ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಶ್ರೀ ಕಾಯಕಯೋಗಿ ಶಿವಶರಣರ ಜಯಂತಿಯನ್ನು
ಸವದತ್ತಿಯ ಜನಪ್ರಿಯ ಶಾಸಕರಾದ ವಿಶ್ವಾಸ್ ವಸಂತ್ ವೈದ್ಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು,
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಜಾತ ನಾಗಲಿಂಗ ಮಹಾಸ್ವಾಮಿಗಳು ಚಿಕ್ಕುಂಬಿ , ಶಿವಾನಂದ ಮಹಾಸ್ವಾಮಿಗಳು ಬ್ರಹ್ಮಾರೂಢ ಮಠ ಸವದತ್ತಿ ಹಾಗೂ ಶ್ರೀ ಪರಮಪೂಜ್ಯ ಭಾರ್ಗವಗಿರಿ ಮಹಾಸ್ವಾಮಿಗಳು ಸಾಕಿನ್ ಹೂಲಿಕಟ್ಟಿ ವಸಿಕೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷರಾದ ಶ್ರೀಮತಿ ಚಿನ್ನವ ಹುಂಚಣ್ಣವರ ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ್ ಹೆಗನ್ನವರ್ , ಸಮಾಜ ಕಲ್ಯಾಣ ಅಧಿಕಾರಿಗಳಾದ ಆರ್ .ಆರ್ ಕುಲಕರ್ಣಿ, ಆಗಮಿಸಿದ್ದರು.ಹಾಗೂ ವಿಶೇಷ ಉಪನ್ಯಾಸಕರಾಗಿ ಸೋಮಪ್ಪ ಮಾಳಗಿಯವರು ಕಾಯಕಯೋಗಿ ಶಿವಶರಣರು ಹಾಗೂ ವಚನಕಾರರಾದ ಶ್ರೀ ಮಾದಾರ ಚೆನ್ನಯ್ಯ, ಮಾದರ ಧೂಳಯ್ಯ , ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಕುರಿತು ಉಪನ್ಯಾಸ ನೀಡಿದರು.ಮತ್ತು ವಿಶೇಷ ಉಪನ್ಯಾಸಕರಾಗಿ ಆನಂದ ಏಣಗಿ ವಕೀಲರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಎಸ್ ಎಸ್ ಕಾಳಪ್ಪನವರ ವಕೀಲರು ನಿರ್ವಹಿಸಿದರು. ಮತ್ತು ಕಾರ್ಯಕ್ರಮಕ್ಕೆ ಸಮಾಜದ ಮುಖಂಡರಾದ ಶ್ರೀ ಯಲ್ಲಪ್ಪ ಗೊರವಿನಕೊಳ್ಳ, ಶ್ರೀ ಶಾಸ್ತ್ರಿ ಕಾಳಪ್ಪನವರ, ಮಹಾದೇವ ಬಡ್ಲಿ, ಪ್ರಕಾಶ್ ಹಾಸಟ್ಟಿ, ಪ್ರಕಾಶ್ ಮಲ್ಲೂರ್, ನಾಗಣ್ಣ ಬಡೆಪ್ಪನವರ, ಸಂತೋಷ್ ಮಾದರ, ಹನುಮಂತ ಮ್ಯಾಗೇರಿ, ಹನುಮಂತ ಹಾಸಟ್ಟಿ, ಕೃಷ್ಣ ಹಲಗಿ, ಅರುಣ ಹಲಕಿ, ಅಪ್ಪು ಕಾಳಪ್ಪನವರ, ಹಾಗೂ ಸಮಾಜದ ಹಿರಿಯರು ಯುವಕರೇಲ್ಲರೂ ಕಾರ್ಯಕ್ರಮಕ್ಕೆ ಉಪಸ್ಥಿತರಾಗಿದ್ದರು.



