ಕ್ಷೇತ್ರ ಮಟ್ಟದಲ್ಲಿನ ಅಧಿಕಾರಿ ಸಿಬ್ಬಂದಿಗಳು ಕಂದಾಯ ಇಲಾಖೆ ಸೈನಿಕರು;ಬಾಕಿ ಇರುವ ಸೌಲಭ್ಯ ನೀಡಲು ಬದ್ಧ: ಜಿಲ್ಲಾಧಿಕಾರಿ ದಿವ್ಯ ಪ್ರಭು

WhatsApp Group Join Now

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ನೌಕರರಿಗೆ ಕಾಲಮಿತಿ ಬಡ್ತಿ ಆದೇಶ ಪತ್ರಗಳನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು
ವಿತರಿಸಿ, ಮಾತನಾಡಿದರು.

ಕಂದಾಯ ಇಲಾಖೆಗೆ ಇಡೀ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನವಿದ್ದು, ಮಾತೃ ಇಲಾಖೆ ಆಗಿದೆ. ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಕ್ಷೇಮ, ಸಂತೋಷ ಮುಖ್ಯವಾಗಿದೆ. ಎಲ್ಲರೂ ಸಂತೋಷದಿಂದ ಕೆಲಸ ಮಾಡಿದರೆ ನಿಷ್ಪಕ್ಷಪಾತವಾಗಿ, ತ್ವರಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ಬೇಡಿಕೆಗಳಲ್ಲಿ ಜಿಲ್ಲಾ ಹಂತದ ಪರಿಹರಿಸುವ ಪ್ರಕರಣಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡಲಾಗುತ್ತದೆ ಎಂದು ಹೇಳಿದರು.

ಕಳೆದ 10,20,30 ವರ್ಷಗಳಿಂದ ಬಾಕಿ ಉಳಿದಿದ್ದ ಕಾಲಮಿತಿ ಬಡ್ತಿ ಆದೇಶಗಳನ್ನು ಪರಿಶೀಲಿಸಿ, 10 ವರ್ಷಗಳ 30, 15 ವರ್ಷಗಳ 20, 25 ವರ್ಷಗಳ 1, 30 ವರ್ಷಗಳ ಒಂದು ಪ್ರಕರಣ ಸೇರಿ ಎಸ್.ಡಿ.ಎ., ಎಫ್.ಡಿ.ಎ., ವಿ.ಎ ಮತ್ತು ಗ್ರೂಪ್ ಡಿ ಯ ಒಟ್ಟು 62 ಜನರಿಗೆ ಕಾಲಮಿತಿ ಮುಂಬಡ್ತಿ ನೀಡಿ ಆದೇಶಿಸಲಾಗಿದೆ. ಬರುವ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 10 ವರ್ಷ ಕಾಲಮಿತಿ ಬಡ್ತಿಗೆ ಬರುವ ಪ್ರಕರಣಗಳನ್ನು ತಕ್ಷಣ ವಿಲೇವಾರಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಕಂದಾಯ ಭವನ ನಿರ್ಮಾಣ, ಕ್ರೀಡಾಕೂಟ ಆಯೋಜನೆ, ಕಂದಾಯ ದಿನಾಚರಣೆಗೆ ಅಗತ್ಯ ಅನುದಾನ, ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲು ಅಗತ್ಯ ಕ್ರಮ ವಹಿಸಲಾಗುತ್ತದೆ. ಕುಟುಂಬ ಜೀವನ ಮತ್ತು ವೃತ್ತಿಯನ್ನು ತೃಪ್ತಿಯಿಂದ ಮಾಡಬೇಕು. ಯಾವುದೇ ಬ್ರಷ್ಟಾಚಾರ , ಪಕ್ಷಪಾತ, ನಿಧಾನ ಗತಿ ಅನುಸರಿಸದೇ ನಿಷ್ಪಕ್ಷಪಾತವಾಗಿ ಜನ ಹಿತಕ್ಕಾಗಿ ಸರಕಾರದ ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸಬೇಕೆಂದು ಅವರು ಹೇಳಿದರು.

ಕಂದಾಯ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ ಹಟ್ಟಿಯವರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಪರವಾಗಿ ಜಿಲ್ಲಾಧಿಕಾರಿಗಳನ್ನು ಅಭಿನಂದಿಸಿದರು. ಸರಕಾರದ ಎಲ್ಲ ಯೋಜನೆಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸಿ ಉತ್ತಮ ಹೆಸರು ಕೀರ್ತಿ ತರುವುದಾಗಿ ಸಿಬ್ಬಂದಿಗಳ ಪರವಾಗಿ ಮಾತು ನೀಡಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಸಚಿನ ಮಳಗಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಂದಾಯ ಇಲಾಖೆ ನೌಕರರಾದ ಸೈಯದ್ ಬನ್ನಿಮಟ್ಟಿ, ಸಹನಾ ಪೂಜಾರಿ, ಮಂಜುನಾಥ ಬಾಗೋಡಿ, ಜಯಶ್ರೀ ಕಟ್ಟಿಮನಿ ಅವರಿಗೆ ಜಿಲ್ಲಾಧಿಕಾರಿಗಳು ಸಾಂಕೇತಿಕವಾಗಿ ಆದೇಶ ಪತ್ರ ವಿತರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಂದಾಯ ನೌಕರರ ಸಂಘದ ಪರವಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ನಾಸೀರ ಅಮರಗೋಳ, ಪದಾಧಿಕಾರಿ ಪ್ರವೀಣ ಕುಲಕರ್ಣಿ, ಸರಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ, ಹಿರಿಯ ಉಪಾಧ್ಯಕ್ಷ ಡಾ.ಸುರೇಶ ಹಿರೇಮಠ, ನಿರ್ದೇಶಕ ಮಹೇಶ ನಾಗವ್ವನವರ, ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ವಿರೇಶ ಪಡೆಸೂರ, ತಾಲೂಕು ಅಧ್ಯಕ್ಷ ಪರಮಾನಂದ ದಡ್ಡಿನವರ, ಶಿರಸ್ತೆದಾರರಾದ ಮಂಜುನಾಥ ಗೊಳಪ್ಪನವರ, ಪರೀಕ್ಷಿತ ಲಾಲ ಬೇಗ, ಕಂದಾಯ ನೌಕರರ ಸಂಘದ ಧಾರವಾಡ ತಾಲೂಕಾ ಅಧ್ಯಕ್ಷ ರಮೇಶ ಬಂಡಿ, ಸಹಾಯಕ ನಿರ್ದೇಶಕ ರಾಜಶೇಖರ ಕಂಠೆಪ್ಪಗೌಡರ, ಜಿಲ್ಲಾಧಿಕಾರಿಗಳ ಆಪ್ತಸಹಾಯಕರಾದ ಸಾಗರ ಪಡ್ನಿಸ್, ದರ್ಶನ ಎಸ್.ಅರಳಲೆಮಠ, ವಿನಾಯಕಸ್ವಾಮಿ ಬಿಸಳಳ್ಳಿ, ಭವಾನಿ ಗರುಡ್, ಸವಿತಾ ಬಳಗಾನೂರ ಸೇರಿದಂತೆ ಇತರ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.

About The Author