Prashanth Angadi

ಬೆಳಗಾವಿ ಅಂಗನವಾಡಿ ಸಹಾಯಕಿಯಿಂದ 15 ಸಾವಿರ ರೂ. ಹಣ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ

ಬೆಳಗಾವಿಯ ಅಂಗನವಾಡಿ ಸಹಾಯಕಿಯ ವರ್ಗಾವಣೆಗೆ 30 ಸಾವಿರ ರೂ. ಲಂಚ ಕೇಳಿದ್ದ ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಹಾಗೂ ಇಲಾಖೆಯ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಲಾಖೆ ಕಂಪ್ಯೂಟ‌ರ್ ಆಪರೇಟ‌ರ್ ಸೌಮ್ಯಾ ಬಡಿಗೇರ್ ಹಾಗೂ ಸೂಪರಿಂಟೆಂಡೆಂಟ್ ಅಬ್ದುಲ್ ವಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಅಧಿಕಾರಿಗಳು. ಇಬ್ಬರು ಸೇರಿ, ಹುಕ್ಕೇರಿ ಮೂಲದ ಅಂಗನವಾಡಿ ಸಹಾಯಕಿ ಶಕುಂತಲಾ ಕಾಂಬ್ಳೆಯವರ ವರ್ಗಾವಣೆಗೆ 30 ಸಾವಿರ ರೂ. ಹಣದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅಂಗನವಾಡಿ ಸಹಾಯಕಿ…

Read More

ನಮ್ಮ ಶಾಲೆ-ನಮ್ಮ ಜವಾಬ್ದಾರಿ ಶಾಲಾ ಪ್ರಾರಂಭೋತ್ಸವ ದಿನ ಪಠ್ಯಪುಸ್ತಕ ವಿತರಣೆಗೆ ಸೂಚನೆ

ಸರಕಾರದಿಂದ ಸರಬರಾಜು ಮಾಡಲಾಗಿರುವ ಶಾಲಾ ಸಮವಸ್ತ್ರ, ಪಠ್ಯಪುಸ್ತಕಗಳನ್ನು ಮೇ 29 ರಂದು ನಡೆಯಲಿರುವ ಶಾಲಾ ಪ್ರಾರಂಭೋತ್ಸವದ ದಿನ ವಿತರಣೆ ಮಾಡಬೇಕು. ಪ್ರತಿ ನಾಲ್ಕನೇ ಶನಿವಾರ ಕಡ್ಡಾಯವಾಗಿ ಪಾಲಕರ ಸಭೆಯನ್ನು ನಡೆಸಿ ಅವರ ಸಹಕಾರದಿಂದ ಮಕ್ಕಳ ದಾಖಲಾತಿ, ಹಾಜರಾತಿಯನ್ನು ಕಲಿಕೆಗೆ ಸಮನ್ವಯ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ನಿರ್ದೇಶನ ನೀಡಿದರು. ಬೆಳಗಾವಿ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ ಜರುಗಿದ “ನಮ್ಮ ಶಾಲೆ-ನಮ್ಮ ಜವಾಬ್ದಾರಿ” ಶಾಲಾ ಪ್ರಾರಂಭೋತ್ಸವ ಹಾಗೂ 2025-26 ನೇ ಸಾಲಿನ…

Read More

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೂನ್ಯ ಸಾಧನೆ ಮಾಡಿದ 6 ಶಾಲೆಗಳ ಬಗ್ಗೆ ಸರಕಾರಕ್ಕೆ ವರದಿ; ಸೂಕ್ತ ಕ್ರಮ: ಜಿ.ಪಂ.ಸಿಇಓ ಭುವನೇಶ ಪಾಟೀಲ

ಕಳೆದ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸಾಧನೆಯಲ್ಲಿ ಕಳಪೆ ಸಾಧನೆ ಮಾಡಿದ 106 ಶಾಲೆಗಳಿಗೆ ತಕ್ಷಣ ಶೋಕಾಸ್ ನೋಟಿಸ್ ನೀಡಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಆದೇಶಿಸಿದರು. ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.50 ಕ್ಕಿಂತ ಕಡಿಮೆ ಫಲಿತಾಂಶ ಮಾಡಿರುವ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಜರುಗಿಸಿ, ಮಾತನಾಡಿದರು. ಶಿಕ್ಷಕ ವೃತ್ತಿ ಉಳಿದ ವೃತ್ತಿಗಳಿಗಿಂತ ಶ್ರೇಷ್ಠವಾಗಿದೆ. ಎಲ್ಲ ಸೌಲಭ್ಯಗಳಿದ್ದರೂ ಜಿಲ್ಲೆಯ ಆರು ಶಾಲೆಗಳು ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ…

