WhatsApp Group
Join Now
ಹಾವೇರಿ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಮಾರಾಟ ರಾಜಾರೋಷವಾಗಿ ಪಡಿತರ ಅಕ್ಕಿ ಸಂಗ್ರಹ ಮಾಡುತ್ತಿದ್ದಾರೆ. ಜಿಲ್ಲೆಯ ಬಹುತೇಕ ಕಡೆ ನ್ಯಾಯಬೆಲೆ ಅಂಗಡಿಗಳ ಪಕ್ಕದಲ್ಲೇ ಕಾಳಸಂತೆ ಅಂಗಡಿಗಳು ಓಪನ್ ಆಗಿವೆ.
ಪಡಿತರ ಅಕ್ಕಿ ಕಾಳಸಂತೆಕೋರರ ಬಗ್ಗೆ ವರದಿ ಮಾಡಲು ಮಾಧ್ಯಮ ಪ್ರತಿನಿಧಿಗಳು ಸ್ಥಳಕ್ಕೆ ಹೋಗಿದ್ದರು. ಈ ವೇಳೆ ಅಕ್ಕಿ ದಂಧೆ ಕೋರೋರು ದಮಕಿ ಹಾಕಿ ದರ್ಪ ಮೆರೆದಿದ್ದಾರೆ.
ಹಾವೇರಿ ನಗರದ ಅಕ್ಕಿಪೇಟೆಯ ಬಸವರಾಜ ಹಂದ್ರಾಳ ಎಂಬುವವರ ಮನೆಯಲ್ಲಿ ಅನ್ನಭಾಗ್ಯ ಅಕ್ಕಿ ಸಂಗ್ರಹ ಮಾಡಲಾಗಿದೆ. ಈ ಬಗ್ಗೆ ವರದಿ ಮಾಡಲು ಹೋಗಿದ್ದ ಮಾಧ್ಯಮದವರ ಮೇಲೆ ಹಲ್ಲೆ ಮಾಡುವ ಯತ್ನ ನಡೆದಿದೆ.
ಧಮ್ಕಿ ಹಾಕಿ ಹಲ್ಲೆ ಮಾಡಲು ಮುಂದಾದ ಸಚಿನ್ ಕಬ್ಬೂರ್, ವರದಿ ಮಾಡುವ ಸಂದರ್ಭದಲ್ಲಿ ಮಾಧ್ಯಮಗಳ ಕ್ಯಾಮೆರಾ ಧ್ವಂಸ ಮಾಡಿದ್ದಾರೆ.
ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



