ಸುವರ್ಣ ಸೌಧದ ಮುಂದೆ ನಡೆದಿರುವ ಈ ನಮ್ಮ ಪಂಚಮಸಾಲಿ ಸಮಾಜದ ಪ್ರತಿಭಟನೆಯಲ್ಲಿ ನ್ಯಾಯವಾದಿಗಳ ಮೇಲೆ ಹಾಗೂ ಸಮಾಜದ ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಅದನ್ನು ಕೂಡಲೆ ಸರ್ಕಾರ ರದ್ದುಗೊಳಿಸಬೇಕು ಇಲ್ಲದಿದ್ದರೆ ಮತ್ತೆ ಪ್ರತಿಭಟನೆಗೆ ತಾವೇ ಕಾರಣರಾಗುತ್ತೀರಿ ಎಂದು ಹೇಳಿದರು. ಅದೇ ರೀತಿ ನ್ಯಾಯವಾದಿಗಳಾದ ಬಸವರಾಜ ಕಡಕೋಳ ಮಾತನಾಡಿ ಈ ಸಿದ್ದರಾಮಯ್ಯ ನವರ ಸರ್ಕಾರ ನಮ್ಮ ಪಂಚಮಸಾಲಿ ಸಮಾಜದ ಜನರಿಗೆ ಮೇಲಿಂದ ಮೇಲೆ ಮೋಸ ಮಾಡುತ್ತಲೇ ಬರುತ್ತಿದೆ. ಈ ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ನಂತರ ಸ್ಥಳೀಯ ದಂತ ವೈದ್ಯರಾದ ಡಾಕ್ಟರ್ ಅಯ್ಯನ್ ಗೌಡ ಕಬ್ಬೂರ್ ಮಾತನಾಡಿ ಈ ನಮ್ಮ ಪಂಚಮಸಾಲಿ ಸಮಾಜವು ಶಾಂತತೆಗೆ ಪ್ರಾಮುಖ್ಯತೆ ಕೊಟ್ಟ ಇಂತಹ ಸಮಾಜದಲ್ಲಿ ಹಾಗೂ ಜನರಲ್ಲಿ ಕೆಟ್ಟ ಮನೋಭಾವನೆಯನ್ನು ತುಂಬುವ ಕೆಲಸ ಈ ಸರ್ಕಾರ ಮಾಡುತ್ತಿದೆ. ಈ ವಿಚಾರವನ್ನು ಬಿಟ್ಟು ಈ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ಈ ಸರ್ಕಾರ ರಾಜ್ಯದಲ್ಲಿ ಗಲಭೆ ಮಾಡುವವರಿಗೆ ಪ್ರೋತ್ಸಾಹ ನೀಡುತ್ತಿದೆ ದೇಶದ್ರೋಹಿಗಳಿಗೆ ರಕ್ಷಣೆ ಕೊಡುವ ಈ ಸರ್ಕಾರಕ್ಕೆ ನಮ್ಮ ಸಮಾಜದ ವತಿಯಿಂದ ಧಿಕ್ಕರಿಸಲಾಗುವುದು. ನಂತರ ನ್ಯಾಯವಾದಿಗಳಾದ ಜಿ ಕರಮಲ್ಲಪ್ಪನವರ ನಂತರ ಪಂಚಮಸಾಲಿ ಸಮಾಜದ ವತಿಯಿಂದ ಸ್ಥಿರಸ್ಥರಾದ ಶಶಿರಾಜ ವಣಕಿಯವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಅಲ್ಲಮಪ್ರಭು ಪ್ರಭುನವರ ಮಹಾರಾಜಗೌಡ ಪಾಟೀಲ. ಬಿ ಎನ್ ಪ್ರಭುನವರ ಬಸವರಾಜ ಪುಟ್ಟಿ . ಸೋಮು ಹದ್ಲಿ. ಎಫ್ ಡಿ ಖೋದಾನಪುರಗೌಡ. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ ಎಂ ಮುತ್ತಿನ. ನ್ಯಾಯವಾದಿಗಳಾದ ಸಿ ಬಿ ದೊಡ್ಡಗೌಡರ ನಾಗರಾಜ ಸೋಗಿ ಬಿ ವಿ ಮಲಗೌಡರ ಸಿ ಎಲ್ ಮೊಕಾಶಿ ಜಗದೀಶ ಮುನವಳ್ಳಿ . ಮಹೇಶ್ ತಿಗಡಿ. ಜೆ ವಿ ಅಗಡಿ.ಆರ್ ಎಂ ನೀಡವಾಣಿ. ಮಯೂರ ಕಾರದಗಿ. ಸಮಾಜದ ಮುಖಂಡರಾದ ಜಯಶಂಕರ ಒಣ್ಣೂರ. ನಿಂಗಪ್ಪ ಮಿಸಿ. ಬಸವರಾಜ ಕಾರದಗಿ .ಶಿವಾನಂದಾನಂದ ಸರದಾರ. ಸೇರಿದಂತೆ ತಾಲೂಕಿನ ಪಂಚಮಸಾಲಿ ಸಮಾಜದ ಎಲ್ಲ ಮುಖಂಡರು ಭಾಗವಹಿಸಿದ್ದರು

About The Author