ಪಟ್ಟಣದ ಅಂಚೆ ಸಿಬ್ಬಂದಿಗಳು ಪ್ರಭಾತಪೇರಿ ನಡೆಸಿ ಜನರಲ್ಲಿ ಶುದ್ಧೀಕರಣ ಹಾಗೂ ನೈರ್ಮಲ್ಯದ ಅರಿವು ಮೂಡಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಸ್ವಚ್ಛತೆಯೇ ಸೇವೆ ಅಂಚೆ ಸಪ್ತಾಹ ಅಂಗವಾಗಿ ರಾಮದುರ್ಗ ಪ್ರಧಾನ ಅಂಚೆ ಕಚೇರಿ ಸಿಬ್ಬಂದಿ ಪ್ರಧಾನ ಅಂಚೆ ಕಚೇರಿಯಿಂದ ಪ್ರಭಾತ ಪೇರಿಯೊಂದಿಗೆ ಪಟ್ಟಣದ ವಿವಿಧ ಮಾರ್ಗವಾಗಿ ಸ್ವಚ್ಛ ಭಾರತ ಅಭಿಯಾನ ಬ್ಯಾನರ ಹಿಡಿದು ಜನರಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಮುಂದಾದರು.ಸ್ವಚ್ಛತೆಯೇ ಸೇವೆ ಎಂಬ ಶೀರ್ಷಿಕೆ ಅಡಿಯಲ್ಲಿ ಹಸಿರೇ ಉಸಿರು, ಸ್ವಚ್ಛ ಭಾರತ ಆರೋಗ್ಯಕರ ಭಾರತ, ಸ್ವಚ್ಛ ಭಾರತ ಹಸಿರು ಭಾರತ, ಸ್ವಚ್ಛ ಮತ್ತು ಹಸಿರು ಭಾರತದ ಪರಿಪೂರ್ಣ ಕನಸು,…
