ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ವಕೀಲರ ಸಂಘದಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀ ಜಿ ವಾಯ್ ಕರಮಲ್ಲಪ್ಪನವರ ವಕೀಲರು ಮಾತನಾಡಿ ಶಿವಾಜಿ ಮಹಾರಾಜರು ಬಾಲ್ಯದ ದಿನದಿಂದಲೇ ತನ್ನ ತಾಯಿಯಿಂದ ಪ್ರೇರಿತರಾಗಿ ಬೆಳೆದು ಯುದ್ಧ ಪರಿಣಿತಿಯನ್ನು ಸರಳವಾಗಿ ಮೈಗೂಡಿಸಿಕೊಂಡು ವೈರಿಗಳಿಗೆ ಸಿಂಹ ಸ್ವಪ್ನವಾಗಿದ್ದರೆಂದು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ರೀ ಬಿ ಎಸ್ ಹೊಣಗೇಕರ, ಶ್ರೀ ಸಿ ಬಿ ದೊಡ್ಡಗೌಡರ, ಆರ್ ಎಂ ನಿಡವನಿ ವಕೀಲರು ಹಾಗೂ ಸಹೋದ್ಯೋಗಿ ವಕೀಲರಾದ ಶ್ರೀ ಸಿ ಬಿ ದುಂಡಿ, ಶ್ರೀ ಎಸ್ ಎಸ್ ಮಾನೆ, ಶ್ರೀ ಅರುಣ್ ಮಾನಗಾಂವ, ಶ್ರೀ ಆನಂದ್ ಏಣಗಿ, ವಿವೇಕ ಮುನವಳ್ಳಿ ಸಚೀನ ಗಿರಿಜ್ಜನ್ನವರ, ಸಂಜೀವ ಸೊಂಡೂರು, ಶ್ರೀ ಎಂ ಎಸ್ ಅಡವಿ, ಶ್ರೀ ಶಿವಾಜಿ ಬೇವಿನಗಿಡದ ಶ್ರೀ ಉಮೇಶ ಅಳಗೋಡಿ, ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜೆ ಬಿ ಮುನವಳ್ಳಿ, ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಕಾಳಪ್ಪನವರ, ಸಹ ಕಾರ್ಯದರ್ಶಿಗಳಾದ ಶ್ರೀ ಆರ್ ವ್ಹಿ ಹುಂಬಿ ವಕೀಲರು ಸಿ ಎಸ್ ಮುತ್ತಗಿ ವಕೀಲರು, ಬಿ ಕೆ ಕಡಕೋಳ ವಕೀಲರು ಉಪಸ್ಥಿತರಿದ್ದರು.



