13 August 2026
Advertisement
ರಾಜ್ಯ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೆಳಗಾವಿ ಜಿಲ್ಲಾ ಭವನ ಲೋಕಾರ್ಪಣೆ

WhatsApp Group Join Now

ಬೆಳಗಾವಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಗಣೇಶಪುರ ರಸ್ತೆ, ಬೆಳಗಾವಿಯಲ್ಲಿ ನೂತನವಾಗಿ ನಿರ್ಮಿಸಲಾದ ರೆಡ್ ಕ್ರಾಸ ಭವನವನ್ನು ಸೋಮವಾರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ, ಜಿಲ್ಲಾಧಿಕಾರಿ
ಹಾಗೂ ಭಾರತೀಯ ರೆಡ್ ಕ್ರಾಸ ಸಂಸ್ಥೆ ಜಿಲ್ಲಾಧ್ಯಕ್ಷರಾದ
ಮೊಹಮ್ಮದ ರೋಷನ್ ಅವರು, ಯಾವುದೇ ತರನಾದ ಭೇದಭಾವ ಮಾಡದೇ
ಜನರಿಗಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವ ಈ ಸಂಸ್ಥೆಯ ಸೇವೆ ಶ್ಲಾಘನೀಯ ವಾಗಿದೆ ಎಂದರು. ಹೊಸ ಕಟ್ಟಡವು ನಿರ್ಮಾಣವಾಗಿ ಮೂರು ವರ್ಷ ಕಳೆದು ಇಂದು ಉದ್ಘಾಟನೆ ಯಾವುದರ ಜೊತೆಗೆ ಇಲ್ಲಿಂದಲೇ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳ ಬೇಕೆಂದರು. ಶೈಕ್ಷಣಿಕ, ಸ್ತ್ರೀಯರ, ವಯೋವೃದ್ಧರ ಸೇರಿದ್ದಂತೆ ಸಮಾಜಮುಖಿ ಕೆಲಸ ಗಳಿಗೆ ಈ ಸಂಸ್ಥೆಯ ಮುಕ್ತ ಅವಕಾಶ ನೀಡುತ್ತಿದೆ. ಕೇವಲ ಹತ್ತು ದಿನಗಳಲ್ಲಿ ಕಾರ್ಯ ಚಟುವಟಿಕೆಗಳು ಈ ಕಟ್ಟಡದಲ್ಲಿ ಕಾಣಬೇಕೆಂದರು. ರಾಜ್ಯ ಸಂಸ್ಥೆಯ ಅಧ್ಯಕ್ಷ ಬಸ್ರೂರು ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಟೀಮ್ ಒಳ್ಳೆಯ ಜನಪರ ಕೆಲಸ ಮಾಡುತ್ತಿದ್ದು ಎಲ್ಲಾ ನಿರ್ದೇಶಕರು ಪ್ಯೋಟರ್ನ ಸದಸ್ಯರಾಗಲು ವಿನಂತಿಸಿದರು. ಜಿಲ್ಲಾಧಿಕಾರಿಗಳು ಕಚೇರಿ ಕೆಲಸಕ್ಕೆ ಚೇಂಬರವ್ಯವಸ್ಥೆ ಕುರ್ಚಿಗಳನ್ನು ನೀಡಲು ವಿನಂತಿಸಿದರು. ಜಿಲ್ಲಾ ಚೇರಮನ
ಡಾ ವಿ.ಡಿ. ಡಾಂಗೆ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಮಾನವೀಯತೆ ನೆಲೆಯ ಮೇಲೆ ನಿಂತಿದೆ ರೆಡ್ ಕ್ರಾಸ್ ಸಂಸ್ಥೆಯು ಪ್ರಥಮ ಚಿಕಿತ್ಸೆ , ರಕ್ತ ದಾನ ನೀಡುವುದರ ಕುರಿತು ಅರಿವು ಮೂಡಿಸುವದು , ಸಾಂಕ್ರಾಮಿಕ ರೋಗಗಳ ನಿಯಂತ್ರಣ ಬಗ್ಗೆಏಡ್ಸ , ಕ್ಯಾನ್ಸರರೋಗದ ಕುರಿತು ತಿಳಿಸುವುದು, ಅಲ್ಲದೇ ಪ್ರತಿ ಹಳ್ಳಿಯ ಮಟ್ಟದಲ್ಲಿ ಮಾಡುವ ಸಂಕಲ್ಫಮಾಡಿದ್ದೇವೆ ಎಂದು ತಿಳಿಸಿದರು.

ಡಾ.ಸಂಜಯ ಸಿದ್ಧನ್ನವರ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯು ಯಾವುದೇ ರೀತಿಯ ಭೇಧಭಾವ ಮಾಡದೇ ಎಲ್ಲ ವರ್ಗದ ನಿಸ್ವಾರ್ಥ ಸೇವೆ ನೀಡುತ್ತಿದೆ ಜೊತೆಗೆಅನೇಕ ಸಲ ರಕ್ತದಾನ ಶಿಬಿರ ಆಯೋಜಿಸಿದೆ ಎಂದರು.ಯಲ್ಲಮ್ಮ ಪ್ರಾಧಿಕಾರ ಕಾರ್ಯದರ್ಶಿ ಡಾ. ಸಿದ್ದು ಹುಲ್ಲೋಳ್ಳಿ,ಜಿಲ್ಲಾಧಿಕಾರಿಯವರನ್ನು ಸದಸ್ಯ ಎಸ್.ಜಿ.ಸಿದ್ನಾಳ ಪರಿಚಯಿಸಿದರು.ಎಸ್.ಎನ್.ಮೂಲಿಮನಿ ಸ್ವಾಗತಿಸಿದರು. ಪದಾಧಿಕಾರಿಗಳಾದ ಪ್ರವೀಣ ಹಿರೇಮಠ, ಡಾ.ಪ್ರಿಯಾ ಪುರಾಣಿಕ, ಎಸ್.ವಿನೋದಿನಿ ಶರ್ಮಾ,ಡಾ.ಡಿ.ಎನ್.ಮಿಸಾಳೆ,
ರವೀಂದ್ರ ತೊಟಿಗೇರ, ಅಗ್ನಿಹೋತ್ರಿ ನಿರೂಪಿಸಿದರು. ವಿಜಯನಗರ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಅಶೋಕ ಬದಾಮಿ ವಂದಿಸಿದರು.
ವಿದ್ಯಾರ್ಥಿಗಳು, ಸ್ವಯಂ ಸೇವಕರು ಪಾಲ್ಗೊಂಡಿದ್ದರು.

About The Author