Read More

ಹವಾಮಾನ ಇಲಾಖೆ ವರದಿ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ ಮೇ, 27 ರವರೆಗೆ ಹೆಚ್ಚು ಮಳೆ, ಗಾಳಿ ಇದೆ; ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಡಿಸಿ ಮನವಿ

ಧಾರವಾಡ ಮುಂದಿನ 2 ದಿನಗಳಲ್ಲಿ ಕೇರಳದಲ್ಲಿ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆ ಇದೆ. ದಕ್ಷಿಣ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಮಾಲ್ಡೀವ್ಸ್ ಮತ್ತು ಕೊಮೊರಿನೇರಿಯಾದ ಉಳಿದ ಭಾಗಗಳು, ಲಕ್ಷದ್ವೀಪದ ಕೆಲವು ಭಾಗಗಳು, ಕೇರಳ, ಕರ್ನಾಟಕದ ಕೆಲವು ಭಾಗಗಳು ಮತ್ತು ತಮಿಳುನಾಡಿನ ಕೆಲವು ಭಾಗಗಳು, ಬಂಗಾಳದ ದಕ್ಷಿಣ ಮತ್ತು ಮಧ್ಯ ಕೊಲ್ಲಿ, ಬಂಗಾಳದ ಉತ್ತರ ಕೊಲ್ಲಿ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಇದೇ ಅವಧಿಯಲ್ಲಿ ಪರಿಸ್ಥಿತಿಗಳು ಮಾನ್ಸೂನ್ ಮಳೆಗೆ ಅನುಕೂಲಕರವಾಗುವ ಸಾಧ್ಯತೆಯಿದೆ. ರಾಜ್ಯದ ವಿವಿದೆಡೆ ಮೇ. 23, 2025…

Read More

ವಿವಿಧ ಇಲಾಖೆಯ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿ

2025-26ನೇ ಸಾಲಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮಾ, ಡಾ.ಬಿ.ಆರ್.ಅಂಬೇಡ್ಕರ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳ 6ನೇ ತರಗತಿಗೆ ಎರಡು ವಿಧಾನಗಳ ಮೂಲಕ ದಾಖಲಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದ್ದು, ಶೇ.50 ಸ್ಥಾನಗಳನ್ನು ಪ್ರವೇಶ ಪರೀಕ್ಷೆ ಮೂಲಕ ದಾಖಲಾತಿ ಹಾಗೂ ಶೇ.50 ರಷ್ಟು ಸ್ಥಾನಗಳನ್ನು ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿ ಮಾಡಿಕೊಳ್ಳುವ ಮೂಲಕ ಅವಕಾಶವನ್ನು ಕಲ್ಪಿಸಲಾಗಿದೆ. ವಿಶೇಷ ವರ್ಗಗಳ: ಸಫಾಯಿ ಕರ್ಮಚಾರಿ, ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್, ಚಿಂದಿ ಆಯುವವರು, ಸ್ಮಶಾನ…

Read More

ವಿಶ್ವ ಸಂಗೀತಚಿಕಿತ್ಸೆ ದಿನಾಚರಣೆ ನಿಮಿತ್ತ “ಸಂಗೀತಕಾರ್ಯಕ್ರಮ”

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ, ಸಂಗೀತಚಿಕಿತ್ಸೆ ವಿಭಾಗಡಿಮ್ಹಾನ್ಸ್ ಹಾಗೂ ಸ್ವಾಮಿ ವಿವೇಕಾನಂದಯೂತ್ ಮೂವಮೆಂಟ್ ಸಹಯೋಗದಲ್ಲಿ ವಿಶ್ವ ಸಂಗೀತಚಿಕಿತ್ಸೆ ದಿನಾಚರಣೆ ನಿಮಿತ್ತ “ಸಂಗೀತಕಾರ್ಯಕ್ರಮ” ವನ್ನು ದಿನಾಂಕ:21.05.2025ರಂದುಡಿಮ್ಹಾನ್ಸ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನುಡಿಮ್ಹಾನ್ಸ್ ಸಂಸ್ಥೆಯನಿರ್ದೇಶಕರಾದಡಾ.ಅರುಣಕುಮಾರ ಸಿ ರವರು ಹಾಗೂ ವೇದಿಕೆಯ ಮೇಲೆ ಇರುವಎಲ್ಲಾ ಮುಖ್ಯ ಅತಿಥಿಗಳೊಂದಿಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.“ಸಂಗೀತವು ಮನಸ್ಸಿಗೆ ಇರುವ ಒಳ್ಳೆಯ ಔಷಧಿ” ಯೆಂದರು.ಇತ್ತೀಚಿನ ದಿನಗಳಲ್ಲಿ ಅನೇಕ ವ್ಯಕ್ತಿಗಳಿಗೆ ಕಾಡುವಆತಂಕ, ಖಿನ್ನತೆ, ಏಕಾಂಗೀತನ ಇವುಗಳಿಗೆ ಸಂಗೀತದಲ್ಲಿಇರುವರಾಗ, ತಾಳ ಮತ್ತು ಭಾವ ಇವುಗಳು…

