ಮಹಿಳೆಯರಿಗಾಗಿ ಕಾನೂನುಗಳು ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ

WhatsApp Group Join Now

ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅಕ್ಕನ ಬಳಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಶ್ರೀ. ಮಹಾಂತ ದುರದುಂಡೇಶ್ವರ ಮಠ, ಯರಗಟ್ಟಿಯಲ್ಲಿ ಹವ್ಮಿುಕೊಳ್ಳಲಾಗಿತ್ತು.

    ಕಾರ್ಯಕ್ರಮದಲ್ಲಿ ಗೌರವಾನ್ವಿತ ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಶ್ರೀ. ಸಿದ್ರಾಮ ರೆಡ್ಡಿ, ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಫಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು  ಭಾರತದಲ್ಲಿ ಮಹಿಳೆಯರನ್ನು ರಕ್ಷಿಸಲು ಮತ್ತು ಅನ್ಯಾಯದಿಂದ ರಕ್ಷಿಸಲು ಅನೇಕ ವಿಶೇಷ ಕಾನೂನುಗಳಿವೆ. ಈ ಕಾನೂನುಗಳು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು ಮಾತ್ರವಲ್ಲದೆ ಯಾವುದೇ ಅಪರಾಧ ಘಟನೆಯ ನಂತರ ಅವರಿಗೆ ವಿವಿಧ ರೀತಿಯ ಕಾನೂನು ರಕ್ಷಣೆಯನ್ನು ಒದಗಿಸುತ್ತವೆ, ಅವರಿಗೆ ಸಾಧ್ಯವಾದಷ್ಟು ಬೇಗ ನ್ಯಾಯ ಸಿಗುತ್ತದೆ ಎಂದರು ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ನಿಯಮ 2006ನ್ನು ವಿವರಿಸಿದರು. ಅಲ್ಲದೇ ಪ್ರತಿಯೊಂದು ಕ್ಷೇತ್ರದಲ್ಲೂ  ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಅವರಿಗಾಗಿ ಇರುವ ಕಾನೂನಿನ ಬಗ್ಗೆ ಅರಿವು ಹೊಂದುವುದು ಬಹಳ ಮುಖ್ಯ. ಕಾಯ್ದೆಯ ಬಗ್ಗೆ ತಿಳುವಳಿಕೆ ಇದ್ದರೆ ಮತ್ತಷ್ಟು ಸದೃಡವಾಗಲು ಸಾಧ್ಯ ಎಂದು ಹೇಳಿದರು.

ಉಪನ್ಯಾಸ ಭಾಷಣ ಮಾಡಿದ ನ್ಯಾಯವಾದಿಗಳಾದ ಶ್ರೀ. ಆರ್.ಎಸ್. ಆಲದಕಟ್ಟಿ, ರವರು ಮಾತನಾಡಿ ಪ್ರತಿವರ್ಷ ಮಾರ್ಚ್‌ 8 ರಂದೇ ಮಹಿಳಾ ದಿನ ಆಚರಣೆ ಮಾಡಲಾಗುವುದು ಲಿಂಗಾಧಾರಿತ ದೃಷ್ಠಿಕೋನವು ಮಾನವ ಅಭಿವೃದ್ಧಿಯಲ್ಲಿ ಮಹಿಳೆಯರಿಗೆ ನೀಡಿರುವ ಪರಸ್ಪರ ಸ್ಥಾನಮಾನವನ್ನು ವಿವಿಧ ಅಭಿವೃದ್ಧಿ ಸೂಚ್ಯಾಂಕಗಳಾದ ಶಿಕ್ಷಣ, ಆರೋಗ್ಯ, ಆದಾಯ, ರಕ್ಷಣೆ, ಬದುಕುಳಿಯುವಿಕೆ, ಕೆಲಸದಲ್ಲಿ ಭಾಗವಹಿಸುವಿಕೆ, ನಿರ್ಣಯಗಳ ಕೈಗೊಳ್ಳುವಿಕೆ, ರಾಜಕೀಯದಲ್ಲಿ ಪಾಲ್ಗೊಳ್ಳುವಿಕೆ ಇತ್ಯಾದಿಗಳ ಮೌಲ್ಯಾಂಕನ ಮಾಡುವುದರ ಅವಶ್ಯಕತೆಗೆ ಒತ್ತು ನೀಡುವುದು. ಈ ಸೂಚ್ಯಾಂಕಗಳು ಪುರುಷರು ಮತ್ತು ಮಹಿಳೆಯರ ನಡುವಿನ ಸಾಧನೆಯ ಮಟ್ಟ ಹಾಗೂ ಅಂತರಗಳನ್ನು ಸೂಚಿಸುತ್ತದೆ. ಆದ್ಯತೆಯ ಕ್ಷೇತ್ರಗಳಲ್ಲಿ ನಿಯಮಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ಮುಖಾಂತರ ಅಂತರಗಳ ಸುಧಾರಣೆ ಹಾಗೂ ನಿವಾರಣೆ ಸರ್ಕಾರದ ಕಾಳಜಿಯಾಗಿರುತ್ತದೆ. ಎಂದರು.

