ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ
ಕಲ್ಲಾಪೂರ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ
70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಣೆ ಮಾಡಿದರು.
ಅಧ್ಯಕ್ಷತೆ ಪ್ರಧಾನ ಗುರುಗಳು ಪಿ.ಎಂ ದೀಕ್ಷಿತ ಸರ್. ಮುಖ್ಯ ಅತಿಥಿಗಳು ಬಸವರಾಜ ಕಡಕೋಳ ಎಸ್ ಡಿ ಎಂ ಸಿ ಸದಸ್ಯರು ಸ. ಮಾ. ಪ್ರಾ. ಶಾಲೆ ಕಲ್ಲಾಪೂರ.
ಈ ಕಾರ್ಯಕ್ರಮದಲ್ಲಿ ಕೆಲವು ವಿದ್ಯಾರ್ಥಿಗಳು ರಾಜ್ಯೋತ್ಸವದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾದ ಬಸವರಾಜ್ ಕಡಕೋಳರವರು ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡುತ್ತಾ ಕನ್ನಡ ನಾಡು-ನುಡಿಯ ಬಗ್ಗೆ ಎಲ್ಲರೂ ಗೌರವ ಭಾವನೆ ಬೆಳೆಸಿಕೊಳ್ಳಬೇಕು ಹಾಗೂ ಕೇಂದ್ರ ಸರ್ಕಾರದ ಸರ್ಕಾರಿ ಹುದ್ದೆಗಳ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ನಡೆಸಬೇಕು ಎಂಬ ನಿಲುವನ್ನು ವ್ಯಕ್ತಪಡಿಸಿದರು.
ಪ್ರಧಾನ ಗುರುಗಳು ಮಾತನಾಡಿ ಕನ್ನಡ ಭಾಷೆಯು 2000 ವರ್ಷಗಳ ಇತಿಹಾಸವನ್ನು ಹೊಂದಿದಂತಹ ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಭಾಷೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಗುರುಮಾತೆಯರಾದ ಪಾಟೀಲ್ ಮೇಡಂ, ಇಂದಮ್ಮ ಮೇಡಂ, ಪ್ರತಿಭಾ ಮೇಡಂ, ಎಲಿಗಾರ ಮೇಡಂ, ಕಮಲಾಕ್ಷೀ ಮೇಡಂ ಹಾಗೂ ಶಿಕ್ಷಕರಾದ ಕೊಟ್ಟೂರ ಸರ್, ವೀರನಗೌಡ್ರು ಸರ್, ಶಾಂತಕುಮಾರ್ ಸರ್, ಶ್ರೀನಿವಾಸ ಸರ್ ಭಾಗವಹಿಸಿದ್ದರು.



