ಗಾಯದ ಮೇಲೆ ಬರೆ ಎಳೆಯುತ್ತಿರುವ ನಿಡಗುಂದಿ ಸಿಎಲ್-4

WhatsApp Group Join Now

ಗ್ಯಾರಂಟಿ ಯೋಜನೆಗಳನ್ನು ಸರಿದೂಗಿಸುವಲ್ಲಿ ಹೈರಾಣಾಗುತ್ತಿರುವ ರಾಜ್ಯ ಸರ್ಕಾರ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಲೈಸೆನ್ಸ್ ಕೊಟ್ಟ ಪರಿಣಾಮ ಬಾಯಿಗೆ ಬಂದಷ್ಟು ರೇಟ್‌ನಲ್ಲಿ ಸಾರಾಯಿ ಮಾರಾಟ ಮಾಡುವ ಕಟ್ಟ ಚಾಳಿಗೆ ನಾಂದಿ ಹಾಡಿರುವ ಸಂಗತಿ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ನಿಡಗುಂದಿ ಪಟ್ಟಣದ ಬಸ್ ನಿಲ್ದಾಣದಿಂದ ಆಲಮಟ್ಟಿ ಕಡೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿ-50 ರಲ್ಲಿರುವ ಶ್ರೀ ಗುರು ಫ್ರೆಂಡ್ ಕ್ಲಬ್ ನ ಸಿಬ್ಬಂದಿ ರಾಜಾರೋಷವಾಗಿ ಬಾಯಿಗೆ ಬಂದಷ್ಟು ದರದಲ್ಲಿ ಮಧ್ಯ ಮಾರಾಟ ಶುರುವಿಟ್ಟುಕೊಂಡಿದ್ದೆ. ಈ ಮಳಿಗೆಯಲ್ಲಿ ಒಂದು ಕ್ವಾರ್ಟರ್ ರಾಯಲ್ ಸ್ಟ್ಯಾಗ್‌ಗೆ 350 ರೂ., ಗೆ ಮತ್ತು ಬ್ಯಾಗ್ ಪೇಪರ್ (ಬಿಪಿ) ಗೆ 180 ರೂ., ಗಳೀಗೆ ಮಾರಾಟ ಮಾಡಲಾಗುತ್ತದೆ. ಆದರೆ ಇದರ ಎಂಆರ್‌ಪಿ ರೇಟ್ ರಾಯಲ್ ಸ್ಟ್ಯಾಗ್‌ಗೆ 295 ರೂ., ಮತ್ತು ಬಿಪಿಗೆ 155 ರೂ., ಇರುತ್ತದೆ. ಇದು ಕೇವಲ ಎರಡು ಮಧ್ಯದ ರೇಟ್ ಮಾತ್ರ ಇದನ್ನು ಮನಗಂಡ ನಮ್ಮ ಸಂಚಾರಿ ಸತ್ಯ ಟೀಂ ಜೂ.15 ರಂದು ರಿಯಾಲಿಟಿ ಚೆಕ್ ಮಾಡಲು ಹೋದಾಗ ಇದು ಬೆಳಕಿಗೆ ಬಂದಿದೆ. ಆದರೂ ಅವರು ಕೇಳಿದಷ್ಟು ದುಡ್ಡು ನೀಡಿ ಸಾರಾಯಿ ಖರೀದಿಸಿದರೂ ಬಿಲ್ ಕೊಡಲು ಅಲ್ಲಿನ ಸಿಬ್ಬಂದಿ ಸುತಾರಾಂ ತಯಾರಿಲ್ಲ. ನಮಗೆ ಬಿಲ್ ಕೊಡಲೇಬೇಕು ಎಂದು ಪಟ್ಟು ಹಿಡಿದಾಗ.

ಬಿಲ್ ಬೇಕಿದ್ದರೆ ಮಾಲಿಕರು ಬಂದು ಕೊಡುತ್ತಾರೆ. ಅವರು ಬರುವವರೆಗೂ ಕಾಯಿರಿ ಎನ್ನುತ್ತಾನೆ ಇಲ್ಲಿನ ಮ್ಯಾನೇಜರ್ ಪರವಾಗಿಲ್ಲ. ನೀವೇ ಬಿಲ್ ಕೊಡಿ ಎಂದರೆ ನನಗೆ ಬರೆಯಲು ಬರುವುದಿಲ್ಲ. ಅವರು ಬಂದ ಬಳಿಕವಷ್ಟೇ ನಿಮಗೆ ಬಿಲ್ ಕೊಡಲಾಗುವುದು ಎಂದು ಖಡಾಖಂಡಿತವಾಗಿ ಹೇಳುತ್ತಾನೆ ಈ ಆಸಾಮಿ.

