ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದಿಂದ ಗೊಳಸಂಗಿಗೆ ಹೋಗುವ ಮಾರ್ಗಮಧ್ಯದಲ್ಲಿ ಸರ್ಕಾರಿ ಸ್ವಾಮ್ಯದ ಎಂ ಎಸ್ ಐ ಎಲ್ ಮಳಿಗೆಯೊಂದು ಹಲವು ವರ್ಷಗಳಿಂದ ಬರೀ ಮಾರಾಟ ಮಾತ್ರವಲ್ಲದೆ ಪಕ್ಕದಲ್ಲಿಯೇ ಕುಡಿಸಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಕೂಡ ಇಲ್ಲಿ ಮಾಡಲಾಗಿದೆ.
ಹೀಗಾಗಿ ಅಕ್ಕಪಕ್ಕದ ಗ್ರಾಮಗಳ ಕುಡುಕರ ಪಾಲಿಗೆ ಸ್ವರ್ಗವಾಗಿ ಕಾಣುತ್ತಿದೆ. ಆದರೆ, ಈ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾತ್ರ ನರ ರಾಕ್ಷಸರಾಗಿ ಕುಡುಕರ ಪ್ರಾಣ ಹಿಂಡುವ ವಿಷ ಜಂತುಗಲಾಗಿದ್ದಾರೆ.
ಅದು ಹೇಗೆ ಅಂತೀರಾ, ಹಾಗಿದ್ದರೆ, ಇಲ್ಲಿನ ವಿಡಿಯೋ ವನ್ನು ನೀವು ನೋಡಲೇಬೇಕು. ಇಲ್ಲಿ ಮಾರಾಟ ಮಾಡಲಾಗುವ ಪ್ರತಿಯೊಂದು ಬಗೆಯ ಸಾರಾಯಿ ಬೆಲೆ ಸರ್ಕಾರ ನಿಗದಿ ಮಾಡಿದ ಬೆಲೆಗಿಂತ ಪ್ರತಿ ಕ್ವಾರ್ಟರ್ ಗೆ 5-10 ರೂ., ಹೆಚ್ಚು ಹಣ ಪೀಕುವುದು ಇವರ ರೂಢಿ. ಬಹುತೇಕ ಗ್ರಾಹಕರು ಇದನ್ನು ಪ್ರಶ್ನಿಸದೆ ಅವರು ಕೇಳಿದಷ್ಟು ದುಡ್ಡು ಸುರಿದು ಸಾರಾಯಿ ದಿನವೂ ಖರೀದಿಸುವುದು ಗ್ರಾಹಕರ ದುರ್ದೈವವಾಗಿದೆ.
ಅಪ್ಪಿತಪ್ಪಿ ಯಾರಾದರೂ ಇದನ್ನು ಪ್ರಶ್ನಿಸಿದರೆ ಅವರಿಗೆ ನಯಾಪೈಸೆ ಕಿಮ್ಮತ್ತು ಕೊಡದೆ ಬಾಯಿಗೆ ಬಂದಂತೆ ಈ ಎಂ ಎಸ್ ಐ ಎಲ್ ಸಿಬ್ಬಂದಿ ಬೈಯುತ್ತಾರೆ. ಏ, ನಾವು ಇದೇ ರೇಟ್ ಗೆ ಮಾರಾಟ ಮಾಡ್ತೀವಿ. ಬೇಕಿದ್ದರೆ ತೆಗೆದುಕೋ, ಇಲ್ಲದಿದ್ದರೆ ಸುಮ್ಮನೆ ಇಲ್ಲಿಂದ ಹೊರಡು ಎಂದು ನೇರವಾಗಿ, ಯಾವುದೇ ಭೀತಿ ಇಲ್ಲದೇ ಗ್ರಾಹಕರನ್ನು ಸಾಗಹಾಕುವ ಇವರಿಗೆ ಎಲ್ಲಿಂದ ಧೈರ್ಯ ಬರುತ್ತದೆ ಇಂದು ಬಹುತೇಕ ಗ್ರಾಹಕರು ಹುಬ್ಬೆರಿಸುತ್ತಾರೆ.
