ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೋಣ್ಣಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಬರಿಕೊಳ್ಳದ ದೇವಸ್ಥಾನದ ಹಿಂದುಗಡೆ ಸರ್ವೇ ನಂಬರ್ 93/A ಈ ಆಸ್ತಿಯಲ್ಲಿ ಅಕ್ರಮವಾಗಿ ಹಗಲು ಹೊತ್ತಿನಲ್ಲಿ ಮರಂ( ಮಣ್ಣು ) ಸಾಗಾಟ ಸುಮಾರು ತಿಂಗಳಿನಿಂದ ನಡಿತಾ ಇದೆ.


ಪರವಾನಗಿ ಪಡೆಯದೆ ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ಜೆಸಿಬಿ ಮೂಲಕ ಅಗೆದು ಟಿಪ್ಪರ್ ಮೂಲಕ ಮರಂ ಸಾಗಾಣೆ ಮಾಡುತ್ತಿರುವ ದೃಶ್ಯ ಲಭ್ಯವಾಗಿದೆ.
ಇದರ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬೆಳಗಾವಿ ಇವರಿಗೆ ಮಾಹಿತಿ ನೀಡಿದಾಗ ಸೋಮವಾರ ದಿನ ರಾಮದುರ್ಗಕ್ಕೆ ಬರುತ್ತೇವೆ ಎಂದು ಹೇಳಿದರು.

ಸೋಮವಾರ ದಿನ ವರದಿಗಾರರಾದ ಪ್ರಶಾಂತ್ ಅಂಗಡಿ ಹಾಗೂ ಅಂಬರೀಶ್ ಬಟಕುರ್ಕಿ ಅವರು ಅಕ್ರಮ ಮರಂ( ಮಣ್ಣು ) ತುಂಬುವ ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಅಕ್ರಮವಾಗಿ ಮಣ್ಣು ದಂಧೆ ಕೋರರು ಅಧಿಕಾರಿಗಳು ಬರುವ ಮಾಹಿತಿ ಪಡೆದು ಅಲ್ಲಿ ಇದ್ದಂತ ಜೆಸಿಬಿ ಹಾಗೂ ಟ್ರಿಪ್ಪರ್ ವಾಹನಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಸಾರ್ವಜನಿಕರು ಮಾತನಾಡುತ್ತಿರುವುದು ಕೇಳಿ ಬಂದಿದೆ. ಅಕ್ರಮವಾಗಿ ಮರಂ( ಮಣ್ಣು ) ತುಂಬುವ ಸ್ಥಳಕ್ಕೆ ನಾವು ಹೋಗುವಾಗ ರಸ್ತೆ ಕ್ಲಿಯರ್ ಆಗಿ ಇತ್ತು ನಾವು ಅಲ್ಲಿ ವಿಡಿಯೋ ಮಾಡಿ ವಾಪಸ್ ಬರಬೇಕಾದರೆ ಅಕ್ರಮ ದಂಧೆ ಕೋರರು ರಸ್ತೆಯನ್ನು ಹಗೆದು ಹೋಗಿರುತ್ತಾರೆ ಇದರಿಂದ ನಮಗೆ ರಸ್ತೆದಾಟಲು ತೊಂದರೆ ಆಯಿತು.

ಆದರೂ ಕೂಡ ನಮ್ಮ ಪ್ರಯತ್ನ ನಾವು ಬಿಡಲಿಲ್ಲ ಘಟನಾ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕರೆಸಿ ಅಕ್ರಮ ಮರಂ( ಮಣ್ಣು ) ಗಣಿಗಾರಿಕೆ ಮಾಡುತ್ತಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳವನ್ನು ಪರಿಶೀಲನೆ ನಡೆಸಿದರು ಅಕ್ರಮದಂದೆ ಕೋರರು ಎಷ್ಟು ಮಣ್ಣನ್ನು ತೆಗೆದಿರುತ್ತಾರೆ ಎಂಬುವುದನ್ನು ಸರ್ವೆ ಮೂಲಕ ಮಾಪನ ಮಾಡಿ ಅಕ್ರಮವಾಗಿ ಮರಂ( ಮಣ್ಣು ) ತುಂಬಿದವರ ಮೇಲೆ ಕಾನೂನು ಮೂಲಕ ನಾವು ಅವರಿಗೆ ನೋಟಿಸ್ ನೀಡುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದರು

ಸಂಬಂಧಿಸಿದ
ಗ್ರಾಮ ಪಂಚಾಯತ್, ತಾಲೂಕು ಕಚೇರಿಯ ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮೋದನೆ ಪಡೆಯದೆ ಅಕ್ರಮವಾಗಿ ಸಾಗಾಣಿಕೆ ನಡೆದಿದೆ.
ಈ ಬಗ್ಗೆ ಸುರೇಬಾನ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಇದು ನಮಗೆ ಸಂಬಂಧ ಪಟ್ಟಿಲ್ಲ ತಾವು ದೂರು ನೀಡಿದರೆ ಮಾತ್ರ ಕ್ರಮ ಜರುಗಿಸಲಾಗುವುದು ಎಂದು ಹೇಳಿ ಮೌನ ವಹಿಸಿರುವುದು ಸರ್ಕಾರಿ ನೌಕರರು… ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನು ಉಂಟು ಮಾಡುತ್ತಿದ್ದಾರೆ ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.



