ರಾಮದುರ್ಗ ಎ ಆರ್ ಟಿ ಓ ಕಚೇರಿಯಲ್ಲಿ ವಿಡಿಯೋ ಮಾಡಬೇಡಿ ಎಂದು ಉಡಾಫೆ ಉತ್ತರ ನೀಡಿದ ಅಧಿಕಾರಿಗಳ ವಿರುದ್ಧ ಮಾಧ್ಯಮದವರಿಂದ ಪ್ರತಿಭಟನೆ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಎ ಆರ್ ಟಿ ಓ ಕಚೇರಿಯಲ್ಲಿ ಇನ್ಸ್ಪೆಕ್ಟರ್ ಉಪ್ರಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೆ ಇರುವುದು ಕಚೇರಿಗೆ ಬಂದಂತಹ ಸಾರ್ವಜನಿಕರಿಗೆ ಕೆಲಸ ಮಾಡಿಕೊಡುವುದೇ ಇರುವುದು ಅಧಿಕಾರಿಗಳ ಬೇಜವಾಬ್ದಾರಿ ಎಂದು ಸಾರ್ವಜನಿಕರು ಮಾಧ್ಯಮದವರ ಮುಂದೆ ಆರೋಪ ಮಾಡಿದರು ಸಾರ್ವಜನಿಕರ ಆರೋಪದ ಮೇಲೆ ಎ ಆರ್ ಟಿ ಓ ಕಚೇರಿಗೆ ಮಾಧ್ಯಮದವರು ಭೇಟಿ ನೀಡಿದಾಗ ಬೆಳಗಾವಿ ಜಂಟಿ ಸಾರಿಗೆ ಆಯುಕ್ತರಾದ ಶ್ರೀಮತಿ ಎಂ ಪಿ ಓಂಕಾರೇಶ್ವರಿ ಇವರು ಮಂಗಳವಾರ ರಾಮದುರ್ಗದ ಎ ಆರ್ ಟಿ ಓ ಕಚೇರಿಗೆ ಭೇಟಿ ನೀಡಿದ್ದರೂ ಇದೇ ಸಂದರ್ಭದಲ್ಲಿ ಮಾಧ್ಯಮದವರು ಕಚೇರಿಯಲ್ಲಿ ಇದ್ದಂತಹ ಇನ್ಸ್ಪೆಕ್ಟರ್ ಉಪ್ರಿ ಅವರು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೆ ಇರುವುದು ಕಚೇರಿಗೆ ಬಂದಂತಹ ಸಾರ್ವಜನಿಕರಿಗೆ ಕೆಲಸ ಮಾಡಿಕೊಡುವುದೇ ಇರುವುದು ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಹೇಳುವಾಗ ಮಾಧ್ಯಮದವರಿಗೆ ಕಚೇರಿ ಒಳಗೆ ವಿಡಿಯೋ ಮಾಡಬೇಡಿ ನೀವು ಹೊರಗೆ ಹೋಗಿ ಎಂದು ಉಡಾಫೆ ಉತ್ತರ ನೀಡಿದರು .
ವಿಡಿಯೋ ಮಾಡಬೇಡಿ ಎಂದು ಉಡಾಫೆ ಉತ್ತರ ನೀಡಿದ ಅಧಿಕಾರಿಗಳ ವಿರುದ್ಧ ಎ ಆರ್ ಟಿ ಓ ಕಚೇರಿಯ ಮುಂಭಾಗ ಜನಪರ ಟ್ರೇಸ್ಟ್ ಅಧ್ಯಕ್ಷ ಸುಭಾಸ್ ಗೋಡಖೆ , ಮಾಧ್ಯಮ ಪ್ರತಿನಿಧಿಗಳಾದ ಪ್ರಶಾಂತ್ ಅಂಗಡಿ, ಎಂ ಕೆ ಯಾದವಾಡ, ಅಭಿ ಮುನವಳ್ಳಿ, ಪರ್ವೇಜ್ ಪನಿಬಂಧ, ಶ್ರೀಕಾಂತ್ ಪೂಜಾರ್, ಸೋಯಿಲ್ ಬೈರೇಕದಾರ್, ಜಗಾಪುರ್, ಈರಣ್ಣ ಕಲ್ಯಾಣಿ, ನೂರ ಅಕೋಜಿ, ಉಡಾಫೆ ಉತ್ತರ ನೀಡಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದರು
