ಸವದತ್ತಿ ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು.

WhatsApp Group Join Now

ಸವದತ್ತಿ ಲೋಕೋಪಯೋಗಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿರುವ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಆಶ್ರಯಗೂಡು ಆಗಿರುವ ನಿಲಯದಲ್ಲಿ ವಿದ್ಯಾಭ್ಯಾಸಗಳಿಗೆ ಯಾವುದೇ ಅಡಚಣೆಗಳು ಆಗಬಾರದು, ನಿಲಯದಲ್ಲಿ ಸುಸಜ್ಜಿತವಾದ ಲೈಬ್ರೆರಿ, ಕಂಪ್ಯೂಟರ್, ಕೆಲವೊಂದು ಕ್ರೀಡೆಗಳಿಗೆ ಸಂಬಂಧಿಸಿದ ಸಾಮಗ್ರಿಗಳು ಹಾಗೂ ವಿದ್ಯಾರ್ಥಿಗಳಿಗೆ ಊಟ ತಿಂಡಿ ಯಾವುದೇ ಅಡಚಣೆಗಳಾಗದೆ ಸಮಯಕ್ಕೆ ಸರಿಯಾಗಿ ಒದಗಿಸಿಕೊಡುವುದು ನಿಲಯದ ಪಾಲಕರು ಹಾಗೂ ಸಿಬ್ಬಂದಿಗಳು ಎಚ್ಚರ ವಹಿಸಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು, ಪುರಸಭೆ ಸದಸ್ಯರು, ಸ್ಥಳೀಯ ಮುಖಂಡರು, ಉಪಸ್ಥಿತರಿದ್ದರು.

About The Author