ನಮ್ಮ ನಾಡು ಕಂಡ ಶ್ರೇಷ್ಠ ದಾರ್ಶನಿಕ,ಕವಿ,ಸಂತ ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ ಹ ಸವದತ್ತಿ ಕರೆನೀಡಿದರು.
ಸರ್ಕಾರಿ ಪ್ರೌಢಶಾಲೆ ಕಗಧಾಳದಲ್ಲಿ ಹಮ್ಮಿಕೊಂಡ ಕನಕದಾಸರ 538 ನೆಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾಜದಲ್ಲಿರುವ ಜಾತೀಯತೆ, ತಾರತಮ್ಯ ಹೋಗಲಾಡಿಸಲು ಕನಕದಾಸರ ಪಟ್ಟ ಪ್ರಯತ್ನ ಅವಿಸ್ಮರಣೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ ಆರ್ ಸಿ ರಾಠೋಡ ಮಾತನಾಡಿ ಭಾರತದಲ್ಲಿ ಆಗಿ ಹೋದ ಶ್ರೇಷ್ಠ ಸಮಾಜ ಸುಧಾರಕರ ಸಾಲಿನಲ್ಲಿ ಕನಕದಾಸರು ಅಗ್ರಗಣ್ಯರು.ಸಾಹಿತ್ಯ ಕ್ಷೇತ್ರಕ್ಕೆ ಸುಮಾರು ಕೃತಿಗಳನ್ನು, ಕೀರ್ತನೆಗಳನ್ನು ರಚಿಸಿ ಶ್ರೀಮಂತಗೊಳಿಸಿದ್ದಾರೆ.ಅಂಥ ಮಹನಿಯರ
ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಶಿಕ್ಷಕರಾದ ಎಚ್ ಎನ್ ಯಡ್ರಾಂವಿ ಮತ್ತು ಬಿ ಎಸ್ ಜೋತೆನ್ನವರ ಕನಕದಾಸರ ಜೀವನ ಸಾಧನೆ ಬಗ್ಗೆ ಮಾತನಾಡಿದರು.ಕನಕದಾಸರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭಾಷಣ ಮತ್ತು ಕೀರ್ತನೆಗಳ ಕಂಠಪಾಠ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮಾಯಪ್ಪ ರಾ ಜೋತೆನ್ನವರ, ಜೆಸಿಐ ಸಂಸ್ಥೆಯ ಪೂರ್ವಾಧ್ಯಕ್ಷರಾದ ರವಿ ಹರವಿ, ವಿಜಯ ಮಹಾಂತೇಶ ಜಿನಗಾ ಮತ್ತು ಮುರಳಿ ಸೂಳಿಭಾವಿ ಪಾಲ್ಗೊಂಡಿದ್ದರು.ವೇದಿಕೆಯ ಮೇಲೆ
ಬಿ ಜಿ ಪಾಟೀಲ,ಜೆ ಕೆ ಪಾಟೀಲ,ಎಸ್ ವ್ಹಿ ಶೆಟ್ಟರ್ ,ಡಿ ಬಿ ಕೊಡ್ಲಿ, ಆಸೀಫ್ ಬೆಟಗೇರಿ, ಸುಮಿತ್ರಾ ಭಜಂತ್ರಿ ಹಾಜರಿದ್ದರು.



