ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದೆ ಪರದಾಡಬೇಕಾದ ಸ್ಥಿತಿಯಿದೆ.

ರಾಮದುರ್ಗ ತಹಸೀಲ್ದಾರ್ ಕಚೇರಿಗೆ ಬರುವ ಸಾರ್ವಜನಿಕರಿಗೆ ತುರ್ತು ಬೇಕಾಗಿರುವ ಶೌಚಾಲಯದ ವ್ಯವಸ್ಥೆ ಕಲ್ಪಿಸದೇ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ.
ಇರುವ ಶೌಚಾಲಯದ ಬಾಗಿಲನ್ನು ಬಂದ್ ಮಾಡುವ ಮೂಲಕ ಸಾರ್ವಜನಿಕರ ಉಪಯೋಗದಿಂದ ದೂರವಿರಿಸಿದ್ದು, ಕಚೇರಿಗೆ ಆಗಮಿಸುವ ಸಾರ್ವಜನಿಕರು ಶೌಚಾಲಯಕ್ಕಾಗಿ ಕಚೇರಿಯ ಬಲಕ್ಕಿನ ಭಾಗದ ಗೋಡೆ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದ್ದರಿಂದ ವಾತಾವರಣ ದುರ್ನಾತದಿಂದ ಕೂಡಿದೆ. ಮಹಿಳೆಯರು ಪರದಾಡಬೇಕಾದ ಸ್ಥಿತಿಯಿದೆ.
ಎಲ್ಲೆಡೆ ಶೌಚಾಲಯ ನಿರ್ಮಿಸಿ ಶುಚಿತ್ವ ಕಾಪಾಡುವಂತೆ ಸರ್ಕಾರಗಳು ಘೋಷಣೆ ಕೂಗುತ್ತಿದ್ದು, ಕೇಂದ್ರ ಸರ್ಕಾರದಿಂದ ಸ್ವಚ್ಛ ಭಾರತ್ ಅಭಿಯಾನ್ ಅಡಿಯಲ್ಲೂ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸ್ವಚ್ಛ ಭಾರತ್ ಅಭಿಯಾನದ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ತಾಲೂಕು ಆಡಳಿತದವರು ತಮ್ಮ ಕಚೇರಿಗೆ ಬರುವ ಸಾರ್ವಜನಿಕರಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸದೇ ಇರುವದು ವಿಪರ್ಯಾಸವೇ ಸರಿ.

ಗ್ರಾಮೀಣ ಭಾಗದಿಂದ ಬೆಳಗ್ಗೆಯೇ ತಾಲೂಕು ಕಚೇರಿಗೆ ಆಗಮಿಸುವ ಸಾರ್ವಜನಿಕರು ತಕ್ಷಣಕ್ಕೆ ಕೆಲಸ ಆಗದೇ ಇರುವದರಿಂದ ಸಂಜೆಯವರೆಗೂ ಕಚೇರಿಯಲ್ಲೇ ಇರಬೇಕಾಗುತ್ತದೆ. ಕಚೇರಿ ಕೆಲಸ ಕಾರ್ಯಗಳಿಗೆ ಗಂಟೆಗಟ್ಟಲೆ ಕಾಯುವ ಸಾರ್ವಜ ನಿಕರು ಮೂತ್ರ ವಿಸರ್ಜನೆಗೂ ಪರದಾಡಬೇಕಾದ ಸ್ಥಿತಿಯಿದೆ.

ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಕಚೇರಿ, ಚುನಾವಣಾ ಶಾಖೆ, ಖಜಾನಾಧಿಕಾರಿಗಳ ಕಚೇರಿ, ಆಹಾರ ಇಲಾಖೆ, ಕಂದಾಯ ಇಲಾಖೆ , ಸಮಾಜ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ನೊಂದಣಿ ಇಲಾಖೆ, ಗ್ರಾಮ ಲೆಕ್ಕಿಗರು, ಭೂ ಮಾಪನ, ಭೂಮಿ ಶಾಖೆ, ನಾಡಕಚೇರಿ , ಶಿರಸ್ತೇದಾರ್ ಕಚೇರಿಗಳಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಸರ್ಕಾರಿ ದಾಖಲಾತಿಗಳಿಗೆ ತಾಲೂಕು ಕಚೇರಿಗೆ ಭೇಟಿ ನೀಡುತ್ತಾರೆ. ಆದರೆ ಸಾರ್ವಜನಿಕರಿಗೆ ಮೂಲಭೂತ ಅವಶ್ಯಕತೆಯಾದ ಶೌಚಾಲಯವೇ ಇಲ್ಲದಿರುವದು ದುರಂತ. ತಾಲೂಕು ದಂಡಾಧಿ ಕಾರಿಗಳ ಕಚೇರಿಯಲ್ಲೇ ಇಂತಹ ಅವ್ಯವಸ್ಥೆಯಿರುವದು ಸಂಕೋಚದ ಸಂಗತಿ ಇದರ ಬಗ್ಗೆ ಸಂಚಾರಿ ಸತ್ಯಪತ್ರಿಕೆ ಜಿಲ್ಲಾ ವರದಿಗಾರ ಹಾಗೂ ಮಾಹಿತಿ ಹಕ್ಕು ಹೋರಾಟಗಾರ, ಸಮಾಜ ಸೇವಕರಾದ ಪ್ರಶಾಂತ್ ಅಂಗಡಿ ಅವರು ರಾಮದುರ್ಗ ತಹಶೀಲ್ದಾರ ಹಾಗು ತಾಲೂಕಾ ದಂಡಾಧಿಕಾರಿಗಳಾದ ಪ್ರಕಾಶ ಹೊಳೆಪ್ಪಗೋಳ ಇವರ ಗಮನಕ್ಕೆ ತಂದರು ಕೂಡ ಇದುವರೆಗೂ ಸಾರ್ವಜನಿಕರಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸದೇ ಇರುವದು ಬೇಸರದ ಸಂಗತಿ ಯಾಗಿದೆ ಇದರ ಬಗ್ಗೆ ದಿನಾಂಕ. 21-09-2024 ರಂದು ತಹಶೀಲ್ದಾರ್ ಕಚೇರಿ ಹಾಗೂ ಶಾಸಕರ ಕಾರ್ಯಾಲಯ ರಾಮದುರ್ಗ ಇವರಿಗೂ ಕೂಡ ಒಂದು ಮನವಿಯನ್ನು ಸಲ್ಲಿಸಿದರು ಕೂಡ ಇದುವರೆಗೂ ನನ್ನ ಅರ್ಜಿಗೆ ಯಾವುದೇ ಉತ್ತರ ನೀಡದೆ ಹಾಗೂ ಸಾರ್ವಜನಿಕರಿಗೆ ಶೌಚಾಲಯವನ್ನು ಕಲ್ಪಿಸದೆ ಇರುವುದು ಬೇಸರದ ಸಂಗತಿ ಯಾಗಿದೆ.
ಅಷ್ಟೇ ಅಲ್ಲದೆ ತಹಶೀಲ್ದಾರ್ ಕಚೇರಿಯ ಬಲಕ್ಕಿನ ಭಾಗಕ್ಕೆ ಗಿಡ ಕಂಟಿ ಕಸಗಳು ಬೆಳೆದಿದ್ದು ಇದರಿಂದ ಸಾರ್ವಜನಿಕರು ಶೌಚಾಲಯ ವ್ಯವಸ್ಥೆ ಇಲ್ಲದೆ ಗೋಡೆ ಪಕ್ಕ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ ಬಂದಿದೆ. ಇದಲ್ಲದೆ ಅಲ್ಲಿ ಒಂದು ಜನರೇಟರ್ ಕೂಡ ಇದೆ ಜನರೇಟರ್ ಅನ್ನೋದು ನೋಡದೆ ತಾಲೂಕಾ ಕಚೇರಿಗೆ ಬಂದಂತ ಸಾರ್ವಜನಿಕರು ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ . ಇದರಿಂದ ವಾತಾವರಣ ದುರ್ನಾತದಿಂದ ಕೂಡಿದೆ. ಅಷ್ಟೇ ಅಲ್ಲದೆ ಆ ಜಾಗದಲ್ಲಿ ಕಸ, ಹಳೆಯ ಹರಬಿಗಳನ್ನು ತಂದು ಬಿಸಾಕಿರುತ್ತಾರೆ ಇದ್ದು ತಹಶೀಲ್ದಾರ್ ಕಚೇರಿ ನಾ ಅಥವಾ ಕಸವನ್ನು ಚೆಲ್ಲುವ ಜಾಗೇನ ಎಂಬುದು ಪ್ರಶ್ನೆಯಾಗಿದೆ,

ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಕಚೇರಿ ಒಳಗಡೆ ಪ್ರತ್ಯೇಕ ಶೌಚಾಲಯವಿದೆ. ಅದು ಕೂಡ ದುರಸ್ತಿಯಲ್ಲಿದೆ ಕಚೇರಿಯ ಮೊದಲನೇ ಮಡಿಯಲ್ಲಿ ಇರತಕ್ಕಂತ ಶೌಚಾಲಯ ಯಾರಾದರೂ ಶೌಚಾಲಯ ಉಪಯೋಗ ಮಾಡಿ ಬಂದರೆ ಶೌಚಾಲಯದ ನೀರು ಕಚೇರಿಯ ಎಡಿಕಿನ ಭಾಗದಲ್ಲಿ ಇರತಕ್ಕಂತಹ ಕಾರ್ಮಿಕ ಇಲಾಖೆ ಪಕ್ಕದಲ್ಲಿ ಬೀಳುತ್ತದೆ ಕಾರ್ಮಿಕ ಇಲಾಖೆಗೆ ಬರ್ತಕಂತ ಸಾರ್ವಜನಿಕರಿಗೆ ಆ ನೀರು ಸಿಡಿಯುತ್ತದೆ ಅಷ್ಟೇ ಅಲ್ಲದೆ ಅಲ್ಲಿಯೂ ಕೂಡ ದುರ್ವಾಸನೆ ಬರುತ್ತದೆ.

ತಹಶೀಲ್ದಾರ್ ಕಚೇರಿಯ ಪಕ್ಕದಲ್ಲಿ ಮೊದಲು ಹಾಲಿನ ಅಂಗಡಿ ಇತ್ತು ಶೌಚಾಲಯ ನಿರ್ಮಾಣ ಮಾಡುತ್ತೇವೆ ಎಂದು ಅಂಗಡಿಯನ್ನು ತೆರವುಗೊಳಿಸಿದರು.
ಅದೇ ಜಾಗದಲ್ಲಿ ಕಸ ಕಂಠಿ ಗಿಡಗಳು ಬೆಳೆದಿದ್ದು ಅದನ್ನು ಸಂಪೂರ್ಣ ಸ್ವಚ್ಛತೆಗೊಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೌಚಾಲಯ ನಿರ್ಮಾಣ ಮಾಡಬೇಕು
ಇದರ ಬಗ್ಗೆ ಆದಷ್ಟು ಬೇಗ ತಾಲೂಕು ಆಡಳಿತ ಹಾಗೂ ರಾಮದುರ್ಗ ಶಾಸಕರು ಇತ್ತ ಕಡೆ ಗಮನ ಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ವಿನಂತಿ.