Read More

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ -2025 ಅವಧಿ ವಿಸ್ತರಣೆ

ಬೆಂಗಳೂರು, ಸರ್ಕಾರದ ಆದೇಶ ದಿನಾಂಕ 2024 ನೇ ನವೆಂಬರ್ 12 ರಲ್ಲಿ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು Empirical Data ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ಸಲ್ಲಿಸಲು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಡಾ: ಹೆಚ್.ಎನ್. ನಾಗಮೋಹನ್ ದಾಸ್ ಇವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿರುತ್ತದೆ. ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ವೈಜ್ಞಾನಿಕ ವರ್ಗೀಕರಣ…

Read More

ಧಾರಡವಾಡದಲ್ಲಿ ಅಮೃತ ಸ್ಟೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿ

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಧಾರವಾಡದಿಂದ ಅಮೃತ್ ಸ್ಟೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಮುನಿರಾಬಾದ್, ಬಾಗಲಕೋಟೆ, ಗದಗ, ಗೋಕಾಕ್ ರಸ್ತೆ ಮತ್ತು ಧಾರವಾಡ ಸೇರಿದಂತೆ ದೇಶದಲ್ಲಿ 103 ಅಮೃತ್ ನಿಲ್ದಾಣಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ರಾಜ್ಯಪಾಲರು, ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023-24ನೇ ಸಾಲಿನಲ್ಲಿ ಅಮೃತ್ ರೈಲು ನಿಲ್ದಾಣ ಯೋಜನೆಯಡಿ 1000 ಕ್ಕೂ ಹೆಚ್ಚು ನಿಲ್ದಾಣಗಳ ಪುನರಾಭಿವೃದ್ಧಿ…

Read More

ಬಾಲ್ಯವಿವಾಹ ಮುಕ್ತ ಧಾರವಾಡ ಜಿಲ್ಲೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸೋಣ; ತಪ್ಪಿತಸ್ಥರಿಗೆ ವಿರುದ್ಧ ಕ್ರಮ ಜರುಗಿಸೋಣ: ಜಿಪಂ ಸಿಇಓ ಭುವನೇಶ ಪಾಟೀಲ

ಧಾರವಾಡ 2024-25 ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 28 ಬಾಲ್ಯ ವಿವಾಹವನ್ನು ತಡೆಗಟ್ಟಿದ್ದಾರೆ. 18 ಎಫ್‍ಐಆರ್ ದಾಖಲಾಗಿವೆ. ಬಾಲ್ಯವಿವಾಹ ಒಂದು ಗಂಭೀರ ಸಾಮಾಜಿಕ ಸಮಸ್ಯೆಯಾಗಿದ್ದು, ಇದನ್ನು ತಡೆಗಟ್ಟಲು ಸರಕಾರ ಮತ್ತು ಜಿಲ್ಲಾಡಳಿತ ಹಲವಾರು ಕ್ರಮಗಳನ್ನು ಕೈಗೊಂಡಿವೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಬಾಲ್ಯವಿವಾಹ ಪದ್ಧತಿ ಕುರಿತು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ, ಮಾತನಾಡಿದರು….

Read More

ಹಲಗತ್ತಿ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಣಿಗೊಂಡ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ಲಲಿತಾ. ಲ. ಹೂಗಾರ, ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಆಯುಷ್ಮಾನ್ ಆರೋಗ್ಯ ಮಂದಿರ ಹಲಗತ್ತಿಯಡಾ. ಬಸಪ್ಪ.ಮಾನಪ್ಪನವರ ಮಾತನಾಡಿಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮನರೇಗಾ ಕೂಲಿಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದ್ದು ಅದರ ಸದುಪಯೋಗ…

Read More