ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ರಾಮದುರ್ಗ ಶಾಲಾ ಅವರಣದಲ್ಲಿ ಜ.10 ರಂದು ಬಿ.ವಿ.ವಿ.ಎಸ್ ಸಂಭ್ರಮ- ರಾಮದುರ್ಗ ಹಬ್ಬದ ಬಗ್ಗೆ ಪತ್ರಿಕಾ ಗೋಷ್ಟಿಯಲ್ಲಿ ಡಾ. ವೀರಣ್ಣ ಸಿ ಚರಂತಿಮಠ ಮಾತನಾಡಿದರು.
ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಅಡಿಯಲ್ಲಿ ರಾಮದುರ್ಗ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 10 ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜ.10 ರಂದು ರಾಮದುರ್ಗ ಪಟ್ಟಣದ ಬಿ.ವಿ..ವಿ.ಎಸ್ ಮೈದಾನದ ಆವರಣದಲ್ಲಿ ಮೂಡಬಿದರೆ ಸಂಭ್ರಮದ ಆಚರಣೆಯಂತೆ ಇದೇ ಪ್ರಥಮ ಬಾರಿಗೆ ಬಿ.ವಿ.ವಿ.ಎಸ್ ಸಂಭ್ರಮ- ರಾಮದುರ್ಗ ಹಬ್ಬ ಆಯೋಜಿಸಲಾಗಿದೆ ಎಂದು ಬ.ವಿ.ವ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
1906 ಅ.18 ರಂದು ಈ ಭಾಗದ ಜನರಿಗೆ ಮೌಲ್ಯಧಾರಿತ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಲು ಪ.ಪೂ ಬೀಳೂರು ಗುರುಬಸವ ಮಹಾಸ್ವಾಮಿಜಿಗಳಿಂದ ಒಂದು ಸಂಸ್ಕೃತ ಪಾಠ ಶಾಲೆಯ ಮೂಲಕ ಆರಂಭವಾದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವು ಪ್ರಸ್ತುತ ಸುಮಾರು 50 ಸಾವಿರ ವಿದ್ಯಾರ್ಥಿಗಳು 6 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಮೇಲ್ವಿಚಾರಣೆಯಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಡಿಪ್ಲೋಮಾ, ಇಂಜಿನಿಯರಿಂಗ್, ತಂತ್ರಜ್ಞಾನ, ಕಲೆ, ವಿಜ್ಞಾನ, ಸಂಶೋಧನೆ, ವಾಣಿಜ್ಯ, ಕಾನೂನು, ನಿರ್ವಹಣೆ, ಶಿಕ್ಷಣ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ, ಮಾನವ ಸಂಪನ್ಮೂಲ, ನರ್ಸಿಂಗ್, ತರಬೇತಿ, ಕ್ರೀಡೆ ಮತ್ತು ವೃತ್ತಿಪರ ವ್ಯಾಪಾರ ವಿಭಾಗಗಳ ಜತೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಅಭ್ಯಸಿಸುತ್ತಿದ್ದಾರೆ ಎಂಬುವುದು ಹೆಮ್ಮೆಯ ವಿಷಯ. ಇದರೊಂದಿಗೆ ಗ್ರಾಮೀಣಾಭಿವೃದ್ಧಿ, ಕೌಶಲ್ಯ ತರಬೇತಿ ಶಿಕ್ಷಣವನ್ನು ನೀಡಲಾಗುತ್ತಿದೆ, ಗುಣಮಟ್ಟದ ಶಿಕ್ಷಣ ನೀಡುವ ಧೇಯೋದ್ದೇಶದಿಂದ 168ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿದೆ .
