ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹುತಾತ್ಮಚೌಕದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಘಟಕದ ನೆತೃತ್ವದಲ್ಲಿ
ಎಂಇಎಸ್ ಪುಂಡರು ಮಾಡಿರುವ ಹಲ್ಲೆಯನ್ನು ಖಂಡಿಸಿ ಟಾಯರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಕನ್ನಡಗರ ಮೇಲೆ ಎಂಇಎಸ್ ಪುಂಡರು ಹಲ್ಲೆ ನಡೆಸಿರುವದು ಖಂಡನೀಯ. ಸರಕಾರ ಇಂತಹ ಪುಮಡರಿಗೆ ಕಡಿವಾಣ ಹಾಕುವಲ್ಲಿ ಮುಂದಾಗಬೇಕು. ಸರಕಾರಿ ನೌಕರರ ಹಿತ ಕಾಪಾಡುವಲ್ಲಿ ಸರಕಾರ ಅಗತ್ಯ ಕ್ರಮವಹಿಸಬೇಕು. ಪದೇ ಪದೇ ಇಂತಹ ಕೃತ್ಯಗಳು ನಡೆಯುತ್ತಿದ್ದು, ಇದಕ್ಕೆ ತಕ್ಕ ಪಾಠ ಕಲಿಸುವಲ್ಲಿ ಕರವೇ ಕಾರ್ಯಕರ್ತರು ಸನ್ನದ್ದರಾಗಿದ್ದು, ಸರಕಾರ ಕೂಡಲೇ ತಪ್ಪಿಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ವಿಜಯಕುಮಾರ ರಾಠೋಡ, ಗೌರವಧ್ಯಕ್ಷ ಜಹೂರ ಹಾಜಿ, ಉಪಾಧ್ಯಕ್ಷ ಕೃಷ್ಣಾ ಬಡಿಗೇರ, ಪ್ರಧಾನ ಕಾರ್ಯದರ್ಶಿ ಆನಂದ ಜಾಧವ,
ಕೃಷ್ಣಾ ರಾಠೋಡ, ಹಣಮಂತ ಕುಲಗೋಡ, ಕುಮಾರ ಲಮಾಣಿ, ಸಾಗರ ಮುನವಳ್ಳಿ, ರಾಜು ರಾಠೋಡ, ಮಹಿಳಾ ಅಧ್ಯಕ್ಷೆ ರೂಪ ಅರಮನಿ, ಉಪಾಧ್ಯಕ್ಷೆ ಶಾರದಾ ಕೇರಿ, ರೆಷ್ಮಾ ಔರಂಗಪಾಷಾ, ಭಾಗೀರತಿ ಭೂಮರೆಡ್ಡಿ, ಬಸಮ್ಮ, ಮಂಜುಳಾ ಬೇಲೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.



