ಕೃಷಿ ಇಲಾಖೆ ವತಿಯಿಂದ ಪಟ್ಟಣದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಲೂಕ ಕೃಷಿಕ ಸಮಾಜ, ರಾಮದುರ್ಗ, ಕೃಷಿ ಇಲಾಖೆ ಹಾಗೂ ಕೆ.ಎಲ್.ಇ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ಮತ್ತು ಕೃಷಿ ಸಂಭಂದಿತ ಇಲಾಖೆಗಳು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬೆಳಗಾವಿ ಉಪ ಕೃಷಿ ನಿರ್ದೇಕರು ಸಲೀಂ ಸಂಗತ್ರಾಸ್ ಮಾತನಾಡಿ
ಭಾರತ ಸರ್ಕಾರದ 5ನೇ ಪ್ರಧಾನಮಂತ್ರಿ ಆಗಿದ್ದ ಚೌದರಿ ಚರಣ್ ಸಿಂಗ್ ಹುಟ್ಟು ಹಬ್ಬದ ಪ್ರಯುಕ್ತ ರೈತರಿಗೋಸ್ಕರ ಉತ್ತಮ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ರೈತ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ರಾಮದುರ್ಗ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ದೇಶದ ಆಹಾರ ಭದ್ರತೆ ಮತ್ತು ಆರ್ಥಿಕತೆಯಲ್ಲಿ ರೈತನ ಪಾತ್ರ ಅಮೂಲ್ಯವಾಗಿದೆ. ತನ್ನ ಕಷ್ಟವನ್ನು ಲೆಕ್ಕಿಸದೆ ಬೆವರು ಸುರಿಸಿ ದುಡಿಯುವ ಅನ್ನದಾತನ ಸೇವೆ ಮತ್ತು ತ್ಯಾಗವನ್ನು ಗೌರವಿಸಲು ಪ್ರತಿವರ್ಷ ಡಿಸೆಂಬರ್ 23ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ರೈತರ ದಿನವನ್ನು ದೇಶದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಅವರು 1979 ರಿಂದ 1980ರ ವರೆಗೆ ಭಾರತದ ಪ್ರಧಾನಿಯಾಗಿದ್ದರು. ರೈತರ ಶ್ರೇಯೋಭಿವೃದ್ಧಿ ಅವರ ರಾಜಕೀಯ ಜೀವನದ ಕೇಂದ್ರಬಿಂದುವಾಗಿತ್ತು. ರೈತರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬಲಿಷ್ಠರಾಗದೇ ದೇಶದ ಒಟ್ಟಾರೆ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ದೃಢ ನಂಬಿಕೆ ಅವರದ್ದು. ಜಮೀನ್ದಾರಿ ಪದ್ಧತಿ ನಿರ್ಮೂಲನೆ, ಕೃಷಿ ಸುಧಾರಣೆಗಳು, ರೈತ ಪರ ಕಾನೂನುಗಳು ಮತ್ತು ನೀತಿಗಳ ಮೂಲಕ ರೈತರ ಸಬಲೀಕರಣಕ್ಕೆ ಅವರು ಶ್ರಮಿಸಿದರು. ಅವರ ಸೇವೆಯನ್ನು ಗೌರವಿಸಿ 2001ರಲ್ಲಿ ಭಾರತ ಸರ್ಕಾರ ಡಿಸೆಂಬರ್ 23 ಅನ್ನು ರಾಷ್ಟ್ರೀಯ ರೈತರ ದಿನವೆಂದು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ ಎಂದು ಹೇಳಿದರು.

ವಿಜ್ಞಾನಿಗಳು ಕೆಎಲ್ಇ ಕೆವಿಕೆ ಮತ್ತಿಕೊಪ್ಪ ಎಸ್.ಎಮ್.ವಾರದ ಅವರು ಕಬ್ಬು ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.

ಶ್ರೀ.ಷ.ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು
ಹಿರೇಮಠ ಮುಳ್ಳೂರು ದಿವ್ಯಸಾನಿಧ್ಯ ವಹಿಸಿದರು.
ಪ್ರಗತಿಪರ ರೈತ ಈರನಗೌಡ ಬ ಪಾಟೀಲ ಕೃಷಿ ಹಾಗೂ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಾಧನೆ ಮಾಡಿದ ಸಾಧಕ ರೈತರಿಗೆ ಸಮ್ಮಾನ ಮಾಡಲಾಯಿತು.

ಈ ವೇಳೆ ರಾಮದುರ್ಗ ತಾಲೂಕ ಕೃಷಿಕ ಸಮಾಜ ಅಧ್ಯಕ್ಷರು ವಾಂಯ್.ಎಚ್.ಪಾಟೀಲ, ಸಹಾಯಕ ಕೃಷಿ ನಿರ್ದೇ ಶಕರು ಎಸ್.ಎಫ್.ಬೆಳವಟಗಿ,
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಪ್ರಕಾಶ ಭೀ.ಮುಗಳಕೋಡ,
ಪಶು ವೈದ್ಯಾಧಿಕಾರಿಗಳು ಗಿರೀಶ ಪಾಟೀಲ, ವಲಯ ಅರಣ್ಯಾಧಿಕಾರಿಗಳು ಭಾಗ್ಯಶ್ರೀ ಮಸಳಿ, ಸಾಮಾಜಿಕ ವಲದು ಅರಣ್ಯಾಧಿಕಾರಿಗಳು ದಾನಮ್ಮ ಜಿ. ಗುಂಜಿಗಾಂವಿ , ತಾಲೂಕ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರು
ವಾ ಎಚ್ ಪಾಟೀಲ, ನಾರಾಯಣ ಆರ್ ಡೂಳೊಳ್ಳಿ, ರಾಜಶೇಖರ ಹ ತೋಳಗಟ್ಟಿ, ಬಸನಗೌಡ ವೇ ಪ್ಸಾಟಿಗೌಡ್ರ, ಪರುತಗೌಡ ಮ ಪಾಟೀಲ,
ಭೀಮಪ ಫ ಬಸಿಡೋಣಿ, ಮಲ್ಲನಗೌಡ ಸಿ ಪಾಟೀಲ, ಶಿವನಗೌಡ ದ್ರಾ, ಪವಾಡಿಗೌಡ, ಶಿದ್ಲಿಂಗಪ್ಪ ಸಿ ಮುದೇನೂರ, ಭೀಮಪ ರ೦ ಕೊಳಚಿ, ಬಾಳಪ್ಪ ಬ ಹಂಜಿ, ಬಸಯ್ಯ, ನಾ ದಳವಾಯಿಮಠ, ರವೀಂದ, ಈ ಪಂಚಗಾ ವಿ, ಅಡಿವೆಪ್ಪ ಚ ಸುರಗ, ದಳವಾಯಿ ವಕೀಲರು , ಕೃಷಿ ಸಂಭಂದಿತ ಇಲಾಖೆಗಳ ಅಧಿಕಾರಿಗಳು, ಕಬ್ಬು ಬೆಳೆಗಾರರ ಸಂಘ, ರೈತ ಸಂಘಟನೆಗಳು ರೈತ ಉತ್ಪಾದಕರ ಸಂಸ್ಥೆಗಳು ಹಾಗೂ ರೈತ ಬಾಂದವರು ಪಾಲ್ಗೊಂಡಿದ್ದರು.

About The Author