ಆಯ್ತು ನಿಮ್ಮ ಮಾಲಿಕರ ಹೆಸರೇನು ಎಂದು ಕೇಳಿದಾಗ ಕಿರಿಶಾಳ ಗ್ರಾಮದ ನಿಜಪ್ಪ ಸಾಗರ ಎಂದು ಇರುತ್ತದೆ. ಇವರು ಅಬಕಾರಿ ಸಚಿವ ಆ‌ರ್.ಬಿ.ತಿಮ್ಮಾಪುರ ಅವರ ಪಿಎ ಇರುತ್ತಾರೆ. ಇವರನ್ನು ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಉಡಾಫೆಯ ಉತ್ತರವನ್ನೂ ನೀಡುತ್ತಾನೆ ಇಲ್ಲಿನ ಮ್ಯಾನೇಜರ್ ಮರಿಯಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಅಸ್ತಿತ್ವಕ್ಕೆ ಬಂದನಂತರ ಈಗಾಗಲೇ 2-3 ಬಾರಿ ರೇಟ್ ಏರಿಕೆಯಿಂದಾಗಿ ಕಂಗಾಲಾದ ಬಡ ಮಾರಾಟ ಮಳಿಗೆಯವರ ಬೆಲೆಯೂ ಕೂಡ ಗಾಯದ ಮೇಲೆ ಬರೆ ಅಂದಾದ್ರಿ ಎಳೆದಂತಾಗಿದೆ. ಇದನ್ನು ಪ್ರಶ್ನಿಸಬೇಕಿದ್ದ ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಅಬಕಾರಿ ನಿರೀಕ್ಷಕರು ಜಾಣ ಕುರುಡತನ ಪ್ರದರ್ಶಿಸುತ್ತಿರುವುದು ಯಾವ ನ್ಯಾಯ..? ಮೇಲಾಗಿ ಈ ಮಳಿಗೆ ಕಟ್ಟಡ ಕೂಡ ಇನ್ನೂ ಸಂಪೂರ್ಣ ಮುಗಿದಿಲ್ಲ. ಸರಿಯಾದ ವ್ಯವಸ್ಥೆ ಕೂಡ ಇಲ್ಲಿ ಇರುವುದಿಲ್ಲ. ಹೀಗಿದ್ದರೂ ಕೂಡ ಗ್ರಾಹಕರು ಇವರು ಕೇಳಿದಷ್ಟು ದುಡ್ಡು ನೀಡಿ ಅವ್ಯವಸ್ಥೆಯ ತಾಣದಲ್ಲಿಯೇ ಮನ ತಣಿಸಲು ಹೇಗೆ ಸಾಧ್ಯ..?

ಸಿಎಲ್-4 ನಿಯಮಗಳೇನು..?

ಒಂದು ಸಿಎಲ್-4 ಮಳಿಗೆ ತೆರೆಯಲು ಕಮರ್ಷಿಯಲ್ಸ್ ಎನ್‌ಎ ಆಗಿರುವ 10 ಗಂಟೆ ಜಾಗ ಬೇಕೇಬೇಕು. ಸಂಬಂಧಿಸಿದ ಆಯ್ತಾ ತಾಲೂಕಿನ 120 ಜನ ಸದಸ್ಯತ್ವ ಹೊಂದಿರಬೇಕು ಅವರು ಮಾತ್ರ ಅಲ್ಲಿ ಸಾರಾಯಿ ಕುಡಿಯಲು ಬರುತ್ತಿರಬೇಕು ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ಇರಬೇಕು. ಅಂದಾಗ ಮಾತ್ರ.ಇದಕ್ಕೆ ಅನುಮತಿ ದೊರಕುವುದು ಆದರೆ ನಿಡಗುಂದಿಯಲ್ಲಿರುವ ಈ ಗುರು ಫ್ರೆಂಡ್ ಕ್ಲಬ್ ನಲ್ಲಿ ಮಾತ್ರ ಇದಾವುದೂ ಲೆಕ್ಕಕ್ಕಿಲ್ಲ. I

ವರದಿ : ಅಶೋಕ ರಾಠೋಡ

About The Author