ಕೇಂದ್ರ ಸರ್ಕಾರದ ವಕ್ಫ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಮದುರ್ಗದಲ್ಲಿ ಬೃಹತ ಪ್ರತಿಭಟನೆ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ವಕ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಮದುರ್ಗ ತಾಲೂಕ ಸಂವಿಧಾನ ರಕ್ಷಣಾ ಸಮಿತಿ ನೇತೃತ್ವದಲ್ಲಿ ಮುಸ್ಲಿಮರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಕ್ಪ್ ನೂತನ ತಿದ್ದುಪಡಿ ಕಾಯ್ದೆಯನ್ನು ಮರಳಿ ಪಡೆಯಬೇಕು ಎಂದು ಘೊಷಣೆ ಕೂಗುತ್ತ ಪಟ್ಟಣದ ಹರಳಯ್ಯ ವೃತ್ತದಿಂದ ನೇರವಾಗಿ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳು ಭಾರತ ಸರಕಾರ ಮನವಿ ಸಲ್ಲಿಸಿದರು. ಈ ದೇಶದ ಎಲ್ಲ ಜನರಿಗೆ ಅವರು ಬಯಸುವ ಧರ್ಮವನ್ನು ಆಚರಿಸುವ ಹಾಗೂ ಆಚರಸದೇ…
