ಬಕ್ರೀದ್ ಹಬ್ಬದ ನಿಮಿತ್ಯ ಸಿ ಪಿ ಐ ವಿನಾಯಕ ಬಡಿಗೇರ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬಕ್ರೀದ್ ಹಬ್ಬ ಆಚರಣೆ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಹಿಂದೂ ಮುಸ್ಲಿಂ ಮುಖಂಡರೊಂದಿಗೆ ಸಿ ಪಿ ಐ ವಿನಾಯಕ ಬಡಿಗೇರ್ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು ರಾಮದುರ್ಗ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನಿಂದಲೂ ಸೌಹಾರ್ದತೆಯಿಂದ ಹಬ್ಬ ಆಚರಿಸಿಕೊಂಡು ಬರಲಾಗಿದೆ, ಮುಂದಿನ ದಿನಗಳಲ್ಲೂ ಇದೇ ಸಂಸ್ಕೃತಿ ಮುಂದುವರಿಸಿಕೊಂಡು ಹೋಗಬೇಕು,ಸಾಮೂಹಿಕ ಪ್ರಾರ್ಥನೆಗೆ ತೆರಳುವಾಗ ಸಾರ್ವಜನಿಕರಿಗೆ ತೊಂದರೆಯಾಗದಂತೆ, ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಸಮುದಾಯದ ಮುಖಂಡರು ನಿರ್ವಹಣೆ ಮಾಡಬೇಕು, ಹೆಚ್ಚಿನ ಗದ್ದಲ ಗಲಾಟೆಯಾಗದಂತೆ ನಿಗಾವಹಿಸಬೇಕು ಎಂದು ತಿಳಿಸಿದರು.

ಪಿಎಸ್ಐ ಸುನಿತಾ ಮುನ್ಯಾಳ ಮಾತನಾಡಿ, ‘ಇದೇ 7ರಂದು ನಡೆಯಲಿರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಮುಖಂಡರು ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಬಕ್ರೀದ್ ಹಬ್ಬವನ್ನು ಆಚರಣೆ ಮಾಡಬೇಕು ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ,ಶಬ್ಬೀರ್ ಅಹ್ಮದ್ ಕಾಜಿ, ಮಾತನಾಡಿ ಸಲೇಹೆ ಸೂಚನಗಳು ನೀಡಿದರು.

ಈ ಸಂಧರ್ಭದಲ್ಲಿ ಅಂಜುಮನ್ ಇಸ್ಲಾಂ ಕಮೀಟಿಯ ಅಧ್ಯಕ್ಷ, ಶಬ್ಬೀರ್ ಅಹ್ಮದ್ ಕಾಜಿ, ಶ್ರಯಸ್ ವಾಲಿ, ಶಫಿ ಬೆಣ್ಣಿ, ಚನ್ನಪ್ಪ ಮಾದರ, ಜಹುರ್ ಹಾಜಿ, ತೌಕೀರ್ ಖತಿಬ್,ರಾಜು ಶಲವಡಿ, ಗೈಬು ಜೈನೆಖಾನ,ಸುಭಾಸ್ ಗೋಡಖೆ ಇನ್ನು ಹಿಂದೂ ಮುಸ್ಲಿಂ ಮುಖಂಡರು ಯುವಕರು ಉಪಸ್ಥಿತರಿದ್ದರು.

About The Author