ಪಿಗ್ರಿ ಏಜೆಂಟ್‌ಗಳ ಕಮೀಷನ್ ಮೇಲೆ ಜಿಎಸ್‌ಟಿ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

WhatsApp Group Join Now

ಬೆಂಗಳೂರು: ಬ್ಯಾಂಕ್‌ಗಳಲ್ಲಿ ಠೇವಣಿ ಸಂಗ್ರಹಿಸುವ ಪಿಗ್ನಿ ಏಜೆಂಟ್‌ಗಳು ಬ್ಯಾಂಕಿನ ನೌಕರರಾಗಿದ್ದು, ಅವರಿಗೆ ನೀಡಲಾಗುವ ಸಂಭಾವನೆ ಅಥವಾ ಕಮೀಷನ್ ಮೇಲೆ ಜಿಎಸ್‌ಟಿ ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಪಿಗ್ನಿ ಏಜೆಂಟ್‌ಗಳಿಗೆ ಪಾವತಿಸಿದ ಕಮಿಷನ್ ಮೊತ್ತದ ಮೇಲೆ ಜಿಎಸ್‌ಟಿ ಪಾವತಿಸುವಂತೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗೆ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರು ನೀಡಿದ್ದ ಶೋಕಾಸ್ ನೋಟಿಸ್‌ಗಳನ್ನು ರದ್ದುಪಡಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ

ನೀಡಿದೆ. ಬ್ಯಾಂಕುಗಳು ಈ ಏಜೆಂಟ್‌ಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತವೆ ಮತ್ತು ಇವರಿಗೆ ನೀಡುವ ಕಮಿಷನ್ ಸಂಭಾವನೆಯು ವೇತನದ ಸ್ವರೂಪದ್ದಾಗಿರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪಿಗ್ನಿ ಏಜೆಂಟ್‌ಗಳು ಸ್ವತಂತ್ರ ಗುತ್ತಿಗೆದಾರ ರಲ್ಲ, ಬದಲಾಗಿ ಅವರು ಬ್ಯಾಂಕಿನ ನಿಯಂತ್ರಣದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಕನಿಷ್ಠ ಸಂಭಾವನೆ, ಗ್ರಾಚ್ಯುಟಿ ಸೌಲಭ್ಯಗಳಿವೆ. ಅಲ್ಲದೆ, ಅವರನ್ನು ಕೆಲಸದಿಂದ ತೆಗೆಯಬೇಕಾದರೆ ನೋಟಿಸ್‌ ನೀಡುವ ಅಗತ್ಯವಿದೆ. ಇವೆಲ್ಲವೂ ಉದ್ಯೋಗದ ಲಕ್ಷಣಗಳೇ ಆಗಿವೆ ಎಂದು ಎಂದು ನ್ಯಾಯಾಲಯ ಹೇಳಿದೆ.

About The Author