ರಾಮದುರ್ಗ ಅಗ್ನಿಶಾಮಕದ ನೂತನ ಕಟ್ಟಡವನ್ನು ವಿಧಾನಸಭೆಯ ಮುಖ್ಯ ಸಚೇತ ಅಶೋಕ,ಮ ಪಟ್ಟಣ ಉದ್ಘಾಟಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಅಗ್ನಿಶಾಮಕ ಠಾಣೆಗೆ ನೂತನವಾಗಿ ನಿರ್ಮಿಸಿದ ಕಟ್ಟಡವನ್ನು ವಿಧಾನಸಭೆಯ ಮುಖ್ಯ ಸಚೇತಕರಾದ ಅಶೋಕ,ಮ ಪಟ್ಟಣ ಉದ್ಘಾಟಿಸಿ ಮಾತನಾಡಿದ ಅವರು, ಇಲಾಖೆಯ ಸಿಬ್ಬಂದಿ ದಿನದ 24 ಘಂಟೆಗಳ ಕಾಲ ಸಂಪೂರ್ಣ ಜಾಗೃತರಾಗಿರಬೇಕು. ಅಗ್ನಿ ಅವಘಡಗಳು ನಡೆಯುವುದಕ್ಕೆ ಸಮಯ ಸಂದರ್ಭಗಳು ಇರುವುದಿಲ್ಲ. ತಮ್ಮ ಕಾರ್ಯಾಲಯಕ್ಕೆ ಕರೆ ಬಂದ ತಕ್ಷಣ ಆದಷ್ಟು ಬೇಗ ಸ್ಥಳಕ್ಕೆ ಆಗಮಿಸಿದಲ್ಲಿ ಮಾತ್ರ ಅಧಿಕ ಅನಾಹುತ ತಪ್ಪಿಸಲು ಸಾಧ್ಯವಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಸಸಿ ನೆಟ್ಟು, ನೀರುಣಿಸುವ ಮೂಲಕ ಪರಿಸರ ಪ್ರಜ್ಞೆ ಕುರಿತು ಅಶೋಕ ಪಟ್ಟಣ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಪ್ರಾದೇಶಿಕ ಅಗ್ನಿಶಾಮಕ ಠಾಣೆಯ ಅಧಿಕಾರಿ ಮಂಜುನಾಥ ಸಾಲಿ, ಬೆಳಗಾವಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ ನೀಲಗಾರ, ಧಾರವಾಡ ಅಗ್ನಿಶಾಮಕ ಅಧಿಕಾರಿ ಗೋವಿಂದಪ್ಪ ತೊರಣಗಟ್ಟಿ, ಮುರಗೋಡ ಠಾಣಾಧಿಕಾರಿ ಬಸವರಾಜ ಕರಲಿಂಗನವರ, ಸವದತ್ತಿ ಠಾಣಾಧಿಕಾರಿ ಮಹಾಂತೇಶಯ್ಯ ಗೋಕಾಕ, ರಾಮದುರ್ಗ ಠಾಣಾಧಿಕಾರಿ ಎಂ.ಎಂ. ಕವಡಿ, ಸಹಾಯಕ ಠಾಣಾಧಿಕಾರಿ ಟಿ.ಡಿ. ವಡ್ಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author