ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದಿ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಾ ವೈದ್ಯಾಧಿಕಾರಿ ನವೀನ ನಿಜಗುಲಿ ಅವರು ಸಭೆಗೆ ತಮ್ಮ ಇಲಾಖೆ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡುತ್ತಿದ್ದಂತೆ ಶಾಸಕ ಅಶೋಕ ಪಟ್ಟಣ ಅವರು ಅಲ್ಲಿನ ಸಮಸ್ಯೆ ಕುರಿತು ಚರ್ಚಿಸುವ ಮೂಲಕ ಎಚ್ಚರಿಕೆ ನೀಡಿದರು.
ಸರಕಾರಿ ಆಸ್ಪತ್ರೆ ಎಂದರೆ ಬಡವರ ಆರೋಗ್ಯ ರಕ್ಷಿಸುವ ಕೇಂದ್ರವಾಗಬೇಕು. ಅದು ಹಣ ಸುಲಿಗೆ ಮಾಡುವ ಕೇಂದ್ರವಾಗಬಾರದು ಎಂದು ಕಡಕ್ಕಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಉಪ ವಿಭಾಗದ ಎಇಇ ಸಭೆಗೆ ಇಲಾಖೆಯ ಪ್ರಗತಿ ಕುರಿತು ವರದಿ ನೀಡುತ್ತಿದ್ದಂತೆ ಪ್ರಶ್ನಿಸಿದ ಶಾಸಕರು, ಶಾಸಕರ ಪ್ರದೇಶಾಭಿವೃದ್ದಿಯಿಂದ ನೀಡಿದ ಅನುದಾನದಲ್ಲಿನ ಕಾಮಗಾರಿಗಳು ಇನ್ನೂ ಆರಂಭಿಸಲಾಗಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದು, ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಸೂಚನೆ ನೀಡಿದರು.
ಮುಖ್ಯವಾಗಿ ತಾಲೂಕಿನ ಎಲ್ಲ ಇಲಾಖೆಗಳಿಗೆ ಬಂದಿರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ನಿಗದಿತ ಸಮಯದಲ್ಲಿ ಕಾಮಗಾರಿ ಕೈಗೊಂಡು ಅವುಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಅಲ್ಲದೇ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಅಲ್ಲದೇ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಪ್ರಗತಿಯ ಕುರಿತು ಸಭೆಗೆ ಮಾಹಿತಿ ನೀಡಿದರು. ಈ ಸಭೆಯಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತಾಲೂಕ್ ಪಂಚಾಯತ್ ಇಒ ಬಸವರಾಜ ಐನಾಪೂರ, ಸೇರಿದಂತೆ ತಾಲೂಕಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಮದುರ್ಗಪಟ್ಟಣದ ತಾ.ಪಂ ಸಂಭಾಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿದರು.

WhatsApp Group
Join Now