ಪುಣ್ಯಕ್ಷೇತ್ರಗಳಾದ ಶ್ರೀಶೈಲ, ತಿರುಪತಿ ಹಾಗೂ ಅಯೋಧ್ಯೆಯಲ್ಲಿ ಛತ್ರಗಳನ್ನು ತೆರೆಯಲಾಗಿದೆ. ಕಾಯಕವೇ ಕೈಲಾಸ ಎಂದು ನಿಸ್ವಾರ್ಥ ಸೇವೆಯ ಮೂಲಕ ಗುಣಮಟ್ಟದ ಆಧುನಿಕ ಶಿಕ್ಷಣವನ್ನು ಒದಗಿಸಲು ಅತ್ಯುತ್ತಮ ಪ್ರಯತ್ನ ಮಾಡುವುದಕ್ಕಾಗಿ ಸಂಘದ ಅನೇಕ ಸಂಸ್ಥೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಗಮನಾರ್ಹವಾದದು ಎಂದರು.
ಬಿ.ವಿ.ವಿ.ಎಸ್ ಸಂಘವು 1949ನೇ ಇಸ್ವಿಯಲ್ಲಿ ರಾಮದುರ್ಗದಲ್ಲಿ State ಮಾಧ್ಯಮಿಕ ಶಾಲೆ ಪ್ರಾರಂಭಿಸುವ ಮೂಲಕ ನಗರದಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತ ಪ್ರಸ್ತುತ 10 ಅಂಗ ಸಂಸ್ಥೆಗಳನ್ನು ಸ್ಥಾಪಿಸಿ, ಈ ಭಾಗದ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದೆ.
ವಿದ್ಯಾರ್ಥಿಗಳಲ್ಲಿ ಶಿಕ್ಷಣ, ಸಂಸ್ಕೃತಿ, ಕಲೆ, ಕ್ರೀಡಾ ಮನೋಭಾವ, ದೇಶಭಕ್ತಿ, ಸಾಮಾಜಿಕ ಹೊಣೆಗಾರಿಕೆಗಳ ಮಹತ್ವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡಲು ಬಸವೇಶ್ವರ ವೀರಶೈವ ವಿದ್ಯಾವಧಕ ಸಂಘವು ಬಿವಿವಿಎಸ್ ಸಂಭ್ರಮದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಿವಿವಿಎಸ್ ಸಂಭ್ರಮ ಬಿಡದಿ (ಬೆಂಗಳೂರು) ಹಬ್ಬವನ್ನು ಈಗಾಗಲೇ ಯಶಸ್ವಿಯಾಗಿ ಆಯೋಜಿಸಲಾಗಿದೆ. ಅದೇ ಮಾದರಿಯಲ್ಲಿ ಮುಧೋಳ ಮತ್ತು ರಾಮದುರ್ಗಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಅಂತಿಮವಾಗಿ ಸಂಘದ ಅಡಿಯಲ್ಲಿ ಬರುವ ಎಲ್ಲ ಶಾಲಾ ಕಾಲೇಜುಗಳ ಜೊತೆಗೆ ಬಾಗಲಕೋಟೆ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳನ್ನು ಒಳಗೊಂಡು ಬಿವಿವಿಎಸ್ ಸಂಭ್ರಮವನ್ನು ಬಾಗಲಕೋಟೆಯಲ್ಲಿ ಆಚರಿಸಲಾಗುತ್ತದೆ ಎಂದರು.
