WhatsApp Group
Join Now
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಹೊಸೂರು ಓಣಿಯಲ್ಲಿ ಲಿಂಗರಾಜ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸುಮಾರು 15 ವರ್ಷಗಳ ಹಿಂದೆಯೇ ಈ ಕಲ್ಯಾಣ ಮಂಟಪವನ್ನು ಬೆಳಗಾವಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ಮಾಣ ಮಾಡಲಾಗಿದೆ ಬಿದ್ದ ಕಲ್ಯಾಣ ಮಂಟಪ ಮತ್ತು ಕಲ್ಯಾಣ ಮಂಟಪದ ಕಿಟಕಿ ಮತ್ತು ಬಾಗಿಲುಗಳು ಒಡೆದು ಹೋಗಿವೆ. ಮೇಲ್ಚಾವಣಿ ಕೂಡ ಬೇಗ ದುರಸ್ತಿಯಲ್ಲಿದೆ ಹಾಗೂ ಈ ಕಲ್ಯಾಣ ಮಂಟಪಕ್ಕೆ ಸರಿಯಾಗಿ ರಸ್ತೆ ಕೂಡ ಇಲ್ಲ ಅದಷ್ಟು ಶಿರಸಂಗಿ ಲಿಂಗರಾಜ ಟ್ರಸ್ಟಿನ ಅಧ್ಯಕ್ಷರಾದ ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಸವದತ್ತಿ ತಹಶೀಲ್ದಾರ್ ಅವರು ಇದರ ಕಡೆ ಗಮನ ಹರಿಸಿ ಶಿರಸಂಗಿ ಗ್ರಾಮದ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಸಮಾಜಸೇವಕರಾದ ಬಸವರಾಜ ಕಲ್ಲಪ್ಪ ಕಟಕೋಳ ವಕೀಲರು, ಮತ್ತು ಪ್ರಶಾಂತ ಶಿವಪ್ಪ ಅಂಗಡಿ ಅವರು ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ ಇವರಿಗೆ ಮನವಿ ಸಲ್ಲಿಸಿದರು.



