ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೋಡಚಿ ಗ್ರಾಮ ಪಂಚಾಯಿತಿಯಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆಯ ನಿಮಿತ್ಯವಾಗಿ ಹಮ್ಮಿಕೊಂಡ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಉತ್ತರ ಕರ್ನಾಟಕದ ಧರ್ಮಸ್ಥಳವೆಂದೆ ಖ್ಯಾತಿ ಪಡೆದ ವೀರಭದ್ರೇಶ್ವರನ ಜಾತ್ರೆಗೆ ರಾಜ್ಯ ಹಾಗೂ ಮಹಾರಾಷ್ಟ ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಗೊಡಚಿ ವೀರಭದ್ರೇಶ್ವರ ದೇವಸ್ಥಾನವು ಧರ್ಮಸ್ಥಳ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕು. ಅದಕ್ಕೆ ಇಲ್ಲಿಯ ಆಡಳಿತ ಮಂಡಳಿಯವರು ಮತ್ತು ಗ್ರಾಮದ ಜನರ ಸಹಕಾರ ಬೇಕು ಮತ್ತು ಹೆಚ್ಚಿಗೆ ಪ್ರವಾಸಿಗರನ್ನು ಆಕರ್ಷಿಸುವಂತ ಕೆಲಸ ಕಾರ್ಯಗಳನ್ನು ಮಾಡಬೇಕು.
ಪ್ರತಿ ವರ್ಷ ವಿವಿಧ ಇಲಾಖೆಗಳಿಂದ ರೈತರಿಗೆ ಬೇಕಾಗುವ ವಸ್ತು ಪ್ರದರ್ಶನಗಳು ಇಲ್ಲಿ ನಡೆಸಲಾಗುತ್ತಿದ್ದು, ಮುಂದಿನ ವರ್ಷದೊಳಗೆ ವಸ್ತು ಪ್ರದರ್ಶ ಮಳಿಗೆಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಲಾಗುವದು ಎಂದು ಹೇಳಿದರು
ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ವೀರಭಧ್ರೇಶ್ವರ ಏತ ನೀರಾವರಿ ಯೋಜನೆ ತಂದೆ, ಇನ್ನೂ ಪಟ್ಟಣದ ಜನರು ನೀರಿನ ಪರದಾಟ ತಪ್ಪಿಸಲು ನವೀಲುತೀರ್ಥ ಜಲಾಶಯದಿಂದ ದಿನದ 24 ಗಂಟೆ ನೀರು ಕುಡಿಸುವ ಕೆಲಸ ಮಾಡಿದರೇ, ಹಿಂದಿನ ಅವಧಿಯಲ್ಲಿ ಜನ ಅಭಿವೃದ್ದಿಯನ್ನು ನೋಡದೇ ತಮಗೆ ವಿಷ ಕುಡಿಸುವ ಕೆಲಸ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ತಾ.ಪಂ ಇಒ ಬಸವರಾಜ ಐನಾಪೂರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ರಾಜಯೋಗಿನಿ ವೈಶಾಲಿ ಅಕ್ಕನವರು, ಕಿಲ್ಲಾ ತೋರಗಲ್ಲದ ಶ್ರೀ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ , ಮುಪ್ಪಯ್ಯ ಶಾಸ್ತಿಗಳು ಹಿರೇಮಠ, ಈರಯ್ಯ ಹಿರೇಮಠ ಗ್ರಾ.ಪಂ ಅಧ್ಯಕ್ಷೆ ಲಕ್ಕವ್ವ ವಗ್ಗರ , ದೇವಸ್ಥಾನದ ಧರ್ಮಾಧಿಕಾರಿಗಳಾದ ಶ್ರೀಮಂತ ಸಂಗ್ರಾಮಸಿAಹ ಶಿಂದೆ, ಶ್ರೀಮಂತ ಸಂಜಯಸಿAಹ ಶಿಂದೆ, ಗ್ರಾ.ಪಂ ಉಪಾಧ್ಯಕ್ಷ ಮಾಬುಸುಬಾನಿ ಮುನವಳ್ಳಿ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಸಂಗೀತಾ ಕುರೇರ, ಹೆಸ್ಕಾಂ ಎಇಇ ಶಿವಪ್ರಕಾಶ ಕರಡಿ, ಪಶು ವೈದ್ಯಾಧಿಕಾರಿ ಡಾ. ಗಿರೀಶ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಗಿ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ವಲಯ ಅರಣ್ಯ ಅಧಿಕಾರಿ ಡಿ.ಜಿ. ಗುಂಜಗಾವಿ, ಮಾಜಿ ಜಿ.ಪಂ ಸದಸ್ಯ ಜಹೂರ ಹಾಜಿ, ಪಿಡಿಓ ಸಿ.ಕೆ. ಕೊಪ್ಪದ, ಕಾರ್ಯದರ್ಶಿ ವಿ.ಎಂ. ಯಡಹಳ್ಳಿ ಸೇರಿದಂತೆ ಗ್ರಾ.ಪಂ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



