ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಎಂಎಲ್‌ಬಿಸಿ ಯಲ್ಲಿರುವ ಲಯನ್ಸ್ ಕ್ಲಬ್ ದಲ್ಲಿ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಪ್ರಭಾಕರ್.ವಿ.ಕಂಬಾರ್, ಬಿ.ಪಿ ಅರಳಿಮಟ್ಟಿ, ಸುನಿಲ್ ಹೊಂಗಲ್, ಬಾಬನ್ನ ಪತ್ತೆಪುರ್, ವಿಜಯಕುಮಾರ್ ದಿಂಡವಾಡ, ವೆಂಕಟೇಶ್ ಬಿ ಹಿರೇರಡ್ಡಿ ಹಾಗೂ ಸಿಬ್ಬಂದಿ ವರ್ಗ ಮತ್ತು ಎನ್ ಸಿಡಿ ಪ್ರಯೋಗಶಾಲೆ ತಂತ್ರಜ್ಞರಾದ ಅಲ್ಲಸಾಬ ಆರ್ ಭಗವಾನ ಹಾಗೂ ಆಪ್ತ ಸಮಾಲೋಚಕರಾದ ಶಂಕರ್ ಮ ಲಕಾಟಿ ಮಾತನಾಡುತ್ತಾ ಇಂದು ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆಯನ್ನು ಪ್ರತಿವರ್ಷ ಮೇ 17 ರಂದು ಈ ದಿನವನ್ನು ಆಚರಿಸಲಾಗುತ್ತದೆ ಅಧಿಕ ರಕ್ತದೊತ್ತಡ ಉಂಟಾಗಲು ಪ್ರಮುಖ ಕಾರಣಗಳು ಎಂದರೆ ಅಸಮರ್ಪಕ ಜೀವನಶೈಲಿ, ಗುಣಮಟ್ಟವಲ್ಲದ ಆಹಾರ ಸೇವನೆ ಹಾಗೂ ಜಡ ಜೀವನಶೈಲಿ, ಮಾನಸಿಕ ಒತ್ತಡ ಅಧಿಕ ರಕ್ತದೊತ್ತಡವನ್ನು ಸರಿಯಾದ ಸಮಯಕ್ಕೆ ಗುರುತಿಸಿ ಪರಿಹರಿಸಿಕೊಳ್ಳದೇ ಇದ್ದರೆ, ಹೃದ್ರೋಗಗಳು ಅಥವಾ ಪಾರ್ಶ್ವವಾಯುವಿನಂತಹ ಗಂಭೀರ ಅಪಾಯಕ್ಕೆ ಕಾರಣವಾಗಬಹುದು ಎಂದು ಹೇಳಿದರು. ಈ ಕಾರ್ಯಕ್ರಮಕ್ಕೆ ಬಂದಿರುವ ಎಲ್ಲರ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ಮಾಡಲಾಯಿತು.



