ದಾವಣಗೆರೆ ಯಲ್ಲಿ ನಡೆದ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್. ಲಾಡ್ ಅವರು ಕರ್ನಾಟಕ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ರಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮನು.ಎಂ. ದೇವನಗರಿ ಇವರಿಗೆ ದಾವಣಗೆರೆ ಜಿಲ್ಲೆಯ ಸಮಸ್ತ ಫೋಟೋಗ್ರಾಫರ್ ಗಳ ಹಾಗೂ ವೃತ್ತಿಬಾಂಧವರ ಪರವಾಗಿ ಅಸಂಘಟಿತ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ನೀಡಿದರು.
ಈ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರ ಇಲಾಖೆಗೆ ಸೇರ್ಪಡೆ ಮಾಡಿದ್ದಕ್ಕಾಗಿ ಸಚಿವರಿಗೆ ರಾಜ್ಯದ ಸಮಸ್ತ ಛಾಯಾಗ್ರಾಹಕರ ಪರವಾಗಿ ದಾವಣಗೆರೆ ಜಿಲ್ಲೆಯ ಛಾಯಾಗ್ರಾಹಕರ ಪರವಾಗಿ ನೆನಪಿನ ಕಾಣಿಕೆ ನೀಡಿ ಶಾಲುವದಿಸಿ ಗೌರವಿಸಲಾಯಿತು, ಹಾಗೂ ಛಾಯಾಗ್ರಾಹಕರ ಕಲ್ಯಾಣ ಮಂಡಳಿ , ಎಲ್ಲಾ ಜಿಲ್ಲೆಗಳಲ್ಲಿ ಛಾಯಾಭವನ, ಫೋಟೋಗ್ರಾಫರ್ ಅಕಾಡೆಮಿ ಸ್ಥಾಪನೆ ಮಾಡುವಂತೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಮಾಧ್ಯಮ ಸಲಹೆಗಾರರಾದ ಮಾಲತೇಶ್ ಅರಸು, ರಾಜ್ಯಕಾರ್ಯಾಧ್ಯಕ್ಷರಾದ ಕೊಂಡಜ್ಜಿ ಎಸ್. ರಾಜಶೇಖರ್, ರಾಜ್ಯಉಪಾಧ್ಯಕ್ಷರು ಡಿ.ರಮೇಶ್, ರಾಜ್ಯಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಕೆ,ರಾಜ್ಯ ಖಜಾಂಚಿ ಶ್ರೀಮತಿ ಎ ಎಸ್ ಸುಮಾ ಕಲ್ಲೇಶ್, ರಾಜ್ಯ ಜಂಟಿ ಕಾರ್ಯದರ್ಶಿ ಡಿ. ರಂಗನಾಥ್, ಜಿಲ್ಲಾಧ್ಯಕ್ಷರು ಬಿ. ಮಂಜುನಾಥ್, ತಾಲೂಕು ಅಧ್ಯಕ್ಷರು ಎಚ್.ಎಫ್ ಸಂಜಯ್ , ಪಂಚಣ್ಣ , ಸುರೇಶ್ , ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು



