ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ನ್ಯಾಯಾಧೀಶರ ವಸತಿ ಗೃಹದ ಆವರಣದಲ್ಲಿ “ವಿಶ್ವ ಪರಿಸರ ದಿನಾಚರಣೆ” ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹವ್ಮಿುಕೊಳ್ಳಲಾಗಿತ್ತು.

    ಕಾರ್ಯಕ್ರಮದಲ್ಲಿ  ಗೌರವಾನ್ವಿತ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು  ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ. ಸಿದ್ದರಾಮ ರವರು ಸಸಿಗೆ ನೀರೆರೆಯುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತದೆ ಈ ಕಾರ್ಯಕ್ರಮ  ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮವನ್ನು ಉತ್ತೇಜಿಸುತ್ತದೆ. ಹಾಗೂ ಗಿಡಗಳನ್ನು ನೆಡುವ ಮೂಲಕ, ಮರುಬಳಕೆಯ ಕಾರ್ಯಕ್ರಮಗಳ  ಮೂಲಕ , ಪ್ಲಾಸ್ಟಿಕ ಬಳಕೆಯನ್ನು ಕಡಿಮೆ ಮಾಡುವ ಶಪಥ ಮಾಡುವ ಮೂಲಕ ಈ ದಿನವನ್ನು ಆಚರಿಸಬಹುದು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿ ಭಾಷಣ ಮಾಡಿದ  ಗೌರವಾನ್ವಿತ ಪ್ರ,ಧಾನ ದಿವಾಣಿ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಶ್ರೀ. ಸಿದ್ರಾಮ ರೆಡ್ಡಿ ರವರು ಮಾತನಾಡಿ ವಿಶ್ವ ಪರಿಸರ ದಿನವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಮತ್ತು ಜಾಗತಿಕ ತಾಪಮಾನ ಏರಿಕೆಯ ವಿರುದ್ದ ಹೊರಾಡುವ ಅಗತ್ಯವನ್ನು ನಮಗೆ ಕಲಿಸುತ್ತದೆ. ಈ ದಿನದಂದು ನಾವೆಲ್ಲರೂ ನಮ್ಮ ಭೂಮಿಯನ್ನು ರಕ್ಷಿಸುತ್ತೇವೆ. ನಮ್ಮ ಭವಿಷ್ಯದ ಜನಾಂಗಕ್ಕಾಗಿ ಆರೋಗ್ಯಕರ ಭೂಮಿಯನ್ನು ರೂಪಿಸುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಸಂಜೀವ ಸನ್ಸುದ್ದಿ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ಎಮ್.ಎಸ್. ಹುಬ್ಬಳ್ಳಿ, ಮಹಿಳಾ ಪ್ರತಿನಿಧಿ ನ್ಯಾಯವಾದಿಗಳಾದ ಎಸ್.ವಾಯ್.ಶಿಬಾರಗಟ್ಟಿ,, ನ್ಯಾಯವಾದಿಗಳಾದ ಬಿ.ವಿ.ಮಲಗೌಡರ, ಎನ್.ಎಸ್.ನಾಯ್ಕರ, ಎಸ್.ಎಸ್.ತುರಮರಿ, ಬಿ.ಸಿ.ಪಟ್ಟಣಶೆಟ್ಟಿ, ಎಮ್.ಎನ್.ಪಾಟೀಲ, ಪಿ.ಎಮ್.ಉಪ್ಪಾರ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿಯಾದ ಎಸ್.ಎಸ್.ಕಾಳಪ್ಪನವರ ರವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

About The Author