ಬೆಳಗಾವಿಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಆಹಾರ ಸಚಿವ ಕೆ. ಎಚ್.ಮುನಿಯಪ್ಪ ಉದ್ಘಾಟಿಸಿದರು.

WhatsApp Group Join Now

ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಏರ್ಪಡಿಸಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಹಕರು ಯಾವುದೇ ರೀತಿಯಾಗಿ ಮೋಸ ಹೋಗಬಾರದು, ತಮ್ಮ ಕುಂದುಕೊರತೆಗಳನ್ನು ಸರಿ ಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರಬೇಕು ನಾವು ನಿಮ್ಮ ಜೊತೆಗೆ ಸದಾಕಾಲ ಇರುತ್ತೇವೆ ಎಂದು ಹೇಳಿದರು.

ಬೆಳಗಾವಿ ಆಹಾರ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ನಾಯ್ಕ್ ಹಾಗೂ ಸಹಾಯಕ ನಿರ್ದೇಶಕರಾದ ಶ್ರೀ ಅವಿನಾಶ ಬೆಲ್ಲದ ಹಾಗೂ ಜಿಲ್ಲಾ ವ್ಯವಸ್ಥಾಪಕರಾದ ಶ್ರೀ ಮಂಜುನಾಥ ಭೈರವಾಡಗಿ ಮತ್ತು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಬೆಂಗಳೂರು ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮಹದೇವಪ್ಪ ಲ ಕಾಮಣ್ಣವರ ಇವರನ್ನು ಹೂ ಗುಚ್ಛ ನೀಡುವ ಮೂಲಕ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು.

ನ್ಯಾಯವಾದಿ ಎನ್. ಆರ್ . ಲಾತೂರ ಮಾತನಾಡಿ ಗ್ರಾಹಕರು ಖರೀದಿಸುವ ಸರಕು, ಸಾಮಗ್ರಿಗಳ ತೂಕದಲ್ಲಿ ಯಾವುದೇ ವ್ಯತ್ಯಾಸವಿಲ್ಲದ ಹಾಗೆ ನೋಡಿಕೊಳ್ಳಬೇಕು, ಬಿಲ್ಲನ್ನು ಕಡ್ಡಾಯವಾಗಿ ಪಡೆಯಬೇಕು ಆಗ ಮಾತ್ರ ತಾವು ದಾಖಲಿಸಿದ ದೂರನ್ನು 3 ತಿಂಗಳಗಳಲ್ಲಿ ಖಡ್ಡಾಯವಾಗಿ ಮುಗಿಸಿ ಕೊಡಲಾಗುವುದು ಎಂದು ಹೇಳಿದರು.

ಈ ಎಲ್ಲಾ ಕಾರ್ಯಕ್ರಮವು ಯಶಸ್ವಿ ಆಗಲು ಕಾರಣಿಭೂತರಾದ ಆಹಾರ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ ನಾಯ್ಕ್ ಹಾಗೂ ಶ್ರೀ ಅವಿನಾಶ ಬೆಲ್ಲದ ಮತ್ತು ಮಂಜುನಾಥ್ ಭೈರವಾಡ

ಈ ವೇಳೆ ಅಣ್ಣಸಾಹೇಬ ಶಂಕರ್ ಸದಲಗೆ,
ಪಿ. ಮುರಳಿಮೋಹನ ರೆಡ್ಡಿ, ಸಂಜೀವಕುಮಾರ ಕುಲಕರ್ಣಿ, ಶ್ರೀಮತಿ ಸುನಂದಾ ಕಾದ್ರೋಳಿಮಠ, ಗಿರೀಶ್ ಪಾಟೀಲ್, ಎನ್. ಆರ್. ಲಾತೂರ, ಶ್ರೀಮತಿ ಶಿವಲೀಲಾ ಹಿರೇಮಠ, ಡಾ. ಚೇತನ ಕಂಕಣವಾಡಿ ಹಾಗೂ ಜಿಲ್ಲಾಧ್ಯಕ್ಷ ಮಹದೇವಪ್ಪ ಕಾಮಣ್ಣವರ,
ಸಂತೋಷ್ ಕಟ್ಟಿಮನಿ, ಸಿದ್ದನಗೌಡ ಪಾಟೀಲ್, ಮಲ್ಲಪ್ಪ ಕಿತ್ತೂರು, ಶೋಭಾ ಪಾಟೀಲ್, ಹಾಗೂ ಜಿಲ್ಲೆಯ ಹಾಗೂ ತಾಲ್ಲೂಕಿನ ಎಲ್ಲಾ ಆಹಾರ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಇನ್ನುಳಿದ ಜಿಲ್ಲಾ ಹಾಗೂ ಎಲ್ಲಾ ತಾಲ್ಲೂಕು ನ್ಯಾಯಬೆಲೆ ಅಂಗಡಿ ಮಾಲೀಕರು, ಹಾಗೂ ಮುದ್ದು ವಿದ್ಯಾರ್ಥಿಗಳು ಭಾಗವಹಿಸಿದ್ದರು

About The Author