ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಲ್ಲಾಪೂರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮ ದಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಎಸ್ಡಿಎಂಸಿ ಅಧ್ಯಕ್ಷ ಪ್ರಕಾಶ್ ಬ ಅಳಗೋಡಿ ನೆರವೇರಿಸಿದರು.
ವಿದ್ಯಾರ್ಥಿಗಳಿಂದ ಸಾಮೂಹಿಕ ಕವಾಯತು,ಭಾಷಣ,ಹಾಡು ನೃತ್ಯಗಳು ನಡೆಯಿತು.

ಈ ಸಂದರ್ಭದಲ್ಲಿ ಸವಿಧಾನ ಪೀಠಿಕೆಯ ಪ್ರತಿಯನ್ನು ಬಸವರಾಜ ಕ ಕಡಕೋಳ ವಕೀಲರು ವಿತರಿಸಿದರು.

ಈ ವೇಳೆ ಎಸ್ ಡಿಎಂಸಿ ಉಪಾಧ್ಯಕ್ಷರು ಕಮಲಾ ಕ. ಮೇಟಿ , ಸದಸ್ಯರಾದ ಬಸವರಾಜ ಕ. ಕಡಕೋಳ, ಪ್ರಕಾಶ ಶಿ. ಮೊರಬದ, ಮಹಾಂತೇಶ ಬ. ಪಂಚೇನವರ, ಶಾಲೆಯ ಮುಖ್ಯೋಪಾಧ್ಯರು ಪಿ. ಎಂ. ದಿಕ್ಷೀತ, ಶಿಕ್ಷಕರಾದ ಎ ಬಿ ಪಾಟೀಲ, ಇಂದಮ್ಮ ಸಿ, ಆರ್ ಎಸ್ ಕೋಟೂರ, ಪಿ ಕೆ ಬಡಿಗೇರ, ಎನ್ ಎಸ್ ಯಲಿಗಾರ, ಶ್ರೀನಿವಾಸ್ ಯಾದವ, ಶಾಂತಕುಮಾರ ಎಂ ಎಂ, ಕಮಲಾಕ್ಷೀ ಪಮ್ಮಾರ. ನಾಗಮ್ಮ ಕಣಗಾವಿ. ಆರ್ ಕೆ ವೀರನಗೌಡ್ರ, ಸದಸ್ಯರ ಕೆ ಜಿ ಕಣವಿ , ಎಫ್ ಎಂ ಓಗಳಾಪುರ , ಶಿವಪ್ಪ ಬ ಹಾಲೊಳ್ಳಿ, ಈರಯ್ಯ ಶಿವಪ್ಪನ ಮಠ, ಕೆ ಬಿ ಪಾಟೀಲ್ ಪಿಕೆಪಿಎಸ್ ಸದಸ್ಯರು, ಡಿ.ಜಿ ಅನ್ನಿಕೇರಿ, ಪರಪ್ಪ ಗುರ್ಲಕಟ್ಟಿ ಕಳಸಾ ಬಂಡೂರಿ ಹೋರಾಟಗಾರರು,
ಹಾಗೂ ಗ್ರಾಮ ಪಂಚಾಯಿತಿನ ಮಹಿಳಾ ಸದಸ್ಯರು ಮುಖ್ಯೋಪಾಧ್ಯಾಯರು, ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಶಾಲಾ ಸಿಬ್ಬಂದಿ ವರ್ಗ ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು



