ರಾಮದುರ್ಗ ಪಟ್ಟಣದಲ್ಲಿ ಬೀದಿ ದೀಪಗಳು ಹೋದರೂ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕತ್ತಲೆಯಾಗುತ್ತಿದ್ದಂತೆ ರಸ್ತೆಗಳಲ್ಲಿ ಓಡಾಡಲು ಮಹಿಳೆಯರು ಮತ್ತು ಮಕ್ಕಳು ಪರದಾಡುವಂತಾಗಿದೆ.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಾರ್ಡ ನಂಬರ್ 24
ಪ್ರಮುಖ ರಸ್ತೆ, ಹಾಗೂ ವಿವಿಧ ಬಡಾವಣೆಗಳಲ್ಲಿ ಬೀದಿ ದೀಪಗಳು ಇಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಓಡಾಡುತ್ತಾರೆ.
ಬೆಳಕಿನ ವ್ಯವಸ್ಥೆ ಕಲ್ಪಿಸಬೇಕಾದ ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ವಾರ್ಡ್ ನಂಬರ 24ರ ನಿವಾಸಿಗಳು ಆರೋಪ.

ವಿದ್ಯುತ್ ಕಂಬಗಳಿದ್ದರೂ ಬೆಳಕಿನ ವ್ಯವಸ್ಥೆ ಇಲ್ಲ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಇದುವರೆಗೂ ಬೀದಿ ದೀಪ ಅಳವಡಿಸದೆ ಪುರಸಭೆ ಅಧಿಕಾರಿಗಳು 24ನೇ ವಾರ್ಡಿಗೆ ನಿರ್ಲಕ್ಷ ತೋರುತ್ತಿದ್ದಾರೆ
ರಾಮದುರ್ಗ ಪುರಸಭೆಯ ಕಚೇರಿಯ ಒಳಗೆ ಬೀದಿ ದೀಪದ ಕುಂದು ಕೊರತೆ ಬಗ್ಗೆ ಒಂದು ಪುಸ್ತಕ ಇದೆ ಆ ಪುಸ್ತಕದಲ್ಲಿ ವಾರ್ಡ್ ನಂಬರ್ 24ರ ಬೀದಿ ದೀಪದ ಬಗ್ಗೆ ಬರೆದರೂ ಕೂಡ ಇದುವರೆಗೂ ಬೀದಿ ದೀಪವನ್ನು ಅಳವಡಿಸದೆ ನಿರ್ಲಕ್ಷ್ಯ ತೋರುತ್ತಿರುವುದು.
ರಾತ್ರಿ ವೇಳೆ ಹಿರಿಯ ನಾಗರಿಕರು, ಮಕ್ಕಳು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಾರೆ ಏಕೆಂದರೆ ರಾತ್ರಿ ಆದರೆ ಸಾಕು( ಹಾವುಗಳ) ಹುಳ ಉಪ್ಪಡಿಗಳ ಕಾಟ ಹೆಚ್ಚಾಗುತ್ತದೆ ಇದರಿಂದ ಜನರು ಬಯಪಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಬೀದಿ ದೀಪಗಳು ಕೆಟ್ಟುಹೋಗಿದ್ದರೂ, ಅಧಿಕಾರಿಗಳ ಗಮನಕ್ಕೆ ತಂದ ನಂತರವೂ ನಿರ್ಲಕ್ಷ್ಯ ವಹಿಸುತ್ತಿರುವುದು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಗಂಭೀರ ಸಮಸ್ಯೆಯಾಗಿದೆ.



