ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಜಾತ್ರಾ ವಿಶೇಷ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವಿಶ್ವಾಸ ವೈದ್ಯ
ಸವದತ್ತಿ ಪಟ್ಟಣದ ಶಾಸಕ ವಿಶ್ವಾಸ ವೈದ್ಯ ರವರ ಗೃಹ ಕಚೇರಿಯಲ್ಲಿ ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ವತಿಯಿಂದ 2023-24 ನೇ ಸಾಲಿನ ವಿಶೇಷ ಜಾತ್ರಾ ಅವಧಿಯಲ್ಲಿ ಶ್ರೀ ಕ್ಷೇತ್ರ ಆಗಮಿಸುವ ಲಕ್ಷಾಂತರ ಭಕ್ತರಿಗಾಗಿ ಕೈಕೊಂಡ ಮೂಲಭೂತ ಸೌಲಭ್ಯಗಳ ಕೂರಿತು ಅಧಿಕಾರಿಗಳೊಂದಿಗೆ ಸಭೆನಡೆಸಿದೆ. ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದ ವಾರ್ಷಿಕ ವಿಶೇಷ ಜಾತ್ರೆಗಳಾದ ಜನೇವರಿ 25 ರ ಬನದ ಹುಣ್ಣಿವೆ ಹಾಗೂ ಫೆಬ್ರುವರಿ-24 ರ ಭಾರತ ಹುಣ್ಣಿವೆ ನಿಮಿತ್ಯ ಪ್ರತಿ ವರ್ಷದ ಜಾತ್ರೆಗಳು ಜನೆವರಿ ತಿಂಗಳ…
