ಸವದತ್ತಿ ನ್ಯಾಯವಾದಿಗಳ ಸಂಘದ ಸಬಾಭವನದಲ್ಲಿ ಪ್ರಧಾನ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ. ಎಸ್. ವಾಯ್. ಕಟ್ಟಿಮನಿ ಹಾಗೂ ಪ್ರಧಾನ ಕಿರಿಯ ಶ್ರೇಣಿ ದಿವಾಣಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ. ಡಿ ಡಿ. ಗೌಡರ, ಅವರಿಗೆ ಸವದತ್ತಿ ನ್ಯಾಯವಾದಿಗಳ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಅಯೋಜಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶ್ರೀ. ಜೆ. ಬಿ. ಮುನವಳ್ಳಿ ರವರು ಮಾತನಾಡಿ ಇವರಿಬ್ಬರ ಸೇವೆ ಗಮನಾರ್ಹವಾಗಿದೆ. ನ್ಯಾಯಾಲಯದಲ್ಲಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವಲ್ಲಿ ಇವರಿಬ್ಬರು ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ನಿಷ್ಠೆ ಹಾಗೂ ಪ್ರೀತಿಯಿಂದ ನಿಸ್ವಾರ್ಥ ಸೇವೆಯನ್ನು ನೀಡಿದ್ದಾರೆ. ಇವರಿಬ್ಬರಿಗೂ ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಲಿ ಎಂದು ಶುಭ ಹಾರೈಸಿದರು.
ಅತಿಥಿ ಭಾಷಣ ಮಾಡಿದ ಹಿರಿಯ ನ್ಯಾಯವಾದಿಗಳಾದ ಶ್ರೀ. ಪಿ.ಕೆ. ಬಡಿಗೇರ ರವರು ಮಾತನಾಡಿ ನಿವೃತ್ತ ಶಿರಸ್ಥೇದಾರರಿಬ್ಬರು ಸಹೃದಯದವರು, ಯವುದೇ ಕೆಲಸದ ಒತ್ತಡ ಇದ್ದರೂ ನಗುಮುಖದಿಂದ ಎಲ್ಲ ಕೆಲಸವನ್ನು ಮಾಡುತ್ತಿದ್ದರು. ಇವರಿಬ್ಬರ ನಿವೃತ್ತಿ ಜೀವನ ಸುಖಕರವಾಗಿರಲಿ ಮುಂದೆ ಸಮಾಜಮುಖಿ ಕೆಲಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಎಸ್.ಎಸ್.ಅಂಗಡಿ, ಎಮ್.ವಾಯ್.ದೇವಲಾಪೂರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ಎಮ್.ಎಸ್.ಹುಬ್ಬಳ್ಳಿ, ನ್ಯಾಯವಾದಿಗಳಾದ ವಾಯ್.ಪಿ.ರಾಮಜಾರ, ಎಫ್.ಆಯ್.ಶಿದ್ಲಿಂಗನವರ, ಎಸ್.ಎಸ್.ಹಿರೇಮಠ, ಆರ್.ಎಸ್.ಬಾಳಿ, ಎ.ಎಸ್.ಮಾನಗಾಂವ, ಆರ್.ಎಮ್.ನದಾಫ್, ವಿ.ಎಸ್.ಮುನವಳ್ಳಿ, ಎನ್.ಎಸ್.ನಾಯ್ಕರ, ಪಿ.ಎನ್.ಡೊಳ್ಳಿನ, ಜೆ.ಎಸ್.ಸಂಗ್ರೇಶಕೊಪ್ಪ, ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿಯಾದ ಎಸ್.ಎಸ್.ಕಾಳಪ್ಪನವರ ರವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.