ಬಸವನ ಬಾಗೇವಾಡಿ ಕ್ಷೇತ್ರದ ಶಾಸಕರು, ರಾಜ್ಯ ಸರ್ಕಾರದ ಜವಳಿ ಮತ್ತು ಸಕ್ಕರೆ ಸಚಿವರಾದ ಶಿವಾನಂದ ಪಾಟೀಲರ ಪರಮ ಶಿಷ್ಯನಾದ ಭೀಮಶಿ ಜಗ್ಗಲ್ ಇಂಥವನ ಕೊರಳಿಗೆ ಈ ಎಂ ಎಸ್ ಐ ಎಲ್ ಜವಾಬ್ದಾರಿ ನೀಡಿದ್ದಾರೆ. ಆ ಸಚಿವ ಶಿವಾನಂದ ಪಾಟೀಲರ ಹೆಸರನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಮುತ್ತಗಿ ಗ್ರಾಮದ ಈ ಭೀಮಶಿ ಜಗ್ಗಲ್ ಇವನ ಅಳಿಯಂದಿರು ಎಂ ಎಸ್ ಐ ಎಲ್ ನಲ್ಲಿ ಗುಂಡಾ ಸಾಮ್ರಾಜ್ಯವನ್ನೇ ಸೃಷ್ಟಿಸಿದ್ದಾರೆ. ನಿಗದಿತ ದರಕ್ಕಿಂತ ಯಾಕೆ ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದ್ರೆ ನಾವೂ ಸಂಬಂಧಿಸಿದ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಪ್ರತಿ ತಿಂಗಳು 10 ಸಾವಿರ ರೂ., ಲಂಚ ಕೊಡಬೇಕು. ಹೀಗಾಗಿ ನಾವು ನಿಮ್ಮಿಂದ ಕಿತ್ತುಕೊಳ್ಳುತ್ತೇವೆ. ಈಗ ನೀವೇನು ಮಾಡ್ತೀರಾ ಎಂದು ನಿರ್ಭತಿಯಿಂದ ಗ್ರಾಹಕರನ್ನೇ ಪ್ರಶ್ನೆ ಮಾಡುತ್ತಾರೆ.
ಶಾಸಕ, ಸಚಿವ ಶಿವಾನಂದ ಪಾಟೀಲರ ಕೃಪಾಶೀರ್ವಾದದ ಬೆಂಬಲ ತಮಗಿದೆ ಎಂಬ ಹುಂಬತನದಿಂದ ವರ್ತಿಸುವ ಈ ಎಂ ಎಸ್ ಐ ಎಲ್ ಲೈಸೆನ್ಸ್ ನ್ನು ರದ್ದು ಮಾಡುವ ಎದೆಗಾರಿಕೆಯನ್ನು ಸಂಬಂದಿಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಸಚಿವ ಶಿವಾನಂದ ಪಾಟೀಲ ಅವರು ಪ್ರದರ್ಶಿಸಿಯಾರೆ ಎಂದು ಜನಸಾಮಾನ್ಯ ಗ್ರಾಹಕರ ಪ್ರಶ್ನೆಯಾಗಿದೆ.
ಈ ಕುರಿತು ಸಂಚಾರಿ ಸತ್ಯ ಪತ್ರಿಕೆಯ ಉಪಸಂಪಾದಕರಾದ ಅಶೋಕ ರಾಠೋಡ ಅವರು ಪ್ರತ್ಯಕ್ಷ ವರದಿ ತಯಾರಿಸಿಕೊಂಡು ಬಂದಿದ್ದು, ಇನ್ನು ಮುಂದೆ ಯಾವುದೇ ಗ್ರಾಹಕರಿಗೆ ಸರ್ಕಾರ ನಿಗದಿಪಡಿಸಿದ ರೇಟ್ ಗಿಂತ ಹೆಚ್ಚು ಹಣ ಪಡೆದರೆ ಹಿರಿಯ ಪತ್ರಕರ್ತ ಅಶೋಕ ರಾಠೋಡ (98453 78335) ಇವರನ್ನು ಸಂಪರ್ಕಿಸಬಹುದು.



