ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆ ಮುಂದೆ ಇರುವ ವಾಣಿಜ್ಯ ಮಲ್ಲಿಗೆಗಳ ನಂ.5 ರಲ್ಲಿ ಇದ್ದಂತಹ ರಾಮದುರ್ಗ ಟೌನ್ ಅಂಚೆ ಕಚೇರಿಯನ್ನು ವಿಲೀನಗೊಳಿಸದಂತೆ ಸಾಮಾಜಿಕ ಹೋರಾಟಗಾರರು ರಾಮದುರ್ಗ ಪ್ರಧಾನ ಅಂಚೆ ಕಚೇರಿಗೆ ಮನವಿಯನ್ನು ಸಲ್ಲಿಸಿದರು.
ರಾಮದುರ್ಗ ಪಟ್ಟಣದಲ್ಲಿ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿಯನ್ನು ಇವಾಗ ರಾಮದುರ್ಗದ ಹೆಡ್ ಪೋಸ್ಟ ಆಫೀಸಗೆ (ಅಂಚೆ ಕಚೇರಿಯೊಂದಿಗೆ) ವಿಲೀನಗೊಳಿಸುವ ಅಥವಾ ಮುಚ್ಚುವ ಪ್ರಸ್ತಾವನೆ ಇರುವುದು ನಮ್ಮ ಗಮನಕ್ಕೆ ಬಂದಿದೆ.
ಈ ಅಂಚೆ ಕಚೇರಿಯು ನಮ್ಮ ರಾಮದುರ್ಗ ಪಟ್ಟಣದ ನೂರಾರು ಕುಟುಂಬಗಳಿಗೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ, ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿದೆ. ವೃದ್ಧಾಪ್ಯ ವೇತನ, ಉಳಿತಾಯ ಯೋಜನೆಗಳು ಮತ್ತು ದಿನನಿತ್ಯದ ಅಂಚೆ ಸೇವೆಗಳಿಗಾಗಿ ನಾವು ಈ ಕಚೇರಿಯನ್ನೇ ಅವಲಂಬಿಸಿದ್ದೇವೆ. ಇದನ್ನು ಬೇರೆಡೆಗೆ ವರ್ಗಾಯಿಸುವುದರಿಂದ ಹಿರಿಯ ನಾಗರಿಕರು ಕಿಲೋಮೀಟರ್‌ಗಟ್ಟಲೆ ನಡೆದು ಹೋಗುವುದು ಕಷ್ಟ್ಟಕರವಾಗಿದೆ.
ವಿಲೀನದಿಂದಾಗಿ ಕೆಲಸದ ಒತ್ತಡ ಹೆಚ್ಚಾಗಿ ಸಾಮಾನ್ಯ ಜನರಿಗೆ ಸೇವೆ ಸಿಗುವುದು ವಿಳಂಬವಾಗಬಹುದು.
ಸರ್ಕಾರದ ಸೌಲಭ್ಯಗಳು ತಲುಪಲು ಈ ಸ್ಥಳೀಯ ಕಚೇರಿ ಮುಖ್ಯ ಕೊಂಡಿಯಾಗಿದೆ. ಆದುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ನಮ್ಮ ರಾಮದುರ್ಗ ಟೌನ್ (ಪೋಸ್ಟ ಆಫೀಸ್ ) ಅಂಚೆ ಕಚೇರಿಯನ್ನು ಈಗಿರುವಂತೆಯೇ ಮುಂದುವರಿಸಬೇಕೆಂದು ಸಾರ್ವಜನಿಕರು ರಾಮದುರ್ಗದ ಪ್ರಧಾನ ಕಚೇರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರಶಾಂತ ಅಂಗಡಿ, ಮಹೇಶ್ ದೊಡಮನಿ, ದರ್ಶನ ದೊಡಮನಿ, ಟಿ ಬಿ ಪಾಟೀಲ, ಕಿರಣ ದೊಡಮನಿ, ವೆಂಕಟೇಶ್ ಅಂಕದ, ಇನ್ನು ಇತರರು ಇದ್ದರು.



