ಅಡುಗೆ ಸಿಬ್ಬಂದಿಗಳಿಗೆ ಹಮ್ಮಿಕೊಂಡ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಉದ್ಘಾಟಿಸಿದರು.

WhatsApp Group Join Now

ಬಿಸಿಯೂಟ ತಯಾರಿಕೆಯಲ್ಲಿ ಅಡುಗೆ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯವಾದದ್ದು. ಆದರೆ ಅವರಿಗೆ ಸರಕಾರ ನೀಡುವ ಗೌರವ ಧನ ಮಾತ್ರ ಕಡಿಮೆ ಇದೆ. ಇರುವ ಗೌರವ ಧನದಲ್ಲಿ ಇದೊಂದು ಮಕ್ಕಳ ಸೇವೆ ಎಂದು ತಿಳಿದು ಶ್ರದ್ಧೆಯಿಂದ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಸರಕಾರ ತಮ್ಮ ಗೌರವ ಧನ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ರಾಮದುರ್ಗ ಪಟ್ಟಣದ ವಿದ್ಯಾಚೇತನ ಆವರಣದಲ್ಲಿರುವ ಗುರುಭವನದಲ್ಲಿ ರವಿವಾರ ಅಕ್ಷರದಾಸೋಹ ಇಲಾಖೆಯಿಂದ ಬಿಸಿಯೂಟ ತಯಾರಿಕೆ ಸಿಬ್ಬಂದಿಗಳಿಗಾಗಿ ಹಮ್ಮಿಕೊಂಡ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬಿಸಿಯೂಟದಲ್ಲಿ ಯಾವುದೇ ಲೋಪದೋಷಗಳಾಗದಂತೆ ಸಿಬ್ಬಂದಿ ಜಾಗೃತಿ ವಹಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಅದರ ಬಗ್ಗೆ ನಿಗಾವಹಿಸಬೇಕು ಎಂದು ಹೇಳಿದರು.
ತಾ.ಪಂ ಇಒ ಬಸವರಾಜ ಐನಾಪೂರ, ಬಿ.ಇ.ಒ ಸುರೇಂದ್ರ ಕಾಂಬಳೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ ನಿಜಗುಲಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಕೆ.ಎನ್. ಯಡ್ರಾವಿ, ಮಹಿಳಾ ಮಕ್ಕಳ ಇಲಾಖೆಯ ವೈಶಾಲಿ ಕುಲಕರ್ಣಿ, ಆರೋಗ್ಯ ಇಲಾಖೆಯ ಎಸ್.ಬಿ.ಐನಾಪೂರ ಅಡುಗೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ಸಾಮಾಜಿಕ ಸುರಕ್ಷಾ ವಿಮಾ ಯೋಜನೆಗಳ ಬಗ್ಗೆ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಸಮಾಲೋಚಕ ಮಲ್ಲಿಕಾರ್ಜುನರಡ್ಡಿ ಗೊಂದಿ ಮಾಹಿತಿ ನೀಡಿದರು.
ನಿವೃತ್ತರಾದ ಅಡುಗೆ ಸಿಬ್ಬಂದಿಗಳನ್ನು ಸನ್ನಾನಿಸಿ ಸರಕಾರ ನೀಡಿದ ಇಡಿಗಂಡು ನೀಡಲಾಯಿತು. ಕಳೆದ ವರ್ಷದ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಅಡುಗೆ ಸಿಬ್ಬಂದಿಗಳ ಮಕ್ಕಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವಿ.ಪಾಟೀಲ, ಅಕ್ಷರ ದಾಸೋಹ ಸಂಘದ ಅಧ್ಯಕ್ಷೆ ತುಳಸವ್ವ ಮಾಳದಕರ, ಜಿ.ಬಿ.ರಂಗನಗೌಡ್ರ, ರಮೇಶ ಮೇತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅಕ್ಷರ ಸಾಸೋಹ ಸಹಾಯಕ ನಿರ್ದೇಶಕ ರಾಜಶೇಖರ ಹಿರೇಮಠ ಸ್ವಾಗತಿಸಿದರು. ಸಿ.ಆರ್.ಪಿ ಸಿ.ಎನ್.ಕಲ್ಲೂರ ನಿರೂಪಿಸಿದರು. ರಾಮು ಪೆಟ್ಲೂರ ವಂದಿಸಿದರು.

About The Author