ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದಲ್ಲಿ ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತಿ ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಶಿಶು ಅಭಿವೃದ್ಧಿ ಯೋಜನೆ, ರಾಮದುರ್ಗ ಇವರ ಸಂಯೋಗದಲ್ಲಿ ಪೋಷಣ ಅಭಿಯಾನ ಯೋಜನೆ ಅಡಿ ರಾಷ್ಟ್ರೀಯ ಪೋಷಣ ಮಾಸಾಚಾರಣಿ ಕಾರ್ಯಕ್ರಮ ಜರಗಿತು.
ಈ ವೇಳೆ ಮುದಕವಿ ಗ್ರಾಮ ಪಂಚಾಯತ್ ಅಧ್ಯಕ್ಷ ವಹಿದ್ ಅಹ್ಮದ್ ಕಾಜಿ, ಉಪಾಧ್ಯಕ್ಷರು ಶಿವಾನಂದ ಮಠಪತಿ, ಗ್ರಾಮ ಪಂಚಾಯತಿ ಸದಸ್ಯರು ವೈ ಕೆ ಕಳಸಗೌಡ್ರು, ಅತಿಥಿಗಳು ಉಮೇಶ್ ಏಣಿ, ಅಂಗನವಾಡಿ ಮೇಲ್ವಿಚಾರಕರು ಟಿ ಎಚ್ ಭವಾನಿ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಗ್ರಾಮಸ್ಥರು ಮತ್ತು ಮಕ್ಕಳ ಪಾಲಕರು ಹಾಜರಿದ್ದರು ಮುದ್ದು ಮಕ್ಕಳಿಂದ ಸ್ವಾಗತಿಸಿ ಭರತನಾಟ್ಯ ಕಾರ್ಯಕ್ರಮ ಪ್ರಾರಂಭಿಸಲಾಯಿತು ಕಾರ್ಯಕ್ರಮವನ್ನು ನಡೆಸಿಕೊಟ್ಟರು ಆಶಾ ಕಾರ್ಯಕರ್ತರು ಲಕ್ಷ್ಮಿ ಕಳಸಗೌಡ್ರು ಸ್ವಾಗತ ಭಾಷಣವನ್ನು ಮಾಡಿದರು,
ಕಾರ್ಯಕ್ರಮ ಮುಖ್ಯವಾಗಿ ಮೊದಲನೇ ಗರ್ಭಿಣಿಯರಿಗೆ ಶ್ರೀಮಂತ ಕಾರ್ಯಕ್ರಮವನ್ನು ಮಾಡಲಾಯಿತು ಆರು ತಿಂಗಳ ತುಂಬಿದಾಗ ಮಕ್ಕಳಿಗೆ ಅನ್ನ ಪ್ರಾಯಶನ ಈ ಕಾರ್ಯಕ್ರಮ ಆಚರಿಸುವುದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಸೇವಾ ನಿವೃತ್ತಿ ಹೊಂದಿದವರಿಗೆ ಸನ್ಮಾನ ಸಮಾರಂಭ ಮಾಡಲಾಯಿತು ಆರೋಗ್ಯ ಇಲಾಖೆ ಕೆಎಚ್ ಸುಟ್ಟುಗಾಲ ಹಾಜರಿದ್ದರು ಶ್ರೀಮತಿ ಬಸಮ್ಮ ಹಿರೇಮಠ ಪವಿತ್ರ ಅಂಗಡಿ ಇಂದಿರಾ ಸುಟಗಲ್ ಲಕ್ಷ್ಮಿ ಕಳಸಗೌಡ್ರು ದಿಲ್ಶಾದ್ ನದಾಫ್ ಮಾಜನ್ ಬಿ ತೋರಗಲ ಮತ್ತು ಅಂಗನವಾಡಿ ಕಾರ್ಯಕರ್ತರು ಸಹಾಯಕರು ಪಾಲ್ಗೊಂಡಿದ್ದರು.



