ವಿದ್ಯುತ್ ಸ್ವಾವಲಂಬನೆಗಾಗಿ ರೈತರೊಂದಿಗೆ ಸಂವಾದ ಯಶಸ್ವಿ

WhatsApp Group Join Now

ಗದಗ ಜಿಲ್ಲೆ ಮಾಡಲಗೇರಿಯ ಕಿಸಾನ ಅಭಿವೃದ್ಧಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿಯಮಿತ, ದಾಕ್ಷಾಯಿಣಿ ಭಾ ಜಾಬಶೆಟ್ಟಿ ಫೌಂಡೇಶನ್ ಹಾಗೂ ಗ್ರೀನಲ್ಯಾಂಡ ಬಯೋಟೆಕ್ ರಾಮದುರ್ಗ ಇವರ ಸಹಯೋಗದಲ್ಲಿ ಸೌರ ವಿದ್ಯುಚ್ಛಕ್ತಿ ಉತ್ಪಾದನೆಗಾಗಿ “ಸೌರ ರಥ” ಜನ ಜಾಗೃತಿ ಅಭಿಯಾನದ ಅಂಗವಾಗಿ ಸೌರ ವಿದ್ಯುತ್ ಉತ್ಪಾದಿಸಿ ವಿದ್ಯುತ್ ಸ್ವಾವಲಂಬನೆ ಹೊಂದುವ ಕುರಿತು 25/12/2025 ರಂದು ಮಾಡಲಗೇರಿ, ಬೇಲೂರು ಹಾಗೂ ಕೊತಬಾಳ ಗ್ರಾಮದ ರೈತರೊಂದಿಗೆ ಸಂವಾದ ಯಶಸ್ವಿಯಾಗಿ ಜರುಗಿತು.

ಮನೆ ಮೇಲ್ಛಾವಣಿ ಮೇಲೆ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸುವದರಿಂದ ದೊರೆಯುವ ಪ್ರಯೋಜನಗಳ ಕುರಿತು ಹಾಗೂ 3 ಕಿಲೋವ್ಯಾಟ್ ಸಾಮಥ್ರ್ಯದ ಘಟಕ ಅಳವಡಿಕೆಯಿಂದ ರೂ. 78,000/- ಗಳ ಸಬ್ಸಿಡಿ ಪಡೆದುಕೊಳ್ಳುವ ವಿಧಾನದ ಕುರಿತು ಮಾಹಿತಿ ನೀಡಲಾಯಿತು.

ಬೇಸಿಗೆಯಲ್ಲಿ ವಿದ್ಯುಚ್ಛಕ್ತಿ ಕೊರತೆಯಿಂದ ರೈತರ ಬೆಳೆ ಒಣಗುವುದನ್ನು ತಪ್ಪಿಸಲು ಪಂಪಸೆಟ್ ಗಳಿಂದ ನೀರು ಮೇಲೆತ್ತಲು ಸೌರ ವಿದ್ಯುತ್ ಉತ್ಪಾದಿಸಿ ಸುಸ್ಥಿರ ನೀರಾವರಿಯಿಂದ ಬೆಳೆಗಳ ಸಂರಕ್ಷಣೆ ಮಾಡುವ ಕುರಿತು ವಿವರಿಸಲಾಯಿತು.

ಈ ಅಭಿಯಾನದ ಸಂಚಾಲಕ ಭಾಲಚಂದ್ರ ಜಾಬಶೆಟ್ಟಿ ತಾಂತ್ರಿಕ ವಿವರಗಳನ್ನು ನೀಡಿದರು. ಕಿಸಾನ ಅಭಿವೃದ್ಧಿ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಪ್ರಭುಸ್ವಾಮಿ ವಿರಕ್ತಮಠ, ಆಡಳಿತಾಧಿಕಾರಿ ಶೇಖರ ಮುದಕನಗೌಡರ, ಹಾಗೂ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.

About The Author