ಬಿವಿವಿಎಸ್ ಸಂಭ್ರಮವನ್ನು ರಾಮದುರ್ಗ ತಾಲೂಕಿನ ಶಾಲಾ ಕಾಲೇಜುಗಳನ್ನೊಳಗೊಂಡು ಮುಧೋಳದಲ್ಲಿ ಆಚರಿಸಿದಂತೆ ರಾಮದುರ್ಗದಲ್ಲಿಯು ಸಹ “ರಾಮದುರ್ಗ ಹಬ್ಬ” ವನ್ನಾಗಿ ಇದೇ ಜನವರಿ 10 ಶುಕ್ರವಾರದಂದು ಆಚರಿಸಲು ನಿರ್ಧರಿಸಿದ್ದು, ಈ ಹಬ್ಬದ ಅಂಗವಾಗಿ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಲ್ಲ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಒಂದೆಡೆ ಸೇರುವ ಮೂಲಕ ಶೈಕ್ಷಣಿಕ ಹಬ್ಬವಾಗಿ ಆಚರಿಸಲು ಮತ್ತು ಎಲ್ಲ ಶಿಕ್ಷಣ ಸಂಸ್ಥೆಗಳ ಜೊತೆಗೂಡಿ ಒಂದು ಒಳ್ಳೆಯ ಶೈಕ್ಷಣಿಕ ಪರಿಸರ ಒದಗಿಸಲು ಇದೊಂದು ಪ್ರಯತ್ನವಾಗಿದ್ದು, ಈ ಹಬ್ಬದಲ್ಲಿ ವಿಚಾರಗೊಷ್ಟಿ, ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸಂಜೆ, ವಿದ್ಯಾರ್ಥಿ ಸಾಧಕರಿಗೆ ಸನ್ಮಾನ ಹಾಗೂ ಆಯೋಜಿತ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಆಯೋಜಿಸಿದೆ. ಜನವರಿ 10 ರಂದು ಮುಂಜಾನೆ 8:30ಕ್ಕೆ ರಾಮದುರ್ಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಈ ವರ್ಷದ “B.V.V.S ಸಂಭ್ರಮ -ರಾಮದುರ್ಗ ಹಬ್ಬ”ವನ್ನು ಪೂಜ್ಯ ಶ್ರೀ ಮ.ನಿ.ಪ್ರ.ಡಾ. ಮಹಾಂತಪ್ರಭು ಮಹಾಸ್ವಾಮಿಗಳೂ, ವಿರಕ್ತಮಠ ಶೇಗುಣಸಿ, ತಾ: ಅಥಣಿ ಇವರ ದಿವ್ಯ ಸಾನಿಧ್ಯದೊಂದಿಗೆ ಮತ್ತು ಸನ್ಮಾನ್ಯಶ್ರೀ ಅಶೋಕ ಎಂ. ಪಟ್ಟಣ, ಮುಖ್ಯಸಚೇತಕರು, ಕರ್ನಾಟಕ ಸರಕಾರ ಹಾಗೂ ಶಾಸಕರು ರಾಮದುರ್ಗ ಇವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳುತ್ತಿದ್ದು, ಮುಖ್ಯ ಅತಿಥಿಗಳಾಗಿ ಸನ್ಮಾನ್ಯಶ್ರೀ ಮಹಾದೇವಪ್ಪ ಎಸ್. ಯಾದವಾಡ, ಹಿಂದಿನ ಶಾಸಕರು, ರಾಮದುರ್ಗ, ಅತಿಥಿಗಳಾಗಿ ಶ್ರೀ ಮಹೇಶ ಮಾಸಾಳ ವಿಸ್ತಾರ ಜಿಂಚಗಿ, ಧಾರವಾಡ, ಗೌರವ ಉಪಸ್ಥಿತಿಯನ್ನು ಶ್ರೀ ಮಹೇಶ ಎನ್. ಅಥಣಿ, ಗೌರವ ಕಾರ್ಯದರ್ಶಿಗಳು, ಬಿ.ವಿ.ವಿ.ಸಂಘ,ಬಾಗಲಕೋಟ ಅವರು ವಹಿಸುತ್ತಿದ್ದು, ರಾಮದುರ್ಗದ ಸುತ್ತಮುತ್ತಲಿನ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಅಧ್ಯಕ್ಷರಾದ ಡಾ.ವೀರಣ್ಣ ಸಿ. ಚರಂತಿಮಠ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಹೈಸ್ಕೂಲ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಮಹಾಂತೇಶ ಶೆಟ್ಟರ, ಮತ್ತು ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಜ.10 ರಂದು ಬಿ.ವಿ.ವಿ.ಎಸ್ ಸಂಭ್ರಮ- ರಾಮದುರ್ಗ ಹಬ್ಬ ಡಾ. ವೀರಣ್ಣ ಸಿ ಚರಂತಿಮಠ ಇವರಿಂದ ಪತ್ರಿಕಾ ಗೋಷ್ಠಿ

WhatsApp Group
Join Now


