ಚಿಲಮುರು ಗ್ರಾಮದಲ್ಲಿ ಅಗ್ನಿವೀರ ಸೈನಿಕರಾಗಿ ಒಂದೇ ತಿಂಗಳಲ್ಲಿ ಏಳು ಜನ ಆಯ್ಕೆ

WhatsApp Group Join Now

ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕಿನ ಚಿಲಮೂರ ಗ್ರಾಮದಲ್ಲಿ ನಡೆ ದಂತಹ ವಿಷಯ, ಸಹಜವಾಗಿ ಯಾವುದೇ ಇಲಾಖೆಯಲ್ಲಿ ನೌಕರಿ ಸೇರುವುದು ಒಂದು ಅಥವಾ ಎರಡು ಮೂರು ಹುದ್ದೆಗಳು ಹಂತಹಂತವಾಗಿ ನಡೆಯಬಹುದು, ಆದರೆ ಒಂದೇ ಗ್ರಾಮದ ಒಂದೇ ತಿಂಗಳಲ್ಲಿ ಏಳು ಜನ ಆಯ್ಕೆಯಾಗಿದ್ದು ವಿಶೇಷತೆ, ಮೊದಲನೆಯದಾಗಿ 1)ಮಂಜು ಪಲ್ಲಕ್ಕಿ, 2) ಪ್ರಜ್ವಲ್ ರೊಟ್ಟಿ, 3)ಸಿದ್ಲಿಂಗಪ್ಪ ಕಟಗಿ, ಇವರು ಹಂತ ಹಂತವಾಗಿ ಆಯ್ಕೆಯಾಗಿದ್ದು, ಅದರಲ್ಲಿ ನಂತರ ಏಕಕಾಲಕ್ಕೆ ಒಂದೇ ಬೆಟಾಲಿಯನ್ ಬ್ಯಾಚಿಗೆ ಒಂದೇ ಗ್ರಾಮದ ನಾಲ್ಕುಜನ ಸೈನಿಕರಾಗಿ ಏಕಕಾಲಕ್ಕೆ ಆಯ್ಕೆಯಾಗಿದ್ದು ಬೆಳಗಾವ್ ಜಿಲ್ಲೆಯಲ್ಲಿ ವಿಶೇಷವಾಗಿ ಚಿಲಮೂರ ಗ್ರಾಮ ಕಾಣುತ್ತಿದೆ, ನವೆಂಬರ್ ತಿಂಗಳಲ್ಲಿ ಅಗ್ನಿವೀರ ಸೈನಿಕರ ಆಯ್ಕೆ ನಡೆದ ದಿನಗಳಲ್ಲಿ ಪ್ರಥಮ ದಿನ ಒಬ್ಬರು ಮತ್ತೊಂದು ದಿನ ಇಬ್ಬರು ಮತ್ತೂಮ್ಮೆ ಏಕಕಾಲಕ್ಕೆ ನಾಲ್ಕು ಜನ ಅಗ್ನಿವೀರ ಸೈನಿಕರಾಗಿ ಸೇವೆಗೆ ಆಯ್ಕೆಯಾಗಿದ್ದಾರೆ, ನಾಲ್ಕು ಜನರಲ್ಲಿ 1) ಏಕನಾಥ್ ಹಳ್ಳಿ. 2) ಬೈಲಪ್ಪ ಹವಳಕೋಡ್. 3) ಮಂಜು ಕಟಿಗಿ. 4) ಚಿದಾನಂದ್ ಪಟ್ಟಣ.ಇವರು ಒಟ್ಟಿಗೆ ಆಯ್ಕೆಯಾಗಿದ್ದಾರೆ, ಇದನ್ನು ಅರಿತು ಚಿಲಮೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಸೇವೆಗೆ ಹೊರಟ ನಾಲ್ಕು ಜನ ಅಗ್ನಿವೀರ ಸೈನಿಕರನ್ನು ಶಾಲೆಗೆ ಕರೆ ತಂದು ಹೂ ಮಳೆಗರೆದು ಬರಮಾಡಿಕೊಂಡು ಸನ್ಮಾನಿಸಿ ಸಿಹಿ ಹಂಚಿದರು ನಮ್ಮ ಶಾಲಾ ಮಕ್ಕಳು ಒಂದೇ ತಿಂಗಳಲ್ಲಿ ಏಳು ಜನ ಆಯ್ಕೆಯಾಗಿದ್ದು ಸಂತೋಷಕರಕ ವಿಷಯ, ಆದರೆ ಒಂದೇ ಬೆಟಾಲಿಯನ್ ಬ್ಯಾಚಿಗೆ ನಾಲ್ಕು ಜನ ಅಗ್ನಿವೀರ ಸೈನಿಕರಾಗಿ ಆಯ್ಕೆಯಾಗಿದ್ದು ಅತಿ ನಮ್ಮ ಶಾಲೆಗೆ ಸಂತೋಷಕರ ವಿಷಯ ಎಂದು ಶಾಲಾ ಶಿಕ್ಷಕರು ಶಿಕ್ಷಕಿಯರು ಸಂತೋಷಪಟ್ಟು ಜಯ ಘೋಷಣೆ ಕೂಗಿ ಅತಿ ಹೆಮ್ಮೆಯಿಂದ ಇವರಿಗೆ ಶುಭ ಹಾರೈಸಿ, ದೇಶ ಕಾಯುವ ಧೀರ ಶೂರ ಸೈನಿಕನಾಗಿ ಜಯಶಾಲಿ ಆಗಲಿ ಇವರು ಬಾಳು ಬಂಗಾರವಾಗಲೆಂದುಶುಭ ಹಾರೈಸಿದರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಜಯ ಘೋಷಣೆ ಹೇಳಿ ಹೆಮ್ಮೆ ಪಟ್ಟರು, ಈ ಸಂದರ್ಭದಲ್ಲಿ ಅಗ್ನಿವೀರ ಸೈನಿಕರ ಅಭಿಮಾನಿ ಬಳಗದ ಮುದುಕವಿ ಗ್ರಾಮದ ಹುಡುಗರು ಬಂದಿದ್ದರು, ಸ್ವಗ್ರಾಮದ ಹನುಮಂತ ರೊಟ್ಟಿ. ಭೀಮಪ್ಪ ಹಳ್ಳಿ. ಕಂಕನವಾಡಿ ಗೌಡರು.ಹಾಗೂ ಶಾಲಾ ಶಿಕ್ಷಕರಾದ ಸಿಪಿ ವರದಾಯಿ. ಸಿಎಲ್ ನಂದಿ. ಎಎಂ ಭಗವಾನ್. ಶ್ರೀ ಗುದ್ಗಾಪುರ್ ಸರ್. ಬೀರೇಶ್ ಪೀರಗನ್ನವರ್. ಶ್ರೀಮತಿ ಆರ್ ಕೆ ನದಾಫ್. ಯಶೋಧ ರಜಪೂತ್. ದಿವ್ಯಾ ಮಂತ್ರನ್ನವರ. ಮಾಲಾ ಹವಳಕೊಡ. ಅಕ್ಕಮ್ಮ ಚಿಕ್ಕುಂಬಿ ಉಪಸ್ಥಿತರಿದ್ದರು,

About The Author