ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕೆ.ಚಂದರಗಿ ಗ್ರಾಮದಲ್ಲಿ ಗುರುವಾರ ಕೃಷಿ ಇಲಾಖೆ ವತಿಯಿಂದ ನಡೆದ ‘ಜಲಾನಯನ ಯಾತ್ರೆ’ ವಾಹನಕ್ಕೆ ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕರು ಎಸ್ ಎಸ್ ಪಾಟೀಲ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ರೈತರು ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದು ಅತಿ ಅವಶ್ಯಕ. ಮಣ್ಣಿನ ಸವಕಳಿ ತಪ್ಪಿಸಲು ಬದುಗಳನ್ನು ನಿರ್ಮಿಸಿಕೊಳ್ಳಬೇಕು. ಬೇಸಿಗೆ ಆರಂಭವಾಗಿದ್ದು ನೀರಿನ್ನು ಮಿತವಾಗಿ ಬಳಸಬೇಕು. ಹನಿ ನೀರಾವರಿ ಸೇರಿದಂತೆ ವಿವಿಧ ಘಟಕಗಳನ್ನು ಬಳಸಿಕೊಳ್ಳಬೇಕು ಎಂದರು.
ಈ ವೇಳೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್ ಎಫ್ ಬೆಳವಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಉಪ ಕೃಷಿ ನಿರ್ದೇಶಕರು ಎಸ್ ಬಿ ಕೊಂಗವಾಡ, ಬಸಲಿಂಗಯ್ಯ ಕ ಹಿರೇಮಠ ಶ್ರೀಗಳು,ಬಾಳನ ಗೌಡ ಮ ಪಾಟೀಲ್,ಎಸ್ ಎಸ್ ಮುದೇನೂರ ಕೃಷಿಕ ಸಮಾಜ ಅಧ್ಯಕ್ಷರು,ರಾಜು ಕಾಂಬಳೆ ಎಸಿಎಫ್ ಬೆಳಗಾವಿ,ಲಕ್ಕವ್ವ ರುದ್ರಪ್ಪ ವಗ್ಗರ್ ಅಧ್ಯಕ್ಷರು ಗ್ರಾಮ ಪಂಚಾಯತ್ ಗೊಡಚಿ, ಈರನಗೌಡ ಪಾಟೀಲ್, ಎಸ್ ಬಿ ವಾಲಿಕಾರ್ ಕೃಷಿ ಅಧಿಕಾರಿ ರೈತ ಸಂಘ ಕೆ. ಚಂದರಗಿ, ಜಿ. ಬಿ ವಿಶ್ವನಾಥ್. ಕೃಷಿ ಇಲಾಖೆ ಸಿಬ್ಬಂದಿ ವರ್ಗದವರು, ಪಾಲ್ಗೊಂಡಿದ್ದರು