ಅತಿಥಿ ಬಾಷಣ ಮಾಡಿದ ಅಕ್ಕನ ಬಳಗದ ಸದಸ್ಯರಾದ ನಿರ್ಮಲಾ ನಿಜಗುಲ್ಲಿ ರವರು ಪ್ರಸ್ತುತ ವಿದ್ಯಮಾನಗಳಲ್ಲಿ ಕಂಡುಬಂದ ಮಹಿಳೆಯರ ಕೊಡುಗೆ, ಅವರ ಪಾತ್ರ, ಪ್ರಾಮುಖ್ಯತೆ, ಮಹಿಳೆಯರ ಸ್ಥಾನಮಾನ, ಗೌರವ, ಅವರ ಕೊಡುಗೆ, ಹಕ್ಕುಗಳು, ಪ್ರಜಪ್ರಭುತ್ವದಲ್ಲಿ ಅವರಿಗೆ ಸಿಗಬೇಕಾದ ಸ್ಥಾನಗಳು, ಅವಕಾಶಗಳು.. ಹಲವು ಅಂಶಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಯರಗಟ್ಟಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎಸ್.ಆರ್.ರೆಬ್ಬನ್ನವರ, ಉಪಾಧ್ಯಕ್ಷರಾದ ವಿ.ಜಿ.ಬಿರಾದಾಪಾಟೀಲ, ಸಹಾಯಕ ಸರ್ಕಾರಿ ಅಭಿಯೋಜಕರಾದ ಎಸ್.ಎಸ್.ಅಂಗಡಿ, ಹಾಗೂ ಅಕ್ಕನ ಬಳಗದ ಅಧ್ಯಕ್ಷರಾದ ಉಮಾದೇವಿ ಪೂರ್ವಿಮಠ, ಸದಸ್ಯರಾದ ಸುಮಂಗಲಾ ಬಾಳಿ ಮತ್ತು ನ್ಯಾಯವಾದಿಗಳಾದ ಎಸ್.ವಿ. ಮಾಳಕ್ಕನವರ, ಆರಿ.ಬಿ.ಪಕಾಲಿ, ಈ.ಎಮ್.ನಾಯ್ಕರ ಇತರರು ಉಪಸ್ಥಿತರಿದ್ದರು.

ನ್ಯಾಯವಾದಿಗಳಾದ ಎಮ್.ಎಮ್. ಮಡಿವಾಳರ ಸ್ವಾಗತಿಸಿ, ನಿರೂಪಿಸಿದರು. ವಿ.ಬಿ. ಹೊಸಮನಿ ವಂದಿಸಿದರು.

About The Author