14 August 2026
Advertisement
ರಾಜ್ಯ

ಬೆಳಗಾವಿ ಅಂಗನವಾಡಿ ಸಹಾಯಕಿಯಿಂದ 15 ಸಾವಿರ ರೂ. ಹಣ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ

WhatsApp Group Join Now

ಬೆಳಗಾವಿಯ ಅಂಗನವಾಡಿ ಸಹಾಯಕಿಯ ವರ್ಗಾವಣೆಗೆ 30 ಸಾವಿರ ರೂ. ಲಂಚ ಕೇಳಿದ್ದ ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಹಾಗೂ ಇಲಾಖೆಯ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇಲಾಖೆ ಕಂಪ್ಯೂಟ‌ರ್ ಆಪರೇಟ‌ರ್ ಸೌಮ್ಯಾ ಬಡಿಗೇರ್ ಹಾಗೂ ಸೂಪರಿಂಟೆಂಡೆಂಟ್ ಅಬ್ದುಲ್ ವಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಅಧಿಕಾರಿಗಳು. ಇಬ್ಬರು ಸೇರಿ, ಹುಕ್ಕೇರಿ ಮೂಲದ ಅಂಗನವಾಡಿ ಸಹಾಯಕಿ ಶಕುಂತಲಾ ಕಾಂಬ್ಳೆಯವರ ವರ್ಗಾವಣೆಗೆ 30 ಸಾವಿರ ರೂ. ಹಣದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅಂಗನವಾಡಿ ಸಹಾಯಕಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಅಂಗನವಾಡಿ ಸಹಾಯಕಿಯಿಂದ ಅಧಿಕಾರಿಗಳು 15 ಸಾವಿರ ರೂ. ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

About